ಐಸಿಸ್ ಉಗ್ರ ಸಂಘಟನೆ ಸೇರಲು ಯತ್ನಿಸಿ ಸಿಕ್ಕಿಬಿದ್ದ ಐಐಟಿ ವಿದ್ಯಾರ್ಥಿ
ಗುವಾಹಟಿ,ಮಾ.೨೪- ಐಸಿಸ್ ಸೇರಲು ಹೊರಟಿದ್ದ ಐಐಟಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಐಐಟಿ-ಗುವಾಹಟಿ ವಿದ್ಯಾರ್ಥಿಯೊಬ್ಬ ಭಯೋತ್ಪಾದಕ ಗುಂಪಿಗೆ ಸೇರಲು ಹೊರಟಿದ್ದು, ಶನಿವಾರ ಸಂಜೆ ಅಸ್ಸಾಂನ ಹಜೋದಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಐಐಟಿ ಗುವಾಹಟಿಯ ನಾಲ್ಕನೇ ವರ್ಷದ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿ ಐಸಿಸ್‌ಗೆ ಸೇರಲು ಹೊರಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಿಪಿ ಸಿಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಐಟಿ-ಗುವಾಹಟಿ ವಿದ್ಯಾರ್ಥಿ ಐಎಸ್‌ಎಸ್‌ಗೆ ಸೇರಲಿದ್ದಾನೆ ಎಂದು ವ್ಯಕ್ತಿಯೊಬ್ಬರು ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಲ್ಯಾಣ್ ಕುಮಾರ್ ಪಾಠಕ್ ಹೇಳಿದ್ದಾರೆ. ಐಐಟಿ-ಗುವಾಹಟಿ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಆದರೆ, ವಿದ್ಯಾರ್ಥಿ ಮಧ್ಯಾಹ್ನದಿಂದ ಕಾಣೆಯಾಗಿದ್ದು, ಅವನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಇದರಿಂದಾಗಿ ಪೊಲೀಸರು ಹಲವು ಗುಂಪುಗಳಾಗಿ ವಿಭಜಿಸಿ ವಿದ್ಯಾರ್ಥಿನಿಗಾಗಿ ಹುಡುಕಾಟ ನಡೆಸಿದ್ದು, ಗುವಾಹಟಿಯಿಂದ ೩೦ ಕಿ.ಮೀದೂರದ ಹಜೋ ಪ್ರದೇಶದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಈ ವಿದ್ಯಾರ್ಥಿಯನ್ನು ದೆಹಲಿಯ ಓಗ್ಲಾ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ನಂತರ ವಿದ್ಯಾರ್ಥಿಯರ ಹಾಸ್ಟೆಲ್ ಕೊಠಡಿಯನ್ನು ಶೋಧಿಸಿದಾಗ ಐಸಿಸ್ ನಂತೆಯೇ ಕಪ್ಪು ಬಾವುಟ ಪತ್ತೆಯಾಗಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶದಿಂದ ಧುಬ್ರಿ ಜಿಲ್ಲೆಯಲ್ಲಿ ಐಸಿಸ್ ಭಾರತದ ಮುಖ್ಯಸ್ಥ ಹ್ಯಾರಿಸ್ ಫಾರೂಕಿ ಅಲಿಯಾಸ್ ಹರೀಶ್ ಅಲ್ಮಲ್ ಫಾರೂಕಿ ಮತ್ತು ಅವನ ಸಹಚರ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಅವರನ್ನು ಬಂಧಿಸಿದ ನಾಲ್ಕು ದಿನಗಳ ನಂತರ ವಿದ್ಯಾರ್ಥಿಯನ್ನು ಬಂಧಿಸಲಾಯಿಗಿದೆ.