ಜೈಹಿಂದ್ ಹುಟ್ಟು ಹಾಕಿದ್ದು ಮುಸ್ಲಿಮರು: ಪಿಣರಾಯಿ
ಮಲಪ್ಪುರಂ,ಮಾ.೨೬-‘ಭಾರತ್ ಮಾತಾ ಕೀ ಜೈ’ ಮತ್ತು ‘ಜೈ ಹಿಂದ್ ಎಂಬ ಅಪ್ರತಿಮ ರಾಷ್ಟ್ರೀಯ ಘೋಷಣೆಗಳನ್ನು ಆರಂಭದಲ್ಲಿ ಮುಸ್ಲಿಮರು ಹುಟ್ಟುಹಾಕಿದರು ಎಂದು ಹೇಳುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚರ್ಚೆಗೆ ನಾಂದಿ ಹಾಡಿದ್ದಾರೆ.
‘ಭಾರತ್ ಮಾತಾ ಕಿ ಜೈ’ಎನ್ನುವುದನ್ನು ಮೊದಲು ಅಜೀಮುಲ್ಲಾ ಖಾನ್ ಉಲ್ಲೇಖಿಸಿದರು. “ಕೆಲವು ಕಾರ್ಯಕ್ರಮಗಳಲ್ಲಿ, ಕೆಲವು ಸಂಘ ಪರಿವಾರದ ನಾಯಕರು ‘ಭಾರತ್ ಮಾತಾ ಕಿ ಜೈ’ ಎಂದು ಕೂಗುವುದನ್ನು ನಾವು ಕೇಳುತ್ತೇವೆ. ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಯಾರು ರೂಪಿಸಿದರು ಎನ್ನುವುದು ಸಂಘ ಪರಿವಾರಕ್ಕೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಬಾಹುಳ್ಯವಿರುವ ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಭಾರತದ ಇತಿಹಾಸ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಮರ ಮಹತ್ವದ ಪಾತ್ರವನ್ನು ಶ್ಲಾಘಿಸಿದ್ದಾರೆ.
ಮೊದಲು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ ಅಜೀಮುಲ್ಲಾ ಖಾನ್. ಅವರು ಸಂಘಪರಿವಾರದ ನಾಯಕರಲ್ಲ ಎಂದು ಅವರಿಗೆ ತಿಳಿದಿದೆಯೇ ?ಲ ಒಂದು ವೇಳೆ ಮುಸಲ್ಮಾನರೇ ಈ ಘೋಷಣೆಯನ್ನು ರಚಿಸಿದ್ದಾರೆ ಎಂಬ ಕಾರಣಕ್ಕೆ ಸಂಘಪರಿವಾರ ಈ ಘೋಷಣೆ ಕೂಗದೆ ಇರುತ್ತಾರೆಯೇ ಎಂದಿದ್ದಾರೆ.
ಮುಸ್ಲಿಮರು ಭಾರತವನ್ನು ತೊರೆಯಬೇಕು, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಹೇಳುವ ಸಂಘ ಪರಿವಾರದವರು ಈ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದು ಪಿಣರಾಯಿ ವಿಜಯನ್ ಅವರು ಸಂಘ ಪರಿವಾರದ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಮರ್ಥನೆ ಘೋಷಣೆಯ ಮೂಲವನ್ನು ಸುತ್ತುವರೆದಿರುವ ಮುಖ್ಯವಾಹಿನಿಯ ನಿರೂಪಣೆಗೆ ಸವಾಲು ಹಾಕುತ್ತದೆ, ಭಾರತದ ರಾಷ್ಟ್ರೀಯತಾವಾದಿ ನೀತಿಗೆ ಕೊಡುಗೆಗೆ ಕುರಿತು ಚರ್ಚೆ ಹುಟ್ಟುಹಾಕಿದೆ.