ಜಪಾನ್‌ನಲ್ಲಿ ಭೂಕಂಪನ
ಟೋಕಿಯೋ, ಏ.೨-ಉತ್ತರ ಜಪಾನ್ ನ ಇವೇಟ್ ಮತ್ತು ಒಮೋರಿ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ೬.೧ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನಿನ ಹವಾಮಾನ ಇಲಾಖೆ ಪ್ರಕಟಿಸಿದೆ.
ಭೂಕಂಪದ ಕೇಂದ್ರ ಬಿಂದು ಇವೇಟ್ ಪ್ರಾಂತ್ಯದ ಉತ್ತರ ಕರಾವಳಿ ಭಾಗದಲ್ಲಿತ್ತು. ಈ ಸಂಬಂಧ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.