ಗುಜರಾತ್ ಟೈಟಾನ್ಸಗೆ ರೋಚಕ ಗೆಲುವು
ಜೈಪುರ: ರಶೀದ್ ಖಾನ್ ಅವರ ಆಲ್ರೌಂಡ್ ಪ್ರದರ್ಶನ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಗೆಲುವು ಪಡೆಯಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 196 ರನ್ ಕಲೆ ಹಾಕಿತು. ಗುಜರಾತ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿತು.
197 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಗುಜರಾತ್ ಟೈಟಾನ್ಸಗೆ ಓಪನರ್‍ಗಳಾದ ಸಾಯಿ ಸುದರ್ಶನ್(35 ರನ್) ಮತ್ತು ನಾಯಕ ಶುಭಮನ್ ಗಿಲ್ (72ರನ್) ಮೊದಲ ವಿಕೆಟ್ಗೆ 64 ರನ್ ಸೇರಿಸಿದರು.ಮ್ಯಾಥ್ಯು ವೇಡ್ 4, ಅಭಿನವ್ ಮನೋಹರ್ 1, ವಿಜಯ್ ಶಂಕರ್ 16, ರಾಹುಲ್ ತೆವಾಟಿಯಾ 16, ಶಾರುಖ್ ಖಾನ್ 14, ರಶೀದ್ ಖಾನ್ ಅಜೇಯ 24 ರನ್ ಹೊಡೆದರು. ಕೊನೆ ಓವರ್ ನಲ್ಲಿ ಟೈಟಾನ್ಸ್ಗೆ 17 ರನ್ ಬೇಕಿತ್ತು. ರಶೀದ್ ಖಾನ್ 2 ಬೌಂಡರಿ ಹೊಡೆದರು. ಕೊನೆಯ ಎಸೆತದಲ್ಲಿ ಬೌಂಡರಿ ಹೊಡೆದರು ರೋಚಕ ಗೆಲುವು ತಂದುಕೊಟ್ಟರು.ರಾಜಸ್ಥಾನ ಪರ ಕುಲ್ದೀಪ್ ಸೇನ್ 41ಕ್ಕೆ 3, ಚಾಹಲ್ 43 ಕ್ಕೆ 2, ಆವೇಶ್ ಖಾನ್ 48ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 24, ಜೋಸ್ ಬಟ್ಲರ್ 8, ಸಂಜು ಸ್ಯಾಮ್ಸನ್ (68 ರನ್), ರಿಯಾನ್ ಪರಾಗ್ (76 ರನ್) ಮೂರನೆ ವಿಕೆಟ್ಗೆ 130 ರನ್ ಕಲೆ ಹಾಕಿತು. ನಾಯಕ ಸಂಜು ಸ್ಯಾಮ್ಸನ್ 38 ಎಸೆತದಲ್ಲಿ 7 ಬೌಂಡರಿ, 2 ಸಿಕ್ಸರ್ ಸೇರಿ ಅಜೇಯ 68 ರನ್ ಹೊಡೆದರು. ರಿಯಾನ್ ಪರಾಗ್ 48 ಎಸೆತ 3 ಬೌಂಡರಿ ಮತ್ತು 5 ಸಿಕ್ಸರ್ ಸೇರಿ 76 ರನ್ ಹೊಡೆದರು. ಶಿಮ್ರಾನ್ ಹೇಟ್ಮಯರ್ ಅಜೇಯ 13 ರನ್ ಹೊಡೆದರು.
ಗುಜರಾತ್ ಪರ ಉಮೇಶ್ ಯಾದವ್ 47ಕ್ಕೆ 1, ರಶೀದ್ ಖಾನ್ 18ಕ್ಕೆ 1 ಮತ್ತು ಮೋಹಿತ್ ಶರ್ಮಾ 51ಕ್ಕೆ 1 ವಿಕೆಟ್ ಪಡೆದರು.