ಕಂಗನಾ ಮಾದಕ ಪೋಸ್ಟ್ ಸುಪ್ರೀಯಾ ವಿರುದ್ಧ ಕ್ರಮಕ್ಕೆ ಆಗ್ರಹ
ನವದೆಹಲಿ,ಮಾ.೨೬- ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಕುರಿತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಮಾಡಿರುವ “ಮಾದಕ” ಪೋಸ್ಟ್ ಹೊಸ ವಿವಾದ ಹುಟ್ಟುಹಾಕಿದ್ದು, ರಾಷ್ಟ್ರೀಯ ಮಹಿಳಾ ಆಯೋಗ, ಸುಪ್ರಿಯಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನೇಟ್ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಕಂಗನಾ ರಣಾವತ್ ಅವರ ಮಾದಕ ಪೊಟೋದ ಪೋಸ್ಟ್ , ಲೋಕಸಭೆ ಚುನಾವಣೆಗೆ ಕೆಲ ವಾರಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಹರಿದಾದಿತ್ತು ಎಂದು ಮಾದಕವಾದ ಪೋಟೋ ಹಂಚಿಕೊಂಡು ವಿವಾದ ಬಳಿಕ ಡಿಲೀಟ್ ಮಾಡಿದ್ದಾರೆ
ಸುಪ್ರಿಯಾ ಆರೋಪಕ್ಕೆ ತಿರುಗೇಟು ನೀಡಿರುವ ನಟಿ ಕಂಗನಾ ರಣಾವತ್ “ರಜ್ಜೋದಲ್ಲಿ ವೇಶ್ಯೆಯಿಂದ ಹಿಡಿದು ತಲೈವಿಯ ಕ್ರಾಂತಿಕಾರಿ ನಾಯಕಿವರೆಗೆ” ವಿಭಿನ್ನ ಮಹಿಳಾ ಪಾತ್ರಗಳನ್ನು ನಿರ್ವಹಿಸಿದ್ದೇನೆ. ನಮ್ಮ ಹೆಣ್ಣುಮಕ್ಕಳನ್ನು ಪೂರ್ವಾಗ್ರಹಗಳ ಸಂಕೋಲೆಯಿಂದ ಮುಕ್ತಗೊಳಿಸಬೇಕು ಅವರ ದೇಹದ ಭಾಗಗಳ ಬಗ್ಗೆ ನಾವು ಕುತೂಹಲದಿಂದ ನೋಡುವುದನ್ನು ಬಿಡಬೇಕು ಎಂದು ತಿರುಗೇಟು ನೀಡಿದ್ದಾರೆ
ಎಲ್ಲಕ್ಕಿಂತ ಹೆಚ್ಚಾಗಿ ನಾವು ಲೈಂಗಿಕ ಕಾರ್ಯಕರ್ತರ ಸವಾಲಿನ ಜೀವನ ಅಥವಾ ಸಂದರ್ಭಗಳನ್ನು ಕೆಲವು ರೀತಿಯ ನಿಂದನೆ ಅಥವಾ ನಿಂದೆಯಾಗಿ ಬಳಸುವುದನ್ನು ನಿಲ್ಲಿಸಬೇಕು. ಪ್ರತಿಯೊಬ್ಬ ಮಹಿಳೆ ಜೀವನ ನಡೆಸಲು ಅರ್ಹಳು. ಅವಳ ಘನತೆ ಅವಳದು ಎಂದು ಹೇಳಿದ್ದಾರೆ
ಈ ಕುರಿತು ವಿಡಿಯೋದಲ್ಲಿ ಸ್ಪಷ್ಟನೆ ನೀಡಿರುವ ಸುಪ್ರಿಯಾ ಶ್ರೀನೇಟ್ ಅವರು ತಿಳಿಯದೆ ತನ್ನ ಹ್ಯಾಂಡಲ್‌ನಿಂದ ಮಾಡಿದ “ಅನುಚಿತ ಪೋಸ್ಟ್‌ಗಳನ್ನು” ತೆಗೆದು ಹಾಕಿದ್ದೇನೆ ಎಂದಿದ್ದಾರೆ
“ಹಲವು ಜನರು ನನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಿಗೆ ಪ್ರವೇಶ ಮಾಡುತ್ತಾರೆ. ಅವರಲ್ಲಿ ಯಾರೋ ಅತ್ಯಂತ ಅನುಚಿತ ಪೋಸ್ಟ್ ಮಾಡಿದ್ದಾರೆ. ನನಗೆ ತಿಳಿದ ತಕ್ಷಣ ನಾನು ಪೋಸ್ಟ್ ಅನ್ನು ಅಳಿಸಿದ್ದೇನೆ. ನನ್ನನ್ನು ತಿಳಿದಿರುವ ಎಲ್ಲರಿಗೂ ವೈಯಕ್ತಿಕವಾಗಿಸಲು ಸಾಧ್ಯವಿಲ್ಲ. ಯಾವುದೇ ಮಹಿಳೆಯ ಬಗ್ಗೆ ಅಸಭ್ಯ ಕಾಮೆಂಟ್‌ಗಳು” ಮಾಡಿಲ್ಲ ಎಂದಿದ್ದಾರೆ
ನೋಡುವ ದೃಷ್ಟಿ ಸರಿಮಾಡಿಕೊಳ್ಳಿ
ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ”ಯುವಕನಿಗೆ ಟಿಕೆಟ್ ಸಿಕ್ಕರೆ” ಆತನ ಸಿದ್ಧಾಂತದ ಮೇಲೆ ಮೇಲೆ ಸಿಕ್ಕಿದೆ ಎಂದು ಬಿಂಬಿಸುವ ಜನರು ಯುವತಿಗೆ ಟಿಕೆಟ್ ಸಿಕ್ಕರೆ ಆಕೆಯ ಲೈಂಗಿಕತೆ, ಮಾದಕತೆಗೆ ಸಿಕ್ಕಿದೆ ಎನ್ನುವುದನ್ನು ನೋಡುವ ದೃಷ್ಠಿಕೋನ ಬಿಡಬೇಕು ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಹಾಗೆಯೇ ಕಾಂಗ್ರೆಸ್ಸಿಗರು ಚಿಕ್ಕ ಊರಿನ ಹೆಸರಿಟ್ಟು ಕಾಮಪ್ರಚೋದಕ ಮಾಡುತ್ತಿದ್ದಾರೆ. ಯುವಕನಿದ್ದಾನೆ ಎಂಬ ಕಾರಣಕ್ಕೆ ಮಂಡಿಯನ್ನು ಎಲ್ಲೆಡೆ ಲೈಂಗಿಕ ಸಂದರ್ಭದಲ್ಲಿ ಬಳಸಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.