ರಣಹದ್ದು ಚಿತ್ರ ಶೀಘ್ರ ಬಿಡುಗಡೆ
ಕೆ.ಆರ್.ಪುರ,ಏ.೧೫- “ರಣಹದ್ದು” ಎಂಬ ನೂತನ ಕನ್ನಡ ಚಲನ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿ ದ್ದು ಸನಿಹದಲ್ಲಿ ಪ್ರಮುಖ ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರಾದ ಮಾಣಿಕ್ ಜೈ ತಿಳಿಸಿದರು.
ಕ್ಷೇತ್ರದ ಕೆ.ಆರ್.ಇನ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ರಣಹದ್ದು ಚಲನ ಚಿತ್ರದ ಟೀಜರ್ ಬಿಡುಗಡೆ ಮಾಡಿ ಮಾತನಾಡಿದರು. ಈ ಚಿತ್ರವು ಆಕ್ಷನ್ ಕ್ರೈಂ ಥ್ರಿಲ್ಲರ್, ಕಾಮಿಡಿ, ಕಮರ್ಷಿಯಲ್ ಕಥೆಯನ್ನು ಉಳಗೊಂಡಿದ್ದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಐದು ಭಾಷೆಗ ಳಲ್ಲಿ ಸಿದ್ಧವಾಗಿದ್ದು ಬಿಡುಗಡೆಗೊಳ್ಳಲಿದೆ. ರಣಹದ್ದು ಚಿತ್ರದ ಬಿಡುಗಡೆಗೂ ಮುನ್ನವೆ ಮತ್ತೊಂದು ಚಿತ್ರದ ಚಿತ್ರೀಕರಣ ಪ್ರಾರಂಭಿಸಲಾಗಿದೆ ಎಂದರು. ಈ ಚಿತ್ರದಲ್ಲಿ ಹೆಚ್ಚಾಗಿ ಹೊಸ ಪ್ರತಿಭೆಗಳು ನಟಿಸಿದ್ದು ಕನ್ನಡ ಜನತೆ ರಣಹದ್ದು ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಣೆ ಮಾಡುವ ಮೂಲಕ ನಮಗೆ ಪೋಷಣೆ ಮಾಡಿ ಬೆಳೆಸುವಂತೆ ಮನವಿ ಮಾಡಿದರು.
ನಂತರ ನಾಯಕ ನಟರಾದ ಯತೀಶ್ ಮಾತನಾಡಿ ಪಂಚ ಭಾಷೆಗಳಲ್ಲಿ ಸಿದ್ಧವಾಗುತ್ತಿರು ವ ರಣಹದ್ದು ಚಲನ ಚಿತ್ರವು ಚಿತ್ರಿಕರಣದ ಮುಕ್ತಾಯ ಹಂತದಲ್ಲಿದೆ. ಈ ಚಿತ್ರದ ಬಿಡುಗಡೆಗೂ ಮುಂಚಿತವಾಗಿ ಮತ್ತೊಂದು ಚಲನ ಚಿತ್ರದ ಚಿತ್ರೀಕರಣ ಆರಂಭಿಸಿದ್ದು ನನಗೆ ಸಿಕ್ಕಿರುವ ಒಳ್ಳೆಯ ಅವಕಾಶ ಎಂದರು. ಇದು ವರೆವಿಗೂ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಈಗ ರಣಹದ್ದು ಚಿತ್ರ ತೆರೆ ಕಾಣಲಿದೆ. ಕನ್ನಡ ಜನತೆ ಹೊಸ ಪ್ರತಿಭೆಗಳಿಗೆ ಆಶಿರ್ವಾದ ಮಾಡಲು ಚಲನ ಚಿತ್ರ ಮಂದಿರಕ್ಕೆ ಬಂದು ಚಲನ ಚಿತ್ರ ವೀಕ್ಷಣೆ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾವ್ ವಿಜಯಗಲ್ ರವಿ, ರಂಜಿತ್ ಕುಮಾರ್, ಲಿಂಗಡಿತೇರ್, ಮುರುಗೇಶ್ ತಾರೈ ಕೃಷ್ಣನ್, ಮುನಿನಂಜಪ್ಪ, ಜ್ಞಾನೇಶ್ಪರಿ, ಚೈತ್ರ, ವೈಶಾಲಿ ಸೇರಿದಂತೆ ಇತರರು ಹಾಜರಿದ್ದರು.