ಬಳ್ಳಾರಿ ವಿಎಸ್ ಕೆ ವಿವಿಗೆ ಪ್ರಭಾರಿ ಕುಲಪತಿಗಳಾಗಿ ಮಲಶೆಟ್ಟಿ ನೇಮಕ‌
ಬಳ್ಳಾರಿ: ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯನ್ನಾಗಿ ಶುದ್ಧ ವಿಜ್ಞಾನ ನಿಕಾಯದ ಡೀನ್ ಪ್ರೊ. ವಿಜಯಕುಮಾರ ಬಿ. ಮಲಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ಮಾರ್ಚ್ 5 ರಂದು ಅಂದರೆ ಕಳೆದ ಒಂದು ತಿಂಗಳ ಹಿಂದೆ ಅಷ್ಟೇ ಈ ವಿವಿಗೆ ನೂತನ ಕುಪತಿಗಳಾಗಿ ಪ್ರೊ.ಕೆ.ಎಂ.ಮೇತ್ರಿ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದರು.
ಆದರೆ ಇವರ ವಿರುದ್ದ ಪ್ರೊ.ಮುನಿರಾಜು ಎಂಬುವವರು ಮೇತ್ರಿ ಅವರು ಗೊಂಡ ಕುರುಬ ಎಂದು ಎಸ್ಟಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ನೇಮಕಾತಿ ಪಡೆದಿದ್ದಾರೆಂದು ನ್ಯಾಯಾಲಯದಲ್ಲಿ ಪ್ರಕರಣ ಇರುವುದನ್ನು ಮರೆಮಾಚಿದ್ದಾರೆಂದು ಬೆಂಗಳೂರಿನ ಹೈ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ರಾಜ್ಯಪಾಲರು ಮಾಡಿದ್ದ ಮೇತ್ರಿ ಅವರ ನೇಮಕಕ್ಕೆ ತಡೆಯಾಜ್ಞೆ ನೀಡಿರುವುದರಿಂದ. ರಾಜ್ಯಪಾಲರೇ ಇಂದು ಪ್ರಭಾರಿ ಕುಲಪತಿಗಳನ್ನು ನೇಮಕ‌ಮಾಡಿ ಆದೇಶ ಹೊರಡಿಸಿದ್ದಾರೆ.