ಅಪಾರ್ಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡ ಅದಾಶರ್ಮ
ಮುಂಬೈ,ಏ.೬-ಕಳೆದ ವರ್ಷ, ನಟಿ ಅದಾ ಶರ್ಮಾ ಅವರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಪಾರ್ಟ್‌ಮೆಂಟ್ ಹೊರಗೆ ಕಾಣಿಸಿಕೊಂಡಿದ್ದಾರೆ.
ನಟಿ ಅದಾ ಶರ್ಮಾ ಮುಂಬೈನ ಮಾಂಟ್ ಬ್ಲಾಂಕ್ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಲಿದ್ದಾರೆ ಎನ್ನಲಾಗಿದೆ.
ಅದು ೨೦೨೦ ರಲ್ಲಿ ಸುಶಾಂತ್ ನಿಧನ ಹೊಂದುವ ಮೊದಲು ವಾಸಿಸುತ್ತಿದ್ದ ಅದೇ ಮನೆ ಎನ್ನಲಾಗಿದೆ. ಇದಾದ ನಂತರ ನಟಿ ಆ ಮನೆಯನ್ನು ಖರೀದಿಸಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಇದೀಗ, ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಕೆದಕಿದ್ದಾಗ ಅದಾ ಅವರು, ಸೂಕ್ತ ಸಮಯ ಬಂದಾಗ ಈ ವಿಷಯದ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದು ನಟಿ ಹೇಳಿದ್ದಾರೆ.ಹೊಸ ಮನೆಯ ಖರೀದಿ ವಿಷಯದಲ್ಲಿ ಗೌಪ್ಯತೆ ಕಾಪಾಡಲು ಬಯಸುತ್ತೇನೆ ಎಂದು ಆದಾ ಶರ್ಮಾ ಹೇಳಿದ್ದಾರೆ. ನನ್ನ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂದರ್ಶನದಲ್ಲಿ, ಅಪಾರ್ಟ್ಮೆಂಟ್ ಖರೀದಿಸುವ ಪ್ರಶ್ನೆಗೆ ಉತ್ತರಿಸಿದ ಅದಾ ಶರ್ಮಾ, ’ಸದ್ಯ ನಾನು ಎಲ್ಲರ ಹೃದಯದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಈಗ ಮಾತನಾಡಲು ಸರಿಯಾದ ಸಮಯ ನಾನು ಆ ಸ್ಥಳವನ್ನು ನೋಡಲು ಹೋದಾಗ, ಮಾಧ್ಯಮದ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಯಿತು. ನಾನು ಖಾಸಗಿ ವ್ಯಕ್ತಿ. ನಾನು ನನ್ನ ಚಲನಚಿತ್ರಗಳಿಗಾಗಿ ಸಾರ್ವಜನಿಕರ ದೃಷ್ಟಿಯಲ್ಲಿ ಇರಲು ಇಷ್ಟಪಡುತ್ತೇನೆ. ಆದರೆ ನಾನು ಯಾವಾಗಲೂ ಖಾಸಗಿಯಾಗಿರುತ್ತೇನೆ. ನಾನು ನನ್ನ ಗೌಪ್ಯತೆಯನ್ನು ರಕ್ಷಿಸುತ್ತೇನೆ ಎಂದಿದ್ದಾರೆ.
ಆನ್‌ಲೈನ್‌ನಲ್ಲಿ ಜನರು ಸುಶಾಂತ್ ಅವರ ಅಪಾರ್ಟ್ಮೆಂಟ್ ಬಗ್ಗೆ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಅದಾ ಶರ್ಮಾ ಹೇಳಿದ್ದಾರೆ. ಇನ್ನು ಈ ಜಗತ್ತಿನಲ್ಲಿ ಇಲ್ಲದ ವ್ಯಕ್ತಿಯ ಬಗ್ಗೆ ಗಾಸಿಪ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ. ಅದಾ, ನನಗೆ ತುಂಬಾ ಗೌರವವಿರುವ ನಟ ಅವರು. ನೀವು ನನ್ನನ್ನು ಟ್ರೋಲ್ ಮಾಡಬಹುದು ಆದರೆ ಅಸ್ತಿತ್ವದಲ್ಲಿಲ್ಲದವರನ್ನು ಟ್ರೋಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಸುಶಾಂತ್ ಅವರ ಫ್ಲಾಟ್ ಮುಂಬೈನ ಮಾಂಟ್ ಬ್ಲಾಂಕ್ ಅಪಾರ್ಟ್ ಮೆಂಟ್ ನಲ್ಲಿದೆ. ೪ ಬಿಎಚಕೆ ಫ್ಲಾಟ್‌ನ ಸ್ಥಳವು ಅತ್ಯುತ್ತಮವಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬೈ ಪಶ್ಚಿಮದ ಕಾರ್ಟರ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ೬ ನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಅದಾ ಶರ್ಮಾ ಕೊನೆಯದಾಗಿ ’ಬಸ್ತರ್: ದಿ ನಕ್ಸಲ್ ಸ್ಟೋರಿ’ ನಲ್ಲಿ ಕಾಣಿಸಿಕೊಂಡಿದ್ದಾರೆ.