ಅಂತೂ ಇಂತೂ ಮೊದಲ ಪಂದ್ಯ ಗೆದ್ದ ಮುಂಬೈ
ಮುಂಬೈ: ಅಂತೂ ಇಂತೂ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಗೆಲುವು ದಾಖಲಿಸಿದೆ. ರೊಮಾರಿಯೊ ಶೆಫಾರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹಾರ್ದಿಕ್ ಪಡೆ 29 ರನ್ಗಳ ಗೆಲುವು ದಾಖಲಿಸಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್ ಗಲಿಸಿತು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 205 ರನ್ ಕಲೆ ಹಾಕಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ತಂಡಕ್ಕೆ ಓಪನರ್ಗಳಾದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ಗೆ 80 ರನ್ ಸೇರಿಸಿದರು. ರೋಹಿತ್ ಶರ್ಮಾ (49ರನ್, 27 ಎಸೆತ, 6 ಬೌಂಡರಿ, 3 ಸಿಕ್ಸರ್) ಅಕ್ಷರ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆದರು. ಸೂರ್ಯ ಕುಮಾರ್ ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು. ಇಶಾನ್ ಕಿಶನ್ ಅವರು ಅಕ್ಷರ್ಗೆ ಕಾಟ್ ಅಂಡ್ ಬೌಲ್ಡ್ ಆದರು. ತಿಲಕ್ ವರ್ಮಾ 6 ರನ್ ಗಳಿಸಿ ಪೆವಿಲಿಯನ್ ಸೇರಿದರು. ಐದನೆ ವಿಕೆಟ್ಗೆ ಜತೆಗೂಡಿದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಟಿಮ್ ಡೇವಿಡ್ 60 ರನ್ ಜತೆಯಾಟ ನೀಡಿ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು. ಹಾರ್ದಿಕ್ ಪಾಂಡ್ಯ (33 ಎಸೆತ, 39 ರನ್, 3 ಬೌಂಡರಿ, 4 ಸಿಕ್ಸರ್) ನೋರ್ಟ್ಜೆಗೆ ಬಲಿಯಾದರು. ಕೊನೆಯಲ್ಲಿ ಬಂದ ರೊಮಾರಿಯೊ ಶೆಫಾರ್ಡ್ 10 ಎಸೆತದಲ್ಲಿ 3 ಬೌಂಡರಿ, 4 ಸಿಕ್ಸರ್ ಹೊಡೆದು ಅಜೇಯ 39 ರನ್ ಹೊಡೆದರು. ಟಿಮ್ ಡೇವಿಡ್ (21 ಎಸೆತ, 45ರನ್, 2ಬೌಂಡರಿ, 4ಸಿಕ್ಸರ್0 ಹೊಡೆದರು.
ಡೆಲ್ಲಿ ಪರ ನೋರ್ಟ್ಜೆಗೆ 65ಕ್ಕೆ 2, ಅಕ್ಷರ್ ಪಟೇಲ್ 35ಕ್ಕೆ 2, ಖಲೀಲ್ ಅಹ್ಮದ್ 39ಕ್ಕೆ 1 ವಿಕೆಟ್ ಪಡೆದರು.
235 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ಕ್ಯಾಟಪಿಲ್ಸ್ ಡೇವಿಡ್ ವಾರ್ನ್ರ್ (10 ರನ್) ಆರಂಭಿಕ ಆಘಾತ ಅನುಭವಿಸಿತು. ಪೃಥ್ವಿ ಶಾ ಜತೆಗೂಡಿದ ಅಭಿಷೇಕ್ ಪೊರೆಲ್ 88 ರನ್ ಜತೆಯಾಟ ನೀಡಿದರು. ಅಭಿಷೇಕ ಪೊರೆಲ್ 41 ರನ್, 31 ಎಸೆತದಲ್ಲಿ ಅರ್ಧ ಶತಕ ಹೊಡೆದ ಪೃಥ್ವಿ ಶಾ (66ರನ್) ಅವರು ಬುಮ್ರಾಗೆ ಬಲಿಯಾದರು. ನಂತರ ಬಂದ ರಿಷಬ್ ಪಂತ್ 1, ಅಕ್ಷರ್ ಪಟೇಲ್ 8, ಲಲಿತ್ ಯಾದವ್ 3, ಕುಮಾರ್ 0, ರಿಚಡ್ರ್ಸ್ನ್ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿ ಹೋರಾಟ ಮಾಡಿದ ಟ್ರಿಸ್ಟನ್ ಸ್ಟಬ್ಸ್ ಅಜೇಯ 71 ರನ್ ಹೊಡೆದರು.
ಮುಂಬೈ ಪರ ಗೆರಾಲ್ಡ್ ಕೋಟ್ಜೆ 34ಕ್ಕೆ 4 ವಿಕೆಟ್, ಬುಮ್ರಾ 22ಕ್ಕೆ 2, ರೊಮಾರಿಯೊ ಶೆಫಾರ್ಡ್ 54ಕ್ಕೆ 1 ವಿಕೆಟ್ ಪಡೆದರು.