ತಿಂಗಳಾಂತ್ಯಕ್ಕೆ ಮಸ್ಕ್ ಭಾರತಕ್ಕೆ ಭೇಟಿ
ನವದೆಹಲಿ,ಏ.೧೧- ಸಾಮಾಜಿಕ ವೇದಿಕೆ ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಎಕ್ಸ್ ಮುಖ್ಯಸ್ಥ ಎಲನ್ ಮಸ್ಕ್ ಅವರು, ತಿಂಗಳಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವುದಾಗಿ ಖಚಿತಪಡಿಸಿದ್ದಾರೆ.
ಭಾರತದ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದೇನೆ ಎಂದು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಹೊಸ ಕಾರ್ಖಾನೆ ಆರಂಭ ಮತ್ತು ದೇಶದಲ್ಲಿ ಹೂಡಿಕೆ ಯೋಜನೆಗಳಿಗೆ ಸಂಬಂಧಿಸಿದ ಘೋಷಣೆ ಮಾಡುವ ಸಾಧ್ಯತೆಗಳಿವೆ ಎನ್ನುವ ವರದಿಯ ನಡುವೆ ಟೆಸ್ಲಾ ಎಲೆಕ್ಟ್ರಿಕ್ ವಾಹನ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಎಲನ್ ಮಸ್ಕ್ ಭಾರತ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಭಾರತ ಭೇಟಿಯ ಸಮಯದಲ್ಲಿ ಟೆಸ್ಲಾ ಸಿಇಒ ಇತರ ಕಂಪನಿ ಕಾರ್ಯನಿರ್ವಾಹಕರು ಜೊತೆಗಿರುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಎಲೋನ್ ಮಸ್ಕ್-ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳ ವಾರದಲ್ಲಿ ಭೇಟಿ ನಿರೀಕ್ಷಿಸಲಾಗಿದೆ ಆದರೆ ಎಲೋನ್ ಮಸ್ಕ್ ಭೇಟಿಯ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ.
ಕಳೆದ ವರ್ಷ ಜೂನ್‌ನಲ್ಲಿ ಎಲೋನ್ ಮಸ್ಕ್ ಅವರು ಪ್ರಧಾನಿ ಮೋದಿ ಅವರನ್ನು ಅಮೇರಿಕಾ ಭೇಟಿಯ ವೇಳೆ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆ ಸಮಯದಲ್ಲಿ, ಶತಕೋಟ್ಯಾಧೀಶರ ಎಲನ್ ಮಸ್ಕ್ ಅವರು ೨೦೨೪ ರಲ್ಲಿ ಭಾರತಕ್ಕೆ ಭೇಟಿ ನೀಡುವ ತನ್ನ ಯೋಜನೆ ಕುರಿತು ಮಾಹಿತಿ ನೀಡಿದ್ದರು. ಟೆಸ್ಲಾ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ ನೀತಿ ಘೋಷಿಸಿದ ವಾರಗಳ ನಂತರ ಎಲೋನ್ ಮಸ್ಕ್ ಭಾರತಕ್ಕೆ ಭೇಟಿ ನೀಡಿದ್ದು, ಅದರ ಪ್ರಕಾರ ಕನಿಷ್ಠ ೫೦೦ ದಶಲಕ್ಷ ಡಾಲರ್ ಹೂಡಿಕೆಯೊಂದಿಗೆ ದೇಶದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದ ರಿಯಾಯಿತಿ ನೀಡಲಾಗುತ್ತದೆ.