ಈಡೇರದ ಬೇಡಿಕೆ: ನಿಲ್ಲದ ವೈದ್ಯರ ಹೋರಾಟ
ಕೋಲ್ಕತ್ತಾ,ಸೆ.೧೯- ಪಶ್ಚಿಮ ಬಂಗಾಳದ ಕಿರಿಯ ವೈದ್ಯರು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ನಡುವಿನ ಬಿಕ್ಕಟ್ಟು ಅವರ ಎರಡನೇ ಸಭೆಯ ನಂತರವೂ ಮುಂದುವರೆದಿದೆ.
ರಾಜ್ಯ ಸರ್ಕಾರ ಯಾವುದನ್ನೂ ’ಔಪಚಾರಿಕವಾಗಿ’ ಒಪ್ಪಿಕೊಂಡಿಲ್ಲ ಎಂದು ಪ್ರತಿಭಟನಾ ನಿರತ ವೈದ್ಯರು ಆರೋಪಿಸಿ ಧರಣಿ ಮುಂದುವರಿಸಿದ್ದಾರೆ. ರಾಜ್ಯ ಸರ್ಕಾರ ಬೇಡಿಕೆಗಳನ್ನು ಲಿಖಿತವಾಗಿ ಭರವಸೆ ನೀಡುವ ತನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ
ಈ ನಡುವೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ನಬಣ್ಣನ್ನಾದಲ್ಲಿ ಧರಣಿ ನಿರತ ವೈದ್ಯರೊಂದಿಗೆ ಸಭೆ ನಡೆಸಿ ಕಿರಿಯ ವೈದ್ಯರ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿದ್ದರು. ಲಿಖಿತ ಮೂಲಕ ಬರುವ ತನಕ ಹೋರಾಟದಿಂದ ಹಿಂದೆ ಸರಿಯುವದಿಲ್ಲ ಎಂದು ಪಟ್ಟು ಹಿಡಿದಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.
ವೈದ್ಯರ ಪ್ರಕಾರ, ಮುಖ್ಯ ಕಾರ್ಯದರ್ಶಿ ಸಭೆಯಲ್ಲಿ ಅವರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡರು. ಆದರೆ, ನಂತರ ಸಭೆಯ ನಡಾವಳಿ ಕೇಳಿದಾಗ ನಿರಾಕರಿಸಲಾಯಿತು. ಸಂದರ್ಶಕ ವೈದ್ಯರ ನಿಯೋಗದ ಭಾಗವಾಗಿದ್ದ ಡಾ.ಶಾಂತಿನಿ ಹೇಳಿದ್ದಾರೆ
ಕಳೆದ ೪೧ ದಿನಗಳಿಂದ ಮೂಲಭೂತ ಮಾನವ ಹಕ್ಕುಗಳು, ನ್ಯಾಯ ಮತ್ತು ಬೆದರಿಕೆ ಸಂಸ್ಕೃತಿ ಕೊನೆಗೊಳಿಸಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದೇವೆ.ಸ್ವಂತ ಆರೋಗ್ಯ ಸೌಲಭ್ಯವನ್ನು ಸುಧಾರಿಸಲು ಮಾತ್ರವಲ್ಲದೆ ರೋಗಿಗಳ ಆರೈಕೆಯನ್ನು ಸುಧಾರಿಸಲು ಸಹ ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ
ರಾಜ್ಯ ಸರ್ಕಾರ ಬೇಡಿಕೆ ಈಡೇರಿಸಲು ಒಪ್ಪಿಕೊಂಡ ಅದನ್ನು ಲಿಖಿತವಾಗಿ ನೀಡಲು ಹಿಂಜರಿಯುತ್ತಿದೆ. ಹೀಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ
ಮತ್ತೊಬ್ಬ ಕಿರಿಯ ವೈದ್ಯರು ಪ್ರತಿಕ್ರಿಯಿಸಿ ಸಭೆ ನಡೆಯುತ್ತಿರುವಾಗ ಮುಖ್ಯ ಕಾರ್ಯದರ್ಶಿ ನಮ್ಮ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡರು ಆದರೆ ಸಭೆಯ ನಂತರ ಸಭೆಯ ನಡಾವಳಿಗಳನ್ನು ಕೇಳಿದಾಗ ಅದನ್ನು ನೀಡಲು ನಿರಾಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ