೪೬ ಕೋಟಿ ವಹಿವಾಟು :ವಿವರ ಕೇಳಿ ವಿದ್ಯಾರ್ಥಿಗೆ ಐಟಿ ನೋಟೀಸ್
ಗ್ವಾಲಿಯರ್,ಮಾ.೩೦-ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ, ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಆದಾಯ ತೆರಿಗೆ ಇಲಾಖೆ ೪೬ ಕೋಟಿ ತೆರಿಗೆ ನೋಟಿಸ್ ಕಳುಹಿಸಿದೆ., ಇದರ ನಂತರ ವಿದ್ಯಾರ್ಥಿ ತನ್ನ ಖಾತೆಯಿಂದ ೪೬ ಕೋಟಿ ರೂಪಾಯಿಗಳ ವಂಚನೆಯ ವಹಿವಾಟು ನಡೆಸಿದ ನಂತರ ಪೊಲೀಸರಿಗೆ ದೂರು ನೀಡಿದ್ದಾನೆ.
ಪ್ರಮೋದ್ ಕುಮಾರ್ ದಂಡೋಟಿಯ ಎಂಬ ವಿದ್ಯಾರ್ಥಿ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ . ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಎಂಎ ಮಾಡುತ್ತಿರುವ ಈತನ ಹೆಸರಿನಲ್ಲಿ ಜಿಎಸ್‌ಟಿ ಸಂಸ್ಥೆಯನ್ನು ರಚಿಸಲಾಗಿದೆ. ೨೦೨೧ರಿಂದ ಇಲ್ಲಿಯವರೆಗೆ ಈ ಸಂಸ್ಥೆಯ ಮೂಲಕ ೪೬ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಜನವರಿ ೨೭ ರಂದು ವಿದ್ಯಾರ್ಥಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಾಗ ಇದು ಬೆಳಕಿಗೆ ಬಂದಿದೆ. ಈ ಸೂಚನೆಯು ವಿದ್ಯಾರ್ಥಿಗೆ ಆಘಾತವನ್ನುಂಟು ಮಾಡಿದ್ದು ಮಾತ್ರವಲ್ಲದೆ ಆತನ ಕುಟುಂಬ ಸದಸ್ಯರನ್ನೂ ಕಣ್ಣೀರಿಡುವಂತೆ ಮಾಡಿದೆ. ಈ ವಿಷಯದ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿ ಹರಸಾಹಸ ಪಟ್ಟಾಗ, ದೆಹಲಿ, ಪುಣೆಯಲ್ಲಿ ಸಂಸ್ಥೆಯೊಂದು ನೋಂದಣಿಯಾಗಿದ್ದು, ಅದರಲ್ಲಿ ತನ್ನ ಪ್ಯಾನ್ ಕಾರ್ಡ್ ಬಳಸಲಾಗಿದೆ ಎಂದು ತಿಳಿದುಬಂದಿದೆ.
ಕೆಲವರು ಅವರ ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗೆ ಐಟಿ ನೋಟಿಸ್ ಬಂದಿದೆ. ಗ್ವಾಲಿಯರ್‌ನ ಕಾಲೇಜು ವಿದ್ಯಾರ್ಥಿ ಪ್ರಮೋದ್ ಕುಮಾರ್ ದಂಡೋತಿಯಾ ಎಂಬುವರು ತಮ್ಮ ಬ್ಯಾಂಕ್ ಖಾತೆಯಿಂದ ತನಗೆ ತಿಳಿಯದಂತೆ ೪೬ ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
೨೦೨೧ ರಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಕಂಪನಿಯೊಂದು ತನ್ನ ಪ್ಯಾನ್ ಕಾರ್ಡ್ ಸಂಖ್ಯೆಯೊಂದಿಗೆ ವಹಿವಾಟು ಆರಂಭಿಸಿದೆ ಎಂದು ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ಇಲಾಖೆಯಿಂದ ನೋಟಿಸ್ ಬಂದಿದೆ.
ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಪ್ರಮೋದ್ ಕುಮಾರ್ ತಿಳಿಸಿದ್ದಾರೆ.ಬಳಿಕ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿರಲಿಲ್ಲ. ಶುಕ್ರವಾರ ಮತ್ತೊಮ್ಮೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ದಾಖಲಾಗಿದೆ. ದೂರು ಸ್ವೀಕರಿಸಲಾಗಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ತಿಳಿಸಿದ್ದಾರೆ. ಪ್ರಮೋದ್ ಕುಮಾರ್ ದೂರಿಗೆ ಪ್ರತಿಕ್ರಿಯಿಸಿದ ಎಎಸ್ಪಿ ಶಿಯಾಜ್, ತನ್ನ ಬ್ಯಾಂಕ್ ಖಾತೆಯಿಂದ ರೂ.೪೬ ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ಯುವಕ ದೂರು ನೀಡಿದ್ದಾನೆ. ಇದಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ .ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಅದರ ಮೂಲಕ ಕಂಪನಿ ನೋಂದಣಿ ಮಾಡಿ ಭಾರೀ ಮೊತ್ತದ ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ.ಈ ದೂರಿನ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿದುಬಂದಿದೆ.