ದಿ. ಕೇರಳ ಸ್ಟೋರಿ ಪ್ರಸಾರಕ್ಕೆ ಪಿಣರಾಯಿ ಖಂಡನೆ
ತಿರುವನಂತಪುರಂ,ಏ.೫- ‘ದಿ ಕೇರಳ ಸ್ಟೋರಿ’ ಚಿತ್ರವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ನಿರ್ಧರಿಸಿದ ಕ್ರಮವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ.
ದೇಶದ ರಾಷ್ಟ್ರೀಯ ವಾಹಿಯ ದೂರದರ್ಶನ ಬಿಜೆಪಿ ಮತ್ತು ಆರೆಸ್‌ಎಸ್‌ಗೆ “ಪ್ರಚಾರ ಯಂತ್ರ” ಆಗಬೇಡಿ. “ಕೇರಳ ಸ್ಟೋರಿ” ಚಿತ್ರ ಪ್ರಸಾರ ಮಾಡುವ ನಿರ್ಧಾರ ಮರು ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ.
ದೂರದರ್ಶನ ವಾಹಿನಿ ವಿವಾದಾತ್ಮಕ ಚಲನಚಿತ್ರವನ್ನು ಪ್ರದರ್ಶಿಸುವುದರಿಂದ ಅದನ್ನು ವೀಕ್ಷಿಸುವ ಜನರ ಸಂಖ್ಯೆ ಕಡಿಮೆಯಾಗಬಹುದು, ರಾಷ್ಟ್ರೀಯ ಸುದ್ದಿ ಸಂಸ್ಥೆಯಾಗಿ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬೇಡಿ ಎಂದಿದ್ದಾರೆ.
ಲೋಕಸಭೆ ಚುನಾವಣೆಯ ಸಮಯಲ್ಲಿ “ಕೋಮು ಉದ್ವಿಗ್ನತೆಯನ್ನು ಉಲ್ಬಣಗೊಳಿಸುತ್ತದೆ” ಇದಕ್ಕೆ ಸರ್ಕಾರಿ ದೂರದರ್ಶನ ವಾಹಿನಿ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದ್ದಾರೆ.
ಧ್ರುವೀಕರಣವನ್ನು ಪ್ರಚೋದಿಸುವ ’ಕೇರಳ ಸ್ಟೋರಿ’ ಚಲನಚಿತ್ರವನ್ನು ಪ್ರಸಾರ ಮಾಡಲು ದೂರದರ್ಶನ ನ್ಯಾಷನಲ್ ನಿರ್ಧಾರ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ.ಬಿಜೆಪಿ-ಆರೆಸ್‌ಎಸ್ ಒಗ್ಗೂಡಿಸಿ ಪ್ರಚಾರ ಯಂತ್ರವಾಗಬಾರದು ಮತ್ತು ಉಲ್ಬಣಗೊಳ್ಳಲು ಬಯಸುವ ಚಲನಚಿತ್ರ ಪ್ರದರ್ಶಿಸುವುದರಿಂದ ಹಿಂದೆ ಸರಿಯಬೇಕು ಎಂದಿದ್ದಾರೆ.
“ದ್ವೇಷವನ್ನು ಬಿತ್ತುವ ಇಂತಹ ದುರುದ್ದೇಶಪೂರಿತ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಕೇರಳ ದೃಢವಾಗಿ ಉಳಿಯುತ್ತದೆ” ಹೀಗಾಗಿ ಯಾವುದೇ ಕಾರಣಕ್ಕೂ ಇಂದು ಪ್ರಸಾರ ಮಾಡಲು ಉದ್ದೇಶಿಸಿರುವ ಚಿತ್ರ ಪ್ರಸಾರ ಮಾಡಬೇಡಿ ಎಂದಿದ್ದಾರೆ.
ಜಾತ್ಯತೀತ ಕೇರಳ ಸಮಾಜವನ್ನು “ಧ್ರುವೀಕರಿಸುವ ಬಿಜೆಪಿಯ ಪ್ರಯತ್ನ” ದೊಂದಿಗೆ ನಿಲ್ಲದಂತೆ ಅವರು ಕೇಳಿಕೊಂಡಿದ್ದು ಕೇರಳದಲ್ಲಿ ಕಾಲಿಡಲು ಸಾಧ್ಯವಾಗದೆ ತಮ್ಮ ರಾಜಕೀಯ ಅಜೆಂಡಾವನ್ನು ಮುನ್ನಡೆಸುವ ಆಶಯದೊಂದಿಗೆ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ವಿವಾದಾತ್ಮಕ ಚಲನಚಿತ್ರವನ್ನು ಪ್ರದರ್ಶಿಸಲು ಬಿಜೆಪಿ ನಿರ್ಧರಿಸಿದೆ ಎಂದು ಆರೋಪಿಸಿದ್ದಾರೆ.