ಭಾರತಕ್ಕೆ ಯುಎಸ್ ಕೋರ್ಟ್ ಸಮನ್ಸ್
ನವದೆಹಲಿ, ಸೆ. ೧೯-ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ತನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಸಿವಿಲ್ ಮೊಕದ್ದಮೆ ದಾಖಲಿಸಿದ ನಂತರ ಯುಎಸ್ ನ್ಯಾಯಾಲಯ ಭಾರತಕ್ಕೆ ಸಮನ್ಸ್ ಜಾರಿ ಮಾಡಿದೆ.
ಅಮೆರಿಕಾದ ನ್ಯೂಯಾರ್ಕ್‌ನ ಸದರ್ನ ಯುಎಸ್ ಜಿಲ್ಲಾ ನ್ಯಾಯಾಲಯದ ಸಮನ್ಸ್ ನಲ್ಲಿ ಭಾರತ ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಾ ಮಾಜಿ ಮುಖ್ಯಸ್ಥ ಸಮಂತ್ ಗೋಯಲ್ ರಾ ಏಜೆಂಟ್ ವಿಕ್ರಮ್ ಯಾದವ್ ಮತ್ತು ಭಾರತೀಯ ಉದ್ಯಮಿ ನಿಖಿಲ್ ಗುಪ್ತಾ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
ಸಮನ್ಸ್ ನಲ್ಲಿ ಹೆಸರಿರುವವರು ೨೧ ಜಿಲ್ಲೆಗಳಲ್ಲಿ ನ್ಯಾಯಾಲಯಕ್ಕೆ ತಮ್ಮ ಉತ್ತರವನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಯುಎಸ್ ನ್ಯಾಯಾಲಯದ ಈ ಸಮನ್ಸ್ ಗೆ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಸಮನ್ಸ್ ಪ್ರತಿಕ್ರಿಯೆ ನೀಡಿಲ್ಲ, ಸಮನ್ಸ್ ಪ್ರತಿಯನ್ನು ಹಂಚಿಕೊಂಡಿರುವ ಪನ್ನು ಅವರ ಎಕ್ಸ್ ಖಾತೆಯನ್ನು ಸದ್ಯ ತಡೆ ಹಿಡಿಯಲಾಗಿದೆ.
ಕಳೆದ ನವೆಂಬರ್ ನಲ್ಲಿ ಮೂಲಭೂತ ಸಂಘಟನೆಯ ಸಿಖ್ಸ್ ಫಾರ್ ಜೆಸ್ಟಿಸ್ ಮುಖ್ಯಸ್ಥರಾಗಿರುವ ಮತ್ತು ಯುಎಸ್, ಕೆನಡಾ ದ್ವಿ ಪೌರತ್ವ ಹೊಂದಿರುವ ಪನ್ನು ಅವರನ್ನು ಕೊಲ್ಲಲು ರೂಪಿಸಿದ್ದ ಸಂಚನ್ನು ಯುಎಸ್ ವಿಫಲಗೊಳಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿತ್ತು.
ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅಧಿಕಾರಿಗಳು ಈ ವಿಷಯವನ್ನು ದೃಢಪಡಿಸಿದರು.
ಈ ಕುರಿತು ತನ್ನ ಮೊದಲ ಪ್ರತಿಕ್ರಿಯೆಯಲ್ಲಿ ವಿದೇಶಾಂಗ ಸಚಿವಾಲಯ ಇದು ಕಳವಳಕಾರಿ ವಿಷಯ ಭಾರತವು ಉನ್ನತ ಮಟ್ಟದ ತನಿಖೆ ಆರಂಭಿಸಿರುವುದಾಗಿ ಒತ್ತಿ ಹೇಳಿತ್ತು.
ಅಮೆರಿಕಾ ನ್ಯಾಯಾಲಯ ಒಬ್ಬ ವ್ಯಕ್ತಿಯ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಯನ್ನು ಸಂಪರ್ಕಿಸುವುದು ಕಳವಳಕಾರಿ ಹಾಗೂ ಸರ್ಕಾರಿ ನೀತಿ ವಿರುದ್ಧ ಎಂಇಎ ವಕ್ತಾರ ಅರಿಂದಮ್ಮ ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ್ ಭಾರತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುತ್ತಿದೆ. ಆದರೆ ಈ ಘಟನೆ ಭಾರತ ಮತ್ತು ಅಮೆರಿಕಾದ ಸಂಬಂಧಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.