ಚೀನಾ ಹ್ಯಾಕಿಂಗ್ ಸಂಚಿನಲ್ಲಿ ಸಿಲುಕಿದ ಅಮೆರಿಕನ್ನರ ಖಾತೆಗಳು!
ನ್ಯೂಯಾರ್ಕ್, ಮಾ.೨೬- ಶೀತಲ ಸಮರದಲ್ಲಿ ನಿರತರಾಗಿರುವ ಅಮೆರಿಕಾ ಹಾಗೂ ಚೀನಾ ನಡುವೆ ಸದ್ಯ ಸೈಬರ್ ಕದನ ಕೂಡ ನಡೆಯುತ್ತಿರುವ ಸಂಗತಿ ಗುಟ್ಟಾಗಿ ಉಳಿದುಕೊಂಡಿಲ್ಲ. ಈ ನಡುವೆ ಅಮೆರಿಕಾ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡು ಚೀನಾ ನಡೆಸಿರುವ ಹ್ಯಾಕಿಂಗ್ ಸಂಚಿನಲ್ಲಿ ಲಕ್ಷಾಂತರ ಅಮೆರಿಕನ್ ನಾಗರಿಕರ ಖಾತೆಗಳು ಸಿಲುಕಿಕೊಂಡಿವೆ ಎಂದು ನ್ಯಾಯ ಇಲಾಖೆ ಮತ್ತು ಎಫ್‌ಬಿಐ ಬಹಿರಂಗಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಚೀನಿ ಪ್ರಜೆಗಳ ವಿರುದ್ಧ ಸೈಬರ್ ದಾಳಿ ನಡೆಸಿದ ಆರೋಪವನ್ನು ಹೊರಿಸಲಾಗಿದೆ. ಇವರ ಫೋಟೋಗಳನ್ನು ಸದ್ಯ ಎಫ್‌ಬಿಐ ಬಹಿರಂಗಪಡಿಸಿದೆ. ಇವರು ಸುಮಾರು ೧೪ ವರ್ಷಗಳಿಂದ ಹ್ಯಾಕಿಂಗ್ ಕಾರ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಅಲ್ಲದೆ ಇವರ ಬಗ್ಗೆ ಮಾಹಿತಿ ನೀಡುವವರಿಗೆ ಸುಮಾರು ೧೦ ಮಿಲಿಯನ್ ಡಾಲರ್ ಬಹುಮಾನ ಘೋಷಿಸುವ ನಿರ್ಣಯವನ್ನು ಕೂಡ ಅಮೆರಿಕಾದ ರಾಜ್ಯ ಇಲಾಖೆ ತೆಗೆದುಕೊಂಡಿದೆ. ಈ ಹ್ಯಾಕರ್‌ಗಳು ಅಮೆರಿಕಾದ ಸಿಬ್ಬಂದಿ ಹಾಗೂ ರಾಜಕೀಯ, ವ್ಯವಹಾರದಲ್ಲಿ ಚೀನಾವನ್ನು ದೂಷಿಸುವ ವಿದೇಶಿ ವ್ಯಕ್ತಿಗಳನ್ನು ಗುರಿಯಾಗಿರಿಸಿ ಹ್ಯಾಕಿಂಗ್ ನಡೆಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಏಳು ಜನರು ೧೦,೦೦೦ಕ್ಕೂ ಹೆಚ್ಚು ದುರುದ್ದೇಶಪೂರಿತ ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಈ ರೀತಿಯ ಇಮೇಲ್‌ಗಳು ಹಲವು ಖಂಡಗಳ ಸಾವಿರಾರು ಬಲಿಪಶುಗಳ ಮೇಲೆ ಪರಿಣಾಮ ಬೀರಿದೆ. ಇದು ಚೀನಾ ಸರ್ಕಾರದ ಸಮೃದ್ಧ ಜಾಗತಿಕ ಹ್ಯಾಕಿಂಗ್ ಕಾರ್ಯಾಚರಣಯಾಗಿದೆ ಎಂದು ಇಲಾಖೆ ತಿಳಿಸಿದೆ.
ವರದಿಯು ಅಮೆರಿಕಾದ ಸೈಬರ್ ಭದ್ರತೆ ದುರ್ಬಲಗೊಳಿಸಲು ಮತ್ತು ನಮ್ಮ ನಾಗರಿಕರನ್ನು ಗುರಿಯಾಗಿಸಲು ಮತ್ತು ನಮ್ಮ ನಾವೀನ್ಯತೆಗೆ ಚೀನಾದ ನಿರಂತರ ಕೆಟ್ಟ ಪ್ರಯತ್ನಗಳನ್ನು ಬಹಿರಂಗಪಡಿಸಿದೆ. ಚೀನಾವು ಯುಎಸ್ ಮತ್ತು ನಮ್ಮ ಪಾಲುದಾರರನ್ನು ಗುರಿಯಾಗಿಸುವವರೆಗೂ, ಸೈಬರ್ ಬೇಹುಗಾರಿಕೆಯನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ರಾಷ್ಟ್ರದ ಭದ್ರತೆ ಮತ್ತು ಸಮೃದ್ಧಿಗೆ ಬೆದರಿಕೆ ಹಾಕುವವರನ್ನು ನಾವು ದಣಿವರಿಯಿಲ್ಲದೆ ಹಿಂಬಾಲಿಸುತ್ತೇವೆ.
-ಕ್ರಿಸ್ಟೋಫರ್ ವ್ರೇ, ಎಫ್‌ಬಿಐ ನಿರ್ದೇಶಕ