ಬಿಜೆಪಿ ಸಂಕಲ್ಪ ಪತ್ರ

ಮತ್ತೊಮ್ಮೆ ಮೋದಿ ಘೋಷಣೆಯ ಚುನಾವಣಾ ಪ್ರಣಾಳಿಕೆ, ಭರಪೂರ ಭರವಸೆ
ನವದೆಹಲಿ,ಏ.೧೪- ಒಂದು ದೇಶ ಒಂದು ಚುನಾವಣೆ ಸಾಕಾರದ ಸಂಕಲ್ಪ, ದೇಶಾದ್ಯಾಂತ ಏಕರೂಪ ನಾಗರಿಕ ಸಂಹಿತೆ ಜಾರಿ, ದೇಶದ ನಾಲ್ಕು ದಿಕ್ಕುಗಳಿಗೂ ವಂದೇ ಭಾರತ್ ರೈಲುಗಳ ವಿಸ್ತರಣೆ, ಬಡವರಿಗೆ ಉಚಿತ ಪಡಿತರ, ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ, ಮೂಲ ಸೌಕರ್ಯದ ಅಭಿವೃದ್ಧಿ ಯುವಜನರು, ಮಹಿಳೆಯರು, ಬಡವರು ಮತ್ತು ರೈತರ ಅಭಿವೃದ್ಧಿಗೆ ಒತ್ತು ನೀಡುವ ಭರಪೂಋ ಭರವಸೆಗಳನ್ನು ಒಳಗೊಂಡಿರುವ ಲೋಕಸಭಾ ಚುನಾವಣಾ ಪ್ರಣಾಳಿಕೆಯ ಸಂಕಲ್ಪಪತ್ರವನ್ನು ಬಿಜೆಪಿ ಬಿಜೆಪಿ ಬಿಡುಗಡೆ ಮಾಡಿದೆ.
ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಘೋಷ ವ್ಯಾಕ್ಯದೊಂದಿಗೆ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಮೂಲಕ ಹ್ಯಾಟ್ರಿಕ್ ಮಾಡಬೇಕು ಎನ್ನುವ ಸಂಕಲ್ಪದೊಂದಿಗೆ ಬಿಜೆಪಿ ಭರಪೂರ ಭರವಸೆ ನೀಡುವ “ ಸಂಕಲ್ಪ” ಪತ್ರವನ್ನು ದೇಶದ ಜನರ ಮುಂದಿಟ್ಟಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿ ಪ್ರಣಾಳಿಕೆಯನ್ನು ಸಿದ್ಧಪಡಿಸಿದ ಸಂಕಲ್ಪ ಪತ್ರವನ್ನು ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಪ್ರಣಾಳಿಕೆ ಸಮಿತಿ ಮುಖ್ಯಸ್ಥ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿ ಮುಂದಿನ ಬಾರಿ ಸರ್ಕಾರದ ಅವಧಿಯಲ್ಲಿ ಎಲ್ಲಾ ಭರವಸೆ ಈಡೇರಿಸುವ ವಾಗ್ದಾನ ಮಾಡಿದ್ದಾರೆ.
ವಿಕಸಿತ ಭಾರತದ ನೀಲನಕ್ಷೆ ಎಂದೇ ಈ ಸಂಕಲ್ಪ ಪತ್ರವನ್ನು ಬಣ್ಣಿಸಲಾಗಿದ್ದು, ಭಾರತವನ್ನು ಜಾಗತಿಕ ಮಟ್ಟದಲ್ಲಿ ೩ನೇ ಆರ್ಥಿಕ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ಆಶಯವನ್ನು ಈ ಸಂಕಲ್ಪ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಕಿಸಾನ್ ಸಮ್ಮಾನ್ ಯೋಜನೆ ವಿಸ್ತರಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ , ಜೊತೆಗೆ ಕಿಸಾನ್ ಸಮ್ಮಾನ್ ಯೋಜನೆ ೧೦ ಕೋಟಿ ರೈತರಿಗೆ ವಿಸ್ತರಿಸುವ ಗುರಿ, ಮುಂದಿನ ೫ ವರ್ಷಗಳ ಕಾಲ ಉಚಿತ ಪಡಿತರ ವಿತರಣೆ ಮುಂದುವರಿಕೆ, ಮುದ್ರಾ ಯೋಜನೆ ಸಾಲ ೨೦ ಲಕ್ಷಕ್ಕೆ ಏರಿಕೆ ೭೫ ವರ್ಷ ದಾಟಿದ ಹಿರಿಯ ನಾಗರಿಕರು ಮತ್ತು ಲಿಂಗ ಪರಿವರ್ತಿತರನ್ನು ಆಯಷ್ಮಾನ್ ಯೋಜನೆ ವ್ಯಾಪ್ತಿಗೆ ತರುವುದು ಬಿಜೆಪಿ ಸಂಕಲ್ಪವಾಗಿದೆ ಎಂದು ಹೇಳಿದ್ದಾರೆ
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿನ ಪ್ರಯೋಜನಗಳನ್ನು ಮುಂದಿನ ಅವಧಿಯಲ್ಲಿ ದೇಶದ ೧೦ ಕೋಟಿ ರೈತರಿಗೆ ವಿಸ್ತರಣೆ, ’ರಾಷ್ಟ್ರೀಯ ಸಹಕಾರ ನೀತಿ’ ಜಾರಿ ಮಾಡುವ ಮೂಲಕ ಕ್ರಾಂತಿಕಾರಿ ದಿಕ್ಕಿನಲ್ಲಿ ಹೆಜ್ಜೆ ಹಾಕುವ ಗುರಿ ನಮ್ಮದು ಇದರ ಜೊತೆಗೆ ಭಾರತವನ್ನು ಜಾಗತಿಕ ಪೌಷ್ಟಿಕಾಂಶದ ಕೇಂದ್ರವನ್ನಾಗಿ ಮಾಡಲು ’ಶ್ರೀಅನ್ನ’ಕ್ಕೆ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
೨೧ ನೇ ಶತಮಾನದ ಭಾರತದ ಅಡಿಪಾಯವನ್ನು ಮೂರು ರೀತಿಯ ಮೂಲಸೌಕರ್ಯಗಳ ಮೂಲಕ ಬಲಪಡಿಸಲು ಹೊರಟಿದೆ. ಸಾಮಾಜಿಕ ಮೂಲಸೌಕರ್ಯ, ಡಿಜಿಟಲ್ ಮೂಲಸೌಕರ್ಯ,ಭೌತಿಕ ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ
ಮುದ್ರಾ ಸಾಲ ೨೦ ಲಕ್ಷಕ್ಕೆ ಏರಿಕೆ
ಮುದ್ರಾ ಯೋಜನೆ ಕೋಟ್ಯಂತರ ಜನರನ್ನು ಉದ್ಯಮಿಗಳನ್ನಾಗಿ ಮಾಡಿದೆ. ಮುಂದಿನ ಅವಧಿಯಲ್ಲಿ ೧೦ ಲಕ್ಷದಿಂದ ೨೦ ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ. ಜೊತೆಗೆ ಉದ್ಯಮ ೪.೦ ರ ಯುಗಕ್ಕೆ ಅಗತ್ಯವಾದ ಪರಿಸರ ವ್ಯವಸ್ಥೆ ನಿರ್ಮಿಸಲು ಹೊಸ ಶಕ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.
ಕೋಟ್ಯಂತರ ಕುಟುಂಬಗಳ ವಿದ್ಯುತ್ ಬಿಲ್ ಅನ್ನು ಶೂನ್ಯಕ್ಕೆ ಇಳಿಸಲು ಮತ್ತು ವಿದ್ಯುತ್‌ನಿಂದ ಗಳಿಸುವ ಅವಕಾಶ ಸೃಷ್ಟಿಸಲು ಕೆಲಸ ಮಾಡುತ್ತೇವೆ. ಇದಕ್ಕಾಗಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಜಾರಿ ಮಾಡಲಾಗುವುದು, ವಯೋವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ನಮ್ಮ ಆದ್ಯತೆ ಎಂದಿದ್ದಾರೆ
‘೨೦೨೫ರಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ೧೫೦ನೇ ಜನ್ಮದಿನಾಚರಣೆಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಲಾಗುವುದು, ಇದಕ್ಕಾಗಿ ಬುಡಕಟ್ಟು ಪರಂಪರೆಯ ಸಂಶೋಧನೆಗೆ ಬಿಜೆಪಿ ಉತ್ತೇಜನ ನೀಡಲಿದೆ. ಡಿಜಿಟಲ್ ಜನಜಾತೀಯ ಕಲಾ ಅಕಾಡೆಮಿ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ
ಸ್ಥಿರ ಸರ್ಕಾರ
ವಿಶ್ವದಾದ್ಯಂತ ಅನಿಶ್ಚಿತತೆಯ ಮೋಡ ಕವಿದಿದೆ, ಯುದ್ಧದ ಪರಿಸ್ಥಿತಿ ಇದೆ, ಜಗತ್ತು ಉದ್ವಿಗ್ನವಾಗಿದೆ, ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಭಾರತೀಯರ ಭದ್ರತೆಯಲ್ಲಿ ವಾಸಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಇಂತಹ ಉದ್ವಿಗ್ನತೆಗಳು ಚಾಲ್ತಿಯಲ್ಲಿರುವಾಗ, ಸಂಪೂರ್ಣ ಬಹುಮತದೊಂದಿಗೆ ಬಲವಾದ ಮತ್ತು ಸ್ಥಿರವಾದ ಸರ್ಕಾರ ರಚನೆ ನಮ್ಮ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಸ್ಥಿರ ಸರ್ಕಾರದಿಂದ ದೇಶವನ್ನು ಆರ್ಥಿಕವಾಗಿ ಸಮೃದ್ಧಗೊಳಿಸುತ್ತದೆ, ದೇಶ ’ವಿಕಸಿತ ಭಾರತ್’ ಕಡೆಗೆ ಕೊಂಡೊಯ್ಯುಲ್ಲು ಒತ್ತು ನೀಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ
ದೇಶಾದ್ಯಂತ ವಿಸ್ತರಣೆ
ವಂದೇ ಭಾರತ್‌ನ ೩ ಮಾದರಿಗಳು ದೇಶದಲ್ಲಿ ಓಡಲಿವೆ. ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್ಕಾರ್ ಮತ್ತು ವಂದೇ ಭಾರತ್ ಮೆಟ್ರೋ ಅಹಮದಾಬಾದ್ ಮುಂಬೈ ಬುಲೆಟ್ ರೈಲಿನ ಕಾರ್ಯ ಭರದಿಂದ ಸಾಗುತ್ತಿದ್ದು, ಅದೇ ರೀತಿಯಲ್ಲಿ ಉತ್ತರ ಭಾರತದಲ್ಲಿ ಒಂದು ಬುಲೆಟ್ ರೈಲು, ಪೂರ್ವ ಭಾರತದಲ್ಲಿ ಒಂದು ಬುಲೆಟ್ ರೈಲು ಓಡಲಿದೆ. ಇದಕ್ಕಾಗಿ ಸರ್ವೆ ಕಾರ್ಯವೂ ಶೀಘ್ರ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ
ದೇಶದಾದ್ಯಂತ ಹೆದ್ದಾರಿಗಳು, ರೈಲ್ವೆಗಳು, ವಾಯುಮಾರ್ಗಗಳು ಮತ್ತು ಜಲಮಾರ್ಗಗಳನ್ನು ಆಧುನೀಕರಿಸುತ್ತಿದ್ದೇವೆ, ೫ಜಿ ನೆಟ್‌ವರ್ಕ್ ಅನ್ನು ವಿಸ್ತರಿಸಿದ್ದ ೬ಜಿ ತರಲು ಪ್ರಯತ್ನ ಸೇರಿದಂತೆ ಹತ್ತು ಹಲವಯ ಭರವಸೆಯ ವಾಗ್ದಾನ ಮಾಡಿದ್ದಾರೆ
ಪ್ರಣಾಳಿಕೆ ಪ್ರಮುಖ ಅಂಶ
ಏಕರೂಪ ನಾಗರಿಕ ಸಂಹಿತೆ ಜಾರಿ