ತಿರುಮಲ ಲಡ್ಡು ಪ್ರಸಾದದಲ್ಲಿ ತುಪ್ಪ ಬದಲಿಗೆ ಪ್ರಾಣಿಗಳ ಕೊಬ್ಬು ಬಳಕೆ
ಸ್ಟಮಕ್- ಚಂದ್ರಬಾಬು ಆರೋಪ
ಹೈದರಾಬಾದ್,ಸೆ.೧೯- ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಿರುಮಲ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಚಂದ್ರಬಾಬು ಗಂಭೀರ ಆರೋಪ ಮಾಡಿದ್ದಾರೆ.
ಲಡ್ಡು ತಯಾರಿಕೆಗೆ ತುಪ್ಪದ ಬದಲು ಪ್ರಾಣಿಜನ್ಯ ಎಣ್ಣೆಯನ್ನು ಬಳಸಿರುವುದು ಗಮನಕ್ಕೆ ಬಂದಿದ್ದು, ಈ ಮೂಲಕ ತಿರುಮಲ ತಿರುಪತಿ ದೇವಸ್ಥಾನವನ್ನು ಅಪವಿತ್ರಗೊಳಿಸಲಾಗಿದೆ.
ಹಿಂದಿನ ಸರ್ಕಾರದ ಆಡಳಿತದಲ್ಲಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಚಂದ್ರಬಾಬು ಟೀಕಿಸಿದ್ದಾರೆ.
ತಿರುಮಲ ಲಡ್ಡು ತಯಾರಿಕೆಯಲ್ಲಿ ನೈಸರ್ಗಿಕವಾಗಿ ಶುದ್ಧ ತುಪ್ಪವನ್ನು ಬಳಸಲಾಗುತ್ತದೆ. ಆದರೆ ಹಿಂದಿನ ಸರಕಾರ ಹಾಗೂ ಟಿಟಿಡಿ ಆಡಳಿತ ಮಂಡಳಿ ಲಡ್ಡು ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಆಪಾದಿಸಿದ್ದಾರೆ.
ಈ ಕುರಿತು ಸಿಎಂ ಚಂದ್ರಬಾಬು ಎನ್‌ಡಿಎ ಸಭೆಯಲ್ಲಿ ಹೇಳಿಕೆ ನೀಡಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಟಿಡಿ ಮಂಡಳಿ ಮಾಜಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಟಿಡಿಪಿ ಹಿರಿಯ ನಾಯಕ ಹಾಗೂ ಶಾಸಕ ಸೋಮಿರೆಡ್ಡಿ ಚಂದ್ರಮೋಹನ್ ರೆಡ್ಡಿ ತಿರುಗೇಟು ನೀಡಿದ್ದಾರೆ . ವೈಸಿಪಿ ಮತ್ತು ಟಿಡಿಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.
ಚಂದ್ರಬಾಬು ನಾಯ್ಡು ಅವರು ತಿರುಮಲದ ದೈವಿಕ ದೇಗುಲದ ಪಾವಿತ್ರ್ಯತೆ ಹಾಗೂ ನೂರಾರು ಕೋಟಿ ಹಿಂದೂಗಳ ನಂಬಿಕೆಗೆ ಧಕ್ಕೆ ತರುವ ಮೂಲಕ ಮಹಾಪಾಪ ಎಸಗಿದ್ದಾರೆ. ತಿರುಮಲ ಪ್ರಸಾದದ ಬಗ್ಗೆ ಚಂದ್ರಬಾಬು ಅವರು ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆ. ಮನುಷ್ಯನಾಗಿ ಹುಟ್ಟಿದವರು ಯಾರೂ ಇಂತಹ ಮಾತುಗಳನ್ನಾಡುವುದಿಲ್ಲ, ಆರೋಪ ಮಾಡುವುದಿಲ್ಲ ಎಂದು ಎಕ್ಸ್ ವೇದಿಕೆಯಲ್ಲಿ ಸುಬ್ಬಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಏನನ್ನೂ ಮಾಡಲು ಚಂದ್ರಬಾಬು ಹಿಂಜರಿಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಕ್ತರ ನಂಬಿಕೆಯನ್ನು ಬಲಪಡಿಸಲು, ನಾನು ಮತ್ತು ನನ್ನ ಕುಟುಂಬವು ತಿರುಮಲ ಪ್ರಸಾದದ ವಿಷಯದಲ್ಲಿ ಆ ದೇವರ ಸಮ್ಮುಖದಲ್ಲಿ ಸಾಕ್ಷಿಯಾಗಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ಚಂದ್ರಬಾಬು ಕೂಡ ಕುಟುಂಬ ಸಮೇತ ಪ್ರಮಾಣ ಮಾಡಲು ಸಿದ್ಧರಿದ್ದಾರಾ? ಎಂದು ವೈವಿ ಸುಬ್ಬಾರೆಡ್ಡಿ ಸವಾಲು ಹಾಕಿದ್ದಾರೆ.
ತಿರುಮಲದಲ್ಲಿ ಭಕ್ತರಿಗೆ ಟಿಟಿಡಿ ನಿಯಮಿತವಾಗಿ ಸುಮಾರು ಮೂರೂವರೆ ಲಕ್ಷ ಲಡ್ಡೂಗಳನ್ನು ವಿತರಿಸುತ್ತದೆ. ಲಡ್ಡುವಿನ ಪಾವಿತ್ರ್ಯತೆ ಕಾಪಾಡಲು ಜನರು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅನ್ನ ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟದ ತುಪ್ಪ ಬಳಸಲಾಗುವುದು ಎಂದು ಘೋಷಿಸಲಾಗಿದೆ.