ಕಚ್ಚ ತೀವು ಮುಗಿದ ಅಧ್ಯಾಯ: ಶ್ರೀಲಂಕಾ
ಕೊಲೊಂಬೋ,ಏ.೪- ಕಚ್ಚತೀವು ದ್ವೀಪದ ಸಮಸ್ಯೆ ೫೦ ವರ್ಷಗಳ ಹಿಂದೆಯೇ ಬಗೆಹರಿದಿದೆ. ಈಗ ಆ ವಿಷಯ ಕೆದಕುವುದರಲ್ಲಿ ಅರ್ಥವಿಲ್ಲ ಎಂದು ಶ್ರೀಲಂಕಾ ಹೇಳಿದೆ.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಭಾರತ-ಶ್ರೀಲಂಕಾ ನಡುವೆ ಇರುವ ಕಚ್ಚತೀವು ದ್ವೀಪದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿವಾದದ ಕುರಿತು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಈ ಸ್ಪಷ್ಟನೆ ನೀಡಿದ್ದಾರೆ
ಕಚ್ಚತೀವು ದ್ವೀಪದ ಸಮಸ್ಯೆಯನ್ನು ಭಾರತ ಮತ್ತು ಶ್ರೀಲಂಕಾ ಐದು ದಶಕಗಳ ಹಿಂದೆಯೇ ಬಗೆ ಹರಿಸಿಕೊಂಡಿವೆ. ಈಗ ಆ ಬಗ್ಗೆ ಮರು ಪರಿಶೀಲನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ
ಇಫ್ತಾರ್ ಔತಣಕೂಟದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಲಿ ಸಬ್ರಿ , ಕಚ್ಚತೀವು ದ್ವೀಪದ ಬಗ್ಗೆ ಸದ್ಯ ಯಾವುದೇ ವಿವಾದವಿಲ್ಲ. ಯಾಕಾಗಿ ಈಗ ವಿವಾದ ಮಾಡುತ್ತಿದ್ದಾರೆ ಎನ್ನುವುದು ಸೂಕ್ಷ್ಮವಾಗಿ ಅರಿವಾಗಿರಬೇಕು ಎಂದು ಹೇಳಿದ್ದಾರೆ.
ಕಚ್ಚತೀವು ದ್ವೀಪದ ಬಗ್ಗೆ ೫೦ ವರ್ಷಗಳ ಬಳಿಕ ವಿಷಯ ಪ್ರಸ್ತಾಪ ಮಾಡಲಾಗಿದೆ. ಈ ಬಗ್ಗೆ ಆಂತರಿಕ ರಾಜಕೀಯ ಚರ್ಚೆ ನಡೆಸುತ್ತಿದ್ದಾರೆ. ಅದನ್ನು ಬಿಟ್ಟರೆ ಯಾರೂ ಕಚ್ಚತೀವು ಹಕ್ಕು ಶ್ರೀಲಂಕಾಗೆ ಸೇರಿದ್ದು ಅದರ ಬಗ್ಗೆ ಯಾರೂ ಮಾತನಾಡುವ ಅಗತ್ಯವಿಲ್ಲ ಎಂದಿದ್ಧಾರೆ
ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ನಂತರ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರಗಳು ಶ್ರೀಲಂಕಾದ ಒತ್ತಡದಿಂದ ದ್ವೀಪವನ್ನು ಬಿಟ್ಟುಕೊಟ್ಟಿವೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ಬಗೆ ಹರಿದಿರುವ ಸಮಸ್ಯೆಯನ್ನು ಮತ್ತೆ ಕೆದಕುವುದು ಸರಿಯಲ್ಲ ಎಂದಿದ್ದಾರೆ.
ಚೀನಾದ ಪ್ರಚೋದನೆಯ ಹಿನ್ನೆಲೆಯಲ್ಲಿ ತಮ್ಮ ಮೌನದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ “ಸುಳ್ಳು ನಿರೂಪಣೆ” ಮಾಡುತ್ತಿದ್ದಾರೆ ಎಂದು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.