ಆಂತರಿಕ ಸರ್ವೆಯಿಂದ ಬಿಜೆಪಿಗೆ ಆತಂಕಶಾ ವಿರುದ್ಧ ಸಚಿವ ಪ್ರಿಯಾಂಕ್ ವಾಗ್ದಾಳಿ
ಕಲಬುರಗಿ,ಏ.3: ಬಿಜೆಪಿ ದೇಶಾದ್ಯಂತ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಈ ಬಾರಿ ಆ ಪಕ್ಷಕ್ಕೆ ಕೇವಲ 200 ಸ್ಥಾನಗಳು ಲಭಿಸಲಿವೆ ಎಂಬ ವರದಿ ಬಂದಿರುವ ಹಿನ್ನೆಲೆಯಲ್ಲಿ ಗೃಹ ಸಚಿವಅಮಿತ್ ಶಾ ಭೀತಿಗೆ ಒಳಗಾಗಿ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿಕೊಂಡು ಓಡಾಡುತ್ತಿದ್ದಾರೆಎಂದುಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಹಾಗೂ ಕಲಬುರಗಿಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್‍ಖರ್ಗೆ ಟೀಕಿಸಿದರು.
ಇಲ್ಲಿನಜಿಲ್ಲಾಕಾಂಗ್ರೆಸ್‍ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ಜರ್ಮನಿಯ ಹಿಟ್ಲರ್ ಸರಕಾರದಲ್ಲಿ ಸುಳ್ಳುಗಳನ್ನೇ ಸತ್ಯಎಂದು ಹೇಳಿಕೊಂಡು ತಿರುಗಾಡಲುಗೋಬೆಲ್ಸ್‍ಎನ್ನುವ ಮಂತ್ರಿಯೊಬ್ಬನಿದ್ದ. ಅದೇಧಾಟಿಯಲ್ಲಿಅಮಿತ್ ಶಾ ಕರ್ನಾಟಕ ಭೇಟಿ ವೇಳೆ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆಎಂದು ದಾಳಿ ನಡೆಸಿದರು.
ಕೇಂದ್ರ ಸರಕಾರಕ್ಕೆಕರ್ನಾಟಕ ಸರಕಾರವಿಳಂಬವಾಗಿ ಬರಪರಿಹಾರದ ಮನವಿ ಸಲ್ಲಿಸಿದೆ ಎಂದು ಶಾ ಹೇಳಿದ್ದಾರೆ. ಅಮಿತ್ ಶಾಅವರಿಗೆ ನಾಚಿಕೆಯಾಗಬೇಕು.ಅವರುರಾಜ್ಯದಜನತೆ ಮುಂದೆ ಸುಳ್ಳು ಹೇಳಿದ್ದಾರೆ.ಅಕ್ಟೋಬರ್ 31 ರೊಳಗೆ ಬರಘೋಷಣೆಮಾಡಬೇಕು ಎಂಬನಿಯಮವಿದೆ.ಅದಾದಬಳಿಕ ಕೇಂದ್ರ ಬರಅಧ್ಯಯನತಂಡರಾಜ್ಯಕ್ಕೆ ಭೇಟಿ ನೀಡುತ್ತದೆ. ಆದರೆ, ನಾವುಸೆಪ್ಟೆಂಬರ್ ತಿಂಗಳಲ್ಲೆ ಬರಘೋಷಣೆಮಾಡಿದ್ದೇವೆ. ಸೆ.23, 2023ರಂದೇ ನಾವು ಮನವಿ ಸಲ್ಲಿಸಿದ್ದೆವು. ಇದರ ಬಳಿಕ ಅ.20 ರಂದು 17901 ಸಾವಿರಕೋಟಿ ಪರಿಹಾರಕ್ಕೆ ಮದ್ಯಂತರ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೆವು. ಈ ನಿಟ್ಟಿನಲ್ಲಿ ಸಚಿವ ಕೃಷ್ಣ ಭೈರೇಗೌಡ, ಕೃಷಿ ಸಚಿವಚೆಲುವರಾಯ ಸ್ವಾಮಿ ಹಾಗೂ ತಾವುಖುದ್ದುದೆಹಲಿಗೆಹೋಗಿಮನವಿಸಲ್ಲಿಸಿ223 ತಾಲೂಕು ಬರಇದೆಎಂದುಮನವಿ ಸಲ್ಲಿಸಿದ್ದೆವು.ಇದೆಲ್ಲವೂಗೊತ್ತಿದ್ದರೂಅಮಿತ್ ಶಾ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆಎಂದರು.
ಒಂದುವೇಳೆ, ಕರ್ನಾಟಕ ಸರಕಾರದ ವತಿಯಿಂದ ನಾವು ಸಲ್ಲಿಸಿರಲಿಲ್ಲ ಎನ್ನುವುದೇ ನಿಜವಾಗಿದ್ದಲ್ಲಿನ.8 ಮತ್ತು 20ರಂದು ಕೇಂದ್ರ ಸರ್ಕಾರಅದ್ಹೇಗೆಮೀಟಿಂಗ್‍ಕರೆಯಿತುಎಂದು ಸಚಿವ ಪ್ರಿಯಾಂಕ್ ಪ್ರಶ್ನಿಸಿದರು.
ಎಲ್ಲಕ್ಕಿಂತಲೂ ಮುಖ್ಯವಾಗಿಖುದ್ದು ಸಿಎಂ ಸಿದ್ದರಾಮಯ್ಯನವರೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ಮೇಲಾಗಿ, ಡಿ.20ರಂದು ಸಿಎಂ ಸಿದ್ದರಾಮಯ್ಯ ಹಾಗೂ ಕೃಷ್ಣ ಭೈರೇಗೌಡಅಮಿತ್ ಶಾಅವರನ್ನೂಭೇಟಿಯಾಗಿದ್ದರು. ಇದೆಲ್ಲವನ್ನೂ ಮುಚ್ಚಿಟ್ಟುಕನ್ನಡಿಗರು ಮುಗ್ದರುಅಂತಏಕೆ ಸುಳ್ಳು ಹೇಳುತ್ತೀರಿ ಎಂದು ಶಾ ವಿರುದ್ಧ ಹರಿಹಾಯ್ದರು.
ರಾಜ್ಯದ ಬರ ಪರಿಹಾರಅನುದಾನ ನೀಡುವಂತೆದೆಹಲಿಯಲ್ಲಿ ನಾವು ಪ್ರತಿಭಟನೆ ಮಾಡಿದ್ದುಕೂಡಅಮಿತ್ ಶಾ ಮರೆತಿದ್ದಾರೆ. ಅವರಿಗೆಕನ್ನಡಿಗರಟ್ಯಾಕ್ಸ್ ಬೇಕು. ಆದರೆ, ಕನ್ನಡಿಗರಿಗೆ ನಯಾ ಪೈಸೆ ಪರಿಹಾರಕೋಡೋಕೆಮನಸ್ಸು ಮಾಡುತ್ತಿಲ್ಲ. ನಾವೇನು ಪುಕ್ಕಟೆಅಂತು ಕೇಳುತ್ತಿಲ್ಲ. ತಾವುಕೊಡದಿದ್ದರೂಇಲ್ಲಿನಮ್ಮರಾಜ್ಯಕ್ಕೆಬಂದುಏಕೆ ಸುಳ್ಳು ಹೇಳುತ್ತಿದ್ದಾರೋ ಅರ್ಥವಾಗುತ್ತಿಲ್ಲಎಂದುಅಚ್ಚರಿ ವ್ಯಕ್ತಪಡಿಸಿದರು.
ಛೂ ಬಿಡುವಚಾಳಿ ಬಿಡಿ;ರೈತರಕಡೆ ನೋಡಿ
ಕೇಂದ್ರ ಸರಕಾರತನ್ನ ವಿರೋಧಿಗಳ ವಿರುದ್ಧಸಿಬಿಐ,ಐಟಿ,ಇ.ಡಿಇನ್ನಿತರ ಸಂಸ್ಥೆಗಳನ್ನು ಛೂ ಬಿಡುವಲ್ಲಿತೋರುವಆಸಕ್ತಿಯನ್ನು ಈ ದೇಶದರೈತರಕುರಿತು ತೋರಿಸಿದರೆ ಹೆಚ್ಚು ಅನುಕೂಲವಾಗುತ್ತದೆಎಂದು ಸಚಿವ ಪ್ರಿಯಾಂಕ್‍ಖರ್ಗೆಟಾಂಗ್ ನೀಡಿದರು.
ನಮ್ಮರಾಜ್ಯಕ್ಕೆ ಬಂದುಅಮಿತ್ ಶಾ ಭ್ರಷ್ಟಾಚಾರ ಮತ್ತು ಪರಿವಾರರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ, ವಿಜಯೇಂದ್ರ ಮತ್ತುಯಡಿಯೂರಪ್ಪಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡು ಮಾತನಾಡುವಾಗ ಪರಿವಾರ ವಾದ ನೆನಪಿಗೆ ಬರುವುದಿಲ್ಲವೇ? ಎಂದುಅಚ್ಚರಿ ವ್ಯಕ್ತಪಡಿಸಿದರು.
ಕೇಂದ್ರ ಸರಕಾರಕನ್ನಡಿಗರ ಬಗ್ಗೆ ಅಪಪ್ರಚಾರಮಾಡುತ್ತಿದೆ. ಇನ್ನೊಂದಡೆ, ಬಿಜೆಪಿಯ25 ಸಂಸದರುಎಲ್ಲಿದ್ದಾರೋಗೊತ್ತಿಲ್ಲ. ಅವರಾದರೂಅಮಿತ್ ಶಾ ಅವರಿಗೆ ಸರಿಯಾದ ಮಾಹಿತಿ ನೀಡಬಹುದಿತ್ತು. ಆದರೆಅವರೆಲ್ಲಾ ಶಾ ಅವರಿಗೆ ಹೆದರಿ ಪ್ರಶ್ನೆ ಮಾಡುತ್ತಿಲ್ಲಎಂದು ಸಚಿವ ಪ್ರಿಯಾಂಕ್‍ಖರ್ಗೆ ಕಿಚಾಯಿಸಿದರು.