ಮೇನಕಾಗೆ ಟಿಕೆಟ್, ಪುತ್ರ ವರುಣ್‌ಗೆ ಕೊಕ್
ನವದೆಹಲಿ,ಮಾ.೨೫- ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದ ಸುಲ್ತಾನಪುರ ಲೋಕಸಭಾ ಕ್ಷೇತ್ರದಿಂದ ಮೇನಕಾ ಗಾಂಧಿ ಅವರಿಗೆ ಮತ್ತೊಮ್ಮೆ ಸ್ಪರ್ಧೆ ಮಾಡಲು ಅವಕಾಶ ನೀಡಿರುವ ಬಿಜೆಪಿ ಅವರ ಪುತ್ರ ಸಂಸದ ವರುಣ್ ಗಾಂಧಿಗೆ ಫಿಲಿಬಿತ್ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಟಿಕೆಟ್ ನಿರಾಕರಿಸಿದೆ.
ಹೊಸದಾಗಿ ಸೇರ್ಪಡೆಗೊಂಡಿರುವ ಕೈಗಾರಿಕೋದ್ಯಮಿ ನವೀನ್ ಜಿಂದಾಲ್, ರಂಜಿತ್ ಚೌಟಾಲಾ ಮತ್ತು ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಮತ್ತು ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಕಾಂಗ್ರೆಸ್ ಮಾಜಿ ನಾಯಕ ಜಿತಿನ್ ಪ್ರಸಾದ್ ಅವರಿಗೆ ಪಿಲಿಭಿತ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ.
ಕೇರಳದ ವಯನಾಡಿನಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ವಿರುದ್ಧ ಹಿರಿಯ ನಾಯಕ ಮತ್ತು ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಸ್ಪರ್ಧಿಸಲಿದ್ದಾರೆ.
ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ ಪುತ್ರ ರಂಜಿತ್ ಚೌತಾಲಾ ಹಿಸಾರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕಂಗನಾ ರಣಾವತ್ ಅವರು ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶದ ಮಂಡಿಯಿಂದ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಜನಪ್ರಿಯ ಟಿವಿ ಧಾರಾವಾಹಿ ರಾಮಾಯಣದಲ್ಲಿ ರಾಮನ ಪಾತ್ರ ಮಾಡಿದ್ದ ನಟ ಅರುಣ್ ಗೋಯಿಲ್ ಅವರನ್ನು ಮೀರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ.
ಸ್ವಯಂ ನಿವೃತ್ತಿ ಪಡೆದು ಇತ್ತೀಚೆಗೆ ಬಿಜೆಪಿ ಸೇರಿದ ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರು ಬಂಗಾಳದ ತಮ್ಲುಕ್‌ನಿಂದ ಸ್ಪರ್ಧಿಸಲಿದ್ದಾರೆ. ನ್ಯಾಯಾಂಗದಿಂದ ದೂರ ಸರಿದು ಚುನಾವಣಾ ರಾಜಕೀಯಕ್ಕೆ ಸೇರಿದ ಮೊದಲ ನಿವೃತ್ತ ನ್ಯಾಯಾಧೀಶರಾಗಿದ್ದಾರೆ.
ಒಡಿಶಾದ ಸಂಭಾಲ್‌ಪುರದಿಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪುರಿಯಿಂದ ಸಂಬಿತ್ ಪಾತ್ರ ಅವರನ್ನು ನಾಯಕರನ್ನು ಕಣಕ್ಕಿಳಿಸಿದೆ.ಸೊರೇನ್ ಕುಟುಂಬದ ಮತ್ತೊಬ್ಬ ಹೊಸ ಸದಸ್ಯೆ ಸೀತಾ ಸೊರೆನ್ ಜಾರ್ಖಂಡ್‌ನ ದುಮ್ಕಾದಿಂದ ಸ್ಪರ್ಧಿಸಲಿದ್ದಾರೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬೇಗುಸರಾಯ್ ಕ್ಷೇತ್ರದಿಂದ ಹಾಗೂ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಬಿಜೆಪಿ ಘೋಷಿಸಿದ ಅಭ್ಯರ್ಥಿಗಳಲ್ಲಿ ೧೭ ರಾಜ್ಯಗಳನ್ನು ಒಳಗೊಂಡಿವೆ ಮತ್ತು ಆಂಧ್ರಪ್ರದೇಶದಲ್ಲಿ ಅದರ ಕೋಟಾದಿಂದ ಎಲ್ಲಾ ಆರು ಸ್ಥಾನ ಪ್ರಕಟಿಸಿದೆ. ಬಿಹಾರದಿಂದ ೧೭, ಒಡಿಶಾದಿಂದ ೨೧ ಮತ್ತು ಪಶ್ಚಿಮ ಬಂಗಾಳದಿಂದ ೧೯ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ,
ಕೈಕೊಟ್ಟ ಬಿಜೆಪಿ
ಈ ನಡುವೆ ಪ್ರಮುಖ ನಾಯಕರು ಕೇಂದ್ರ ಸಚಿವರಾದ ಅಶ್ವಿನಿ ಕುಮಾರ್ ಚೌಬೆ ಮತ್ತು ಜನರಲ್ ವಿಕೆ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಅನೇಕರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದೆ.
ಇನ್ನೂ ಹಲವು ಪ್ರಮುಖ ನಾಯಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಅದರರಲ್ಲಿ ಹಾಲಿ ಸಂಸದರೂ ಸೇರಿದಂತೆ ಕೋಲಾರದ ಮುನಿಸ್ವಾಮಿ ಅವರನ್ನು ಕೈಬಿಡಲಾಗಿದೆ.