ಭೋಜಶಾಲಾ ಸಂಕೀರ್ಣದಲ್ಲಿ ಸಮೀಕ್ಷೆ
ನವದೆಹಲಿ, ಮಾ.೨೫- ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಸೀದಿಯ ಆವರಣದಲ್ಲಿ ಹಿಂದೂ ದೇವರ ವಿಗ್ರಹದ ಕುರುಹು ಆಧರಿಸಿ ಇದೀಗ ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜಶಾಲಾ ಕಾಂಪ್ಲೆಕ್ಸ್‌ನಲ್ಲಿ ಭಾರತೀಯ ಪುರಾತತ್ವ ಸಮೀಕ್ಷಾ ಅಧಿಕಾರಿಗಳ ತಂಡ ಶೋಧ ನಡೆಸಿದೆ
ಭೋಜಶಾಲಾ ಸಂಕೀರ್ಣವನ್ನು ಮಾರ್ಚ್ ೨೨ರಿಂದ ಶೋಧ ನೆಡೆಸುತ್ತಿರುವ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಸತತ ನಾಲ್ಕನೇ ದಿನವಾದ ಇಂದೂ ಕೂಡ ಶೋಧ ಆರಂಭಿಸಿದೆ.
ಹಿಂದೂಗಳಿಗೆ, ಭೋಜಶಾಲಾ ಸಂಕೀರ್ಣ ವಾಗ್ದೇವಿ (ಸರಸ್ವತಿ) ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ, ಆದರೆ ಮುಸ್ಲಿಮರಿಗೆ ಇದು ಕಮಲ್ ಮೌಲಾ ಮಸೀದಿಯ ಸ್ಥಳವಾಗಿದೆ.
೨೦೦೩ ರಲ್ಲಿ ಏರ್ಪಾಡಿನ ಪ್ರಕಾರ, ಹಿಂದೂಗಳು ಮಂಗಳವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಕೀರ್ಣದಲ್ಲಿ ಪೂಜೆ ಮಾಡುತ್ತಾರೆ ಮತ್ತು ಮುಸ್ಲಿಮರು ಶುಕ್ರವಾರದಂದು ಮಧ್ಯಾಹ್ನ ೧ ರಿಂದ ೩ ರವರೆಗೆ ನಮಾಜ್ ಮಾಡುತ್ತಾರೆ.
ಈ ಹಿನ್ನೆಲೆಯಲ್ಲಿ ಮತ್ತಷ್ಟು ಹಿಂದೂ ದೇವರ ಕುರುಹು ಮತ್ತೆ ಮಾಡಲು ಅಧಿಕಾರಿಗಳ ತಂಡ ಪ್ರಯತ್ನ ಮಾಡಿದೆ.