ಬಿಸಿಲಿನ ಶಾಖದಿಂದ ಜಿಲ್ಲೆಯಲ್ಲಿ 7 ಸೌಮ್ಯಪ್ರಮಾಣದಿಂದ ಬಳಲಿದ ಪ್ರಕರಣ ಪತ್ತೆ
ಕಲಬುರಗಿ,ಏ.07:ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಬಿಸಿಲಿನ ಶಾಖದಿಂದ 7 ಸೌಮ್ಯ (miಟಜ) ಪ್ರಮಾಣದಿಂದ ಬಳಲಿದ ಪ್ರಕರಣವು ಪತ್ತೆಯಾಗಿವೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಅಧಿಕಾರಿಗಳಾದ ಡಾ. ರತಿಕಾಂತ ವ್ಹಿ ಸ್ವಾಮಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ತಾಪಮಾನವು ಹೆಚ್ಚಾಗಿದ್ದರೂ ಕೂಡಾ ಯಾವುದೆ ತೆರೆನಾದ ಅಹಿತಕರ ಘಟನೆಗಳು ಘಟಿಸಿಲ್ಲ. ಬಿಸಿಲ ಶಾಖದ ತಾಮಾನದಿಂದ ಜಿಲ್ಲೆಯಲ್ಲಿ ಈವರೆಗೆ 7 ಸೌಮ್ಯ (miಟಜ) ಪ್ರಕರಣಗಳು ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮಟ್ಟದಲ್ಲಿ ದಾಖಲಾಗಿ ಅಲ್ಲಿಯೇ ಚಿಕಿತ್ಸೆಯನ್ನು ತೆಗೆದುಕೊಂಡು ಗುಣಮುಖರಾಗಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಬೇಸಿಗೆಯ ತಾಪಮಾನದ ಏರಿಕೆಯು ಹೆಚ್ಚಾಗುತ್ತಿದ್ದು, ಕಲಬುರಗಿಯಲ್ಲಿಯೂ ಕೂಡಾ ಕಳೆದ ಒಂದು ವಾರದಿಂದ ಹೆಚ್ಚಿನ ತಾಪಮಾನವು ದಾಖಲಾಗಿದ್ದು, ಜಿಲ್ಲೆಯ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಕಲಬುರಗಿ ಜಿಲ್ಲಾಧಿಕಾರಿಗಳು ಮಾಧ್ಯಮದ ಮೂಲಕ ತಿಳಿಸಿದ್ದು, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಈ ವಿಷಯದಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಸೂಚಿಸಿದರು.
ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಬಿಸಿಲಿನ ತಾಪಮಾನವು ಇದೆ ತೆರನಾಗಿ ಮುಂದುವರೆಯಲಿದ್ದು, ಸಾರ್ವಜನಿಕರು, ಮಕ್ಕಳು, ಗರ್ಭಿಣಿಯರು, ಇನ್ನೂ ಹೆಚ್ಚಿನ ರೀತಿಯಲ್ಲಿ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಬಿಸಿಲಿನ ತಾಪಮಾನದಿಂದ ಆರೋಗ್ಯದಿಂದ ಯಾವುದೆ ತೆರನಾದ ಬದಲಾವಣೆಗಳು ಕಂಡುಕೊಂಡಿದಲ್ಲಿ ಸಮೀಪದ ಸರ್ಕಾರಿ ಆರೋಗ್ಯಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಡಿ.ಹೆಚ್.ಓ. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.