ಸಮರಕ್ಕೆ ಯುರೋಪ್ ಸಿದ್ದವಿಲ್ಲ
ಲಂಡನ್, ಮಾ.೩೦- ಸಮರವು ಯುರೋಪ್‌ನ ಬೆದರಿಕೆಯಾಗಿದ್ದು, ಅದಕ್ಕೆ ನಾವು ಸಿದ್ದವಾಗಿಲ್ಲ. ಯುರೋಪ್ ಸದ್ಯ ಯುದ್ದಪೂರ್ವ ಯುಗದಲ್ಲಿದೆ. ಹಾಗಾಗಿ ಇಡೀ ಖಂಡದ ಒಳಿತಿಗಾಗಿ ರಷ್ಯಾ ವಿರುದ್ಧ ಉಕ್ರೇನ್ ಸೋಲಬಾರದು ಎಂದು ಪೋಲ್ಯಾಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ತಿಳಿಸಿದ್ದಾರೆ.
ಉಕ್ರೇನ್‌ನ ಇಂಧನ ವ್ಯವಸ್ಥೆಯ ಮೇಲೆ ರಷ್ಯಾ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಟಸ್ಕ್ ಈ ಹೇಳಿಕೆ ನೀಡಿದ್ದಾರೆ. ಯುದ್ದವು ಹಿಂದಿನ ಪರಿಕಲ್ಪನೆಯಲ್ಲ. ಅದು ೨ ವರ್ಷಗಳ ಹಿಂದೆ ಪ್ರಾರಂಭವಾಯಿತು. ವಿಶ್ವದ ಅತಿದೊಡ್ಡ ಪರಮಾಣು ಶಸ್ತ್ರಾಗಾರಗಳಲ್ಲಿ ಒಂದನ್ನು ಹೊಂದಿರುವ ದೇಶವಾದ ರಷ್ಯಾವು ನ್ಯಾಟೋ ಸದಸ್ಯತ್ವ ಹೊಂದಿರುವ ದೇಶಗಳಾದ ಪೋಲೆಂಡ್, ಬಾಲ್ಟಿಕ್ ದೇಶಗಳು ಮತ್ತು ಜೆಕ್ ಗಣರಾಜ್ಯದ ಮೇಲೆ ದಾಳಿ ನಡೆಸುತ್ತಿರುವುದು ಸಂಪೂರ್ಣ ಅಸಂಬದ್ಧವಾಗಿದೆ. ಉಕ್ರೇನ್ ಇತರ ದೇಶಗಳಲ್ಲಿನ ವಾಯುನೆಲೆಗಳಿಂದ ಪಾಶ್ಚಿಮಾತ್ಯ ಎಫ್ -೧೬ ಯುದ್ಧವಿಮಾನಗಳನ್ನು ಬಳಸಿದರೆ, ಅವು ಅವು ಎಲ್ಲೇ ಇದ್ದರೂ ಕಾನೂನುಬದ್ಧ ಗುರಿಗಳಾಗಲಿದೆ ಎಂದು ಅವರು ತಿಳಿಸಿದರು. ಮಾಸ್ಕೋ ಮೇಲೆ ಐಎಸ್ ಉಗ್ರರು ನಡೆಸಿದ ಪೈಶಾಚಿಕ ದಾಳಿಯ ಬಳಿಕ ಉಕ್ರೇನ್ ಮೇಲಿನ ರಷ್ಯಾ ದಾಳಿಯಲ್ಲಿ ಭಾರೀ ಹೆಚ್ಚಳವಾಗಿದೆ. ಉಕ್ರೇನ್ ಮೇಲಿನ ಇತ್ತೀಚಿನ ರಷ್ಯಾದ ದಾಳಿಯಲ್ಲಿ ಸುಮಾರು ೧೦೦ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಲಾಯಿತು ಎನ್ನಲಾಗಿದೆ.