ಕ್ಯೂರ್ ಕೋಡ್‌ನಿಂದ ಮಗು ಪತ್ತೆ
ಮುಂಬೈ,ಏ.೧೩-ಇಂದಿನ ಕಾಲದಲ್ಲಿ ತಂತ್ರಜ್ಞಾನವು ಸಮಾಜದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದಿದೆ. ಇದನ್ನು ಒಳ್ಳೆಯ ಅಥವಾ ಕೆಟ್ಟ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನ ಜಗತ್ತಿನ ಮುಖವನ್ನೇ ಬದಲಿಸಿದೆ. ಇಂತಹದೊಂದು ಪ್ರಕರಣ ಮುಂಬೈನ ವರ್ಲಿಯಿಂದ ಬೆಳಕಿಗೆ ಬಂದಿದ್ದು, ಮಗುವಿನ ಕುತ್ತಿಗೆಗೆ ನೇತಾಡುತ್ತಿದ್ದ ಲಾಕೆಟ್ ನ ಕ್ಯೂಆರ್ ಕೋಡ್ ಬಳಸಿ ಕೆಲವೇ ಗಂಟೆಗಳಲ್ಲಿ ನಾಪತ್ತೆಯಾಗಿದ್ದ ಅಂಗವಿಕಲ ಮಗುವನ್ನು ಆತನ ಮನೆಗೆ ಸುರಕ್ಷಿತವಾಗಿ ಸೇರಿಸಲಾಗಿದೆ.
ಮಧ್ಯಾಹ್ನ ೩ ಗಂಟೆ ಸುಮಾರಿಗೆ ವರ್ಲಿಯಿಂದ ಬಾಲಕ ನಾಪತ್ತೆಯಾಗಿದ್ದ. ರಾತ್ರಿ ೮.೨೦ರ ಸುಮಾರಿಗೆ ಪತ್ತೆಯಾಗಿದೆ.
ಬಾಲಕನನ್ನು ವಿನಾಯಕ ಕೋಲಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನಾಯಕ್ ವರ್ಲಿ ಪ್ರದೇಶದಿಂದ ಆಟವಾಡುತ್ತಿದ್ದಾಗ ಬಸ್ಸಿನಲ್ಲಿ ಕುಳಿತು ಬಸ್ಸಿನಲ್ಲಿಯೇ ಹೊರಟಿದ್ದಾನೆ. ನಂತರ ಕಂಡಕ್ಟರ್ ವಿಚಾರಿಸಿದಾಗ ಆತ ವಿಕಲಚೇತನ ಬಾಲಕ ಎಂದು ಪತ್ತೆ ಹಚ್ಚಿದ ಕಂಡಕ್ಟರ್ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ತಕ್ಷಣವೇ ಬಾಲಕನನ್ನು ಠಾಣೆಗೆ ಕರೆತಂದು ಪೋಲಿಸರು ಬಾಲಕ ಕುತ್ತಿಗೆಯಲ್ಲಿ ಪೆಂಡೆಂಟ್ ಇರುವ ಲಾಕೆಟ್ ನೋಡಿದ್ದಾರೆ ಆ ಲಾಕೆಟ್‌ನಲ್ಲಿ ಕ್ಯೂಆರ್ ಕೋಡ್ ಸಹ ಮುದ್ರಿಸಲಾಗಿದೆ. ಕ್ಯೂರ್ ಕೋಡ್ ಮಗುವಿನ ಕುಟುಂಬವನ್ನು ಸಂಪರ್ಕಿಸುವ ಮಾಹಿತಿಯನ್ನು ಒಳಗೊಂಡಿರುವ ಲಿಂಕ್ ಒಳಗೊಂಡಿದೆ, ಸ್ಕ್ಯಾನಿಂಗ್ ಮಾಡಿದ ನಂತರ ಮಗುವಿನ ಮನೆಯ ವಿಳಾಸ ಮತ್ತು ಫೋನ್ ಸಂಖ್ಯೆ ಎರಡನ್ನೂ ಗುರುತಿಸಲಾಗಿದೆ .
ಅದನ್ನು ಸ್ಕ್ಯಾನ್ ಮಾಡುವ ಮೂಲಕ ಪೊಲೀಸರು ಮಗು ಮತ್ತು ಪೋಷಕರನ್ನು ಒಂದುಗೂಡಿಸಿದ್ದಾರೆ.
ಕೆಲ ನಿಮಿಷಗಳ ನಂತರ ಪೊಲೀಸರು ಮಗುವನ್ನು ಮನೆಯವರಿಗೆ ಹಸ್ತಾಂತರಿಸಿದಾಗ ಎಲ್ಲರ ಕಣ್ಣುಗಳು ತೇವಗೊಂಡಿದ್ದವು.