ತಾಯಿ ಹುಡುಕುತ್ತಾ ಭಾರತಕ್ಕೆ ಬಂದ ಸ್ವೀಡನ್ ಮಹಿಳೆ
ನಾಗಪುರ,ಏ.೨-ಯಾರಾದರೂ ನನಗೆ ನನ್ನ ತಾಯಿಯ ವಿಳಾಸವನ್ನು ನೀಡಿ, ನಾನು ಅವಳನ್ನು ಒಮ್ಮೆ ಭೇಟಿಯಾಗಬೇಕು ,ನಾನು ಅವರನ್ನು ಅಪ್ಪಿಕೊಳ್ಳಲು ಬಯಸುತ್ತೇನೆ,ನಾನು ಅವರ ಮಡಿಲಲ್ಲಿ ಮಲಗುವ ಬಯಕೆ ,ನಾನು ತಾಯಿಯ ವಿರುದ್ಧ ಯಾವುದೇ ದ್ವೇಷವನ್ನು ಹೊಂದಿಲ್ಲ, ಅಮ್ಮ ನನ್ನನ್ನು ತೊರೆದಿದ್ದಾರೆ ಇದರಿಂದ ಸಮಸ್ಯೆ ಇಲ್ಲ, ಆದರೆ ನಾನು ಅವರನ್ನು ಒಮ್ಮೆ ಭೇಟಿಯಾಗಲು ಬಯಸುತ್ತೇನೆ ಇದು ತನ್ನ ಜೈವಿಕ ತಾಯಿಯನ್ನು ಹುಡುಕುತ್ತಾ ಏಳು ಸಮುದ್ರಗಳನ್ನು ದಾಟಿ ತನ್ನ ಬೇರುಗಳನ್ನು ಹುಡುಕಿಕೊಂಡು ಭಾರತಕ್ಕೆ ಬಂದು ತನ್ನ ತಾಯಿ ಇರುವಿಕೆಯ ಹುಡುಕಾಟದಲ್ಲಿರುವ ಮಹಿಳೆಯೊಬ್ಬಳ ಭಾವನಾತ್ಮಕ ಕಥೆ.
೪೧ ವರ್ಷದ ಪೆಟ್ರೀಷಿಯಾ ಎರಿಕ್ಸನ್ ಸ್ವೀಡನ್ ನಿಂದ ತಾಯಿಯನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾರೆ. ಮದುವೆಯಿಲ್ಲದೆ ತಾಯಿಯಾದ ನಂತರ ಮಗಳನ್ನು ಅನಾಥಾಶ್ರಮಕ್ಕೆ ಬಿಟ್ಟ ತಾಯಿಯನ್ನು ಹುಡುಕುತ್ತಿದ್ದಾಳೆ. ಆ ಹುಡುಗಿಯನ್ನು ಸ್ವೀಡಿಷ್ ಕುಟುಂಬವೊಂದು ದತ್ತು ಪಡೆದಿದೆ, ಈಗ ೪೦ ವರ್ಷಗಳ ನಂತರ ತನ್ನ ತಾಯಿಯನ್ನು ಹುಡುಕಲು ಭಾರತಕ್ಕೆ ಬಂದಿದ್ದಾಳೆ. ಅಮ್ಮನನ್ನು ಭೇಟಿಯಾಗದೆ ಹಿಂತಿರುಗಿ ಹೋಗುವ ಮಾತೇ ಇಲ್ಲ ಎನ್ನುತ್ತಾಳೆ.
ಪೆಟ್ರೀಷಿಯಾ ಅವರು ಫೆಬ್ರವರಿ ೧೯೮೩ ರಲ್ಲಿ ಜನಿಸಿದ್ದಾರೆ ಎನ್ನಲಾಗಿದೆ, ಆದರೆ ಅವಿವಾಹಿತ ತಾಯಿಯಾಗಿದ್ದ ಆಕೆಯ ತಾಯಿ ಅವಳನ್ನು ಅನಾಥಾಶ್ರಮದಲ್ಲಿ ಬಿಟ್ಟರು. ಅವಳು ಒಂದು ವರ್ಷದವಳಿದ್ದಾಗ, ಸ್ವೀಡಿಷ್ ಕುಟುಂಬವು ಅವಳನ್ನು ದತ್ತು ತೆಗೆದುಕೊಂಡು ಸ್ವೀಡನ್‌ಗೆ ಸ್ಥಳಾಂತರಗೊಂಡಿದೆ. ಅವಳ ಜೈವಿಕ ತಾಯಿ ಭಾರತದಲ್ಲಿದ್ದಾರೆ ಎಂದು ತಿಳಿದಾಗ, ಅವಳು ಅವಳನ್ನು ಹುಡುಕಲು ಬಂದಿದ್ದಾಳೆ. ಸಧ್ಯ ನಾಗಾಪುರದ ಎಲ್ಲಾ ಸ್ಥಳಗಳಲ್ಲಿ ಹುಡುಕಾಟ ನಡೆದಿದೆ ಆದರೆ ಅವರು ತಾಯಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶಾಂತಿನಗರದ ಅಂಗನವಾಡಿ, ಶಾಲೆ, ಪೊಲೀಸ್ ಠಾಣೆ, ಹಳೆ ಪ್ರದೇಶಗಳಿಗೆ ಭೇಟಿ ನೀಡಿದರೂ ಪತ್ತೆಯಾಗಿಲ್ಲ.
ತನಗೆ ತಾಯಿಯ ಹೆಸರು ಮಾತ್ರ ತಿಳಿದಿದೆ ಎಂದು ಪೆಟ್ರೀಷಿಯಾ ಹೇಳುತ್ತಾಳೆ.ಆದರೆ ತಾಯಿಗಾಗಿ ಪೆಟ್ರೀಷಿಯಾ ಅಲೆದಾಟ ಸಾಗಿದೆ.