ಮೋದಿ ಪ್ರಣಾಳಿಕೆ ಜನ ನಂಬಲ್ಲ
ನವದೆಹಲಿ,ಏ.೧೪- ಕಳೆದ ಹತ್ತು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಹೀಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಜನ ನಂಬುವುದಿಲ್ಲ, ಜೊತೆಗೆ ಬಡಜನರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು. ಇದರ ಜೊತೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಹಾಗು ಅದಕ್ಕೆ ಕಾನೂನು ಭರವಸೆ ನೀಡುವುದಾಗಿ ತಿಳಿಸಿದ್ದರು ಅದನ್ನು ಈಡೇರಿಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಪ್ರಣಾಳಿಕೆ ಸಂಕಲ್ಪ ಪತ್ರ ಬಿಡುಗಡೆಗೆ ತೀಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಅವರು ಕಳೆದ ಹತ್ತು ವರ್ಷದಲ್ಲಿ ಜನರಿಗಾಗಿ ಯಾವುದೇ ದೊಡ್ಡ ಕೆಲಸವನ್ನು ಮಾಡಲಿಲ್ಲ, ದೇಶದ ಎಲ್ಲಾ ಜನರಿಗೆ ಉದ್ಯೋಗವನ್ನು ಹುಡುಕುತ್ತಿದೆ,ಹಣದುಬ್ಬರದ ಬಗ್ಗೆ ಗಮನ ಹರಿಸಿಲ್ಲ ಬಡವರಿಗಾಗಿ ಏನೂ ಮಾಡಿಲ್ಲ ಪ್ರಣಾಳಿಕೆಯನ್ನು ಜನ ನಂಬುವುದಿಲ್ಲ ಎಂದಿದ್ದಾರೆ.
ಅಧಿಕಾರ ಹಿಡಿಯುವ ಮುನ್ನ ದಿಂದ ಆರಂಭಗೊಂಡು ಅಧಿಕಾರ ಹಿಡಿದ ಮೇಲೆಯೂ ಸುಳ್ಳು ಭರವಸೆ ನೀಡುತ್ತಾ ಜನರನ್ನು ಯಾವಾರಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಉಪಯೋಗಕ್ಕೆ ಬಾರದ ಭರವಸೆಗಳನ್ನು ಜನರು ನಂಬುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ದೇಶದ ಬಡಜನರ ಅಭಿವೃದ್ಧಿ ಮತ್ತು ಕಾಳಜಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಬರೀ ಬಾಯಿ ಮಾತಿನ ಮೂಲಕವೇ ಜನರನ್ನು ಮೋಡಿ ಮಾಡುವುದು ಹೆಚ್ಚು ದಿನ ನಡೆಯುವುದಿಲ್ಲ ಎಂದಿದ್ದಾರೆ.