ಉದ್ಯೋಗಿಗಳ ಸುರಕ್ಷತೆಗೆ ಒತ್ತು: ಎಲೋನ್
ನವದೆಹಲಿ,ಏ.೧೦- ಬ್ರೆಜಿಲ್ ನ್ಯಾಯಾಂಗದೊಂದಿಗೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಉದ್ಯೋಗಿಗಳ ಸುರಕ್ಷತೆಗೆ ಒತ್ತು ನೀಡುವುದಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ( ಈ ಹಿಂದಿನ ಟ್ವಿಟರ್) ಮಾಲೀಕ ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ.
ಈ ನಡುವೆ ಕೆಲವು ಎಕ್ಸ್ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಬ್ರೆಜಿಲ್‌ನಲ್ಲಿರುವ ತನ್ನ ಉದ್ಯೋಗಿಗಳನ್ನು “ಸುರಕ್ಷಿತ ಸ್ಥಳಕ್ಕೆ” ಸ್ಥಳಾಂತರಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ರೆಜಿಲ್‌ನಲ್ಲಿರುವ ಎಕ್ಸ್ ಬಳಕೆದಾರರು ವರ್ಚುವಲ್ ಖಾಸಗಿ ನೆಟ್‌ವರ್ಕ್- ವಿಪಿಎನ್ ಮೂಲಕ ಮೈಕ್ರೋ ಬ್ಲಾಗಿಂಗ್ ವೇದಿಕೆ ಪ್ರವೇಶಿಸಬೇಕು ಎನ್ನುವ ಅವರು ಶಿಫಾರಸು ಮಾಡಿದ ಒಂದು ದಿನದ ಎಲೋನ್ ಮಸ್ಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರೆಜಿಲ್‌ನಲ್ಲಿರುವ ಸಂಸ್ಥೆಯ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿವೆ ಎಂದು ತಂತ್ರಜ್ಞಾನ ಸಂಸ್ಥೆಯ ದೈತ್ಯ , ಶತಕೋಟ್ಯಾಧೀಶ್ವರ ಎಲನ್ ಮಸ್ಕ್ ಟ್ಟಿಟ್ಟರ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ.
ಬ್ರೆಜಿಲ್‌ನಲ್ಲಿ ಎಕ್ಸ್‌ನ ಕೆಲವು ಖಾತೆಗಳನ್ನು ಅಮಾನತುಗೊಳಿಸುವ ಬಗ್ಗೆ ಭಿನ್ನಾಭಿಪ್ರಾಯ ಹೊಂದಲಾಗಿದೆ. ಬ್ರೆಜಿಲಿಯಲ್ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಲೆಕ್ಸಾಂಡ್ರೆ ಡಿ ಮೊರೇಸ್ ತಪ್ಪು ಮಾಹಿತಿ ಹರಡುವ ಶಂಕಿತ ಖಾತೆಗಳನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರನ್ನು ಬೆಂಬಲಿಸುವ ಮಂದಿ ಮತ್ತು ಅವರನ್ನು ಹಿಂಬಾಲಿಸುವುದು “ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವು ಜನಪ್ರಿಯ ಎಕ್ಸ್ ಖಾತೆಗಳನ್ನು ನಿರ್ಬಂಧಿಸಲು ಸುಪ್ರೀಂ ಕೋರ್ಟ್ ಆದೇಶವನ್ನು ಎಲನ್ ಮಸ್ಕ್ ಪ್ರಶ್ನಿಸಿದ್ದು ಬ್ರೆಜಿಲ್‌ನಲ್ಲಿ ತಮ್ಮ ಕಚೇರಿಯನ್ನು ಮುಚ್ಚುವ ಸ್ಥಿತಿ ಎದುರಾದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.