ಸಾಲ ನೀಡಿ ಭಾರತಕ್ಕೆ ಮಾಲ್ಡೀವ್ಸ್ ಮೊರೆ
ಮಾಲೆ,ಮಾ. ೨೩- ಮಾಲ್ಡೀವ್ಸ್ ನಲ್ಲಿದ್ದ ಭಾರತೀಯ ಸೇನಾ ಸಿಬ್ಬಂದಿಯನ್ನು ಬಲವಂತವಾಗಿ ಹೊರಹಾಕಿದ ನಂತರ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಭಾರತದಿಂದ ಸಾಲ ನೀಡುವಂತೆ ಮನವಿ ಮಾಡಿದ್ದಾರೆ.
ಭಾರತ-ವಿರೋಧಿ ನಿಲುವು ತಾಳಿದ ನಂತರ, ಚೀನಾ ಪರ ವಾಲಿದ್ದ ಮೊಹಮದ್ ಮುಯಿಜ್ಜು ಇದೀಗ ಭಾರತ ದೇಶದ “ಹತ್ತಿರದ ಮಿತ್ರ” ದೇಶವಾಗಿ ಮುಂದುವರೆಯಲಿದೆ ಮತ್ತು ದ್ವೀಪಸಮೂಹ ರಾಷ್ಟ್ರಕ್ಕೆ ಸಾಲ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಕಳೆದ ವರ್ಷದ ಅಂತ್ಯದ ವೇಳೆಗೆ ಮಾಲ್ಡೀವ್ಸ್ ಭಾರತಕ್ಕೆ ಸುಮಾರು ೪೦೦.೯ ಮಿಲಿಯನ್ ಡಾಲರ್ ಸಾಲ ಬಾಕಿ ಉಳಿಸಿಕೊಂಡಿದೆ.
ಕಳೆದ ನವೆಂಬರ್‌ನಲ್ಲಿ ಮೊಹಮ್ಮದ್ ಮುಯಿಜ್ಜು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಭಾರತದ ಕಡೆಗೆ ಕಠಿಣ ನಿಲುವು ಅನುಸರಿಸಿದ್ದಾರೆ ಮತ್ತು ಮೂರು ವಾಯುಯಾನ ವೇದಿಕೆಗಳನ್ನು ನಿರ್ವಹಿಸುತ್ತಿರುವ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ದೇಶದಿಂದ ತೊರೆಯುವಂತೆ ಮಾಡಿದ್ದಾರೆ.
ಈ ನಡುವೆ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೊದಲ ಸಂದರ್ಶನದಲ್ಲಿ, ಮುಯಿಝು ಮಾಲ್ಡೀವ್ಸ್‌ಗೆ ನೆರವು ನೀಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಮತ್ತು “ಅತಿ ಹೆಚ್ಚು” ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಭಾರತಕ್ಕೆ ಮಾಲ್ಡೀವ್ಸ್‌ನ ಹತ್ತಿರದ ದೇಶ, ಲಕ್ಷದ್ವೀಪ್‌ನ ಮಿನಿಕಾಯ್ ದ್ವೀಪದಿಂದ ಕೇವಲ ೭೦ ನಾಟಿಕಲ್ ಮೈಲುಗಳು ಮತ್ತು ಮುಖ್ಯ ಭೂಭಾಗದ ಪಶ್ಚಿಮ ಕರಾವಳಿಯಿಂದ ಸುಮಾರು ೩೦೦ ನಾಟಿಕಲ್ ಮೈಲುಗಳು ಮತ್ತು ಹಿಂದೂ ಮಹಾಸಾಗರದ ಪ್ರದೇಶದ ಮೂಲಕ ಹಾದುಹೋಗುವ ವಾಣಿಜ್ಯ ಸಮುದ್ರ ಮಾರ್ಗಗಳ ಕೇಂದ್ರದಲ್ಲಿದೆ ಎಂದಿದ್ದಾರೆ.
“ಸತತ ಸರಕಾರಗಳ ಮೇಲೆ ತೆಗೆದುಕೊಂಡ ಭಾರೀ ಸಾಲಗಳ” ಮರುಪಾವತಿಯಲ್ಲಿ ಸಾಲ ಪರಿಹಾರ ಕ್ರಮಗಳಿಗೆ ಅವಕಾಶ ಕಲ್ಪಿಸುವಂತೆ ಮುಯಿಝು ಭಾರತಕ್ಕೆ ಮನವಿ ಮಾಡಿದ್ದಾರೆ
ಭಾರತದಿಂದ ಪಡೆದ ಸಾಲಗಳು ಮಾಲ್ಡೀವಿಯನ್ ಆರ್ಥಿಕತೆಯಿಂದ ಭರಿಸಲಾಗದಷ್ಟು ಹೆಚ್ಚು ಎಂದು ಹೇಳಿದ ಅವರು . “ಆದ್ದರಿಂದ, ಸಾಲಗಳ ಮರುಪಾವತಿ ರಚನೆಯಲ್ಲಿ ಮೃದುತ್ವವನ್ನು ಅನ್ವೇಷಿಸಲು ಚರ್ಚೆ ನಡೆಸುತ್ತಿದ್ದೇವೆ.ಮಾಲ್ಡೀವ್ಸ್‌ನಲ್ಲಿ ಏಪ್ರಿಲ್ ಮಧ್ಯದಲ್ಲಿ ನಡೆಯಲಿರುವ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ಈ ಹೇಳಿಕೆ ಬಂದಿರುವುದು ಮಹತ್ವ ಪಡೆದುಕೊಂಡಿದೆ.
ಭಾರತದೊಂದಿಗೆ ವಿವಾದದ ಏಕೈಕ ವಿಷಯವೆಂದರೆ” ಭಾರತೀಯ ಸೇನೆಯ ಉಪಸ್ಥಿತಿ ಎಂದಿರುವ”ಅವರು ಬೇರೆ ಯಾವುದಾದರೂ ದೇಶದ ಸೈನಿಕರಾಗಿದ್ದರೂ ಸಹ, ನಾವು ಅವರೊಂದಿಗೆ ಅದೇ ರೀತಿಯಲ್ಲಿ ವ್ಯವಹರಿಸುತ್ತಿದ್ದೆವು. ಇದು ವೈಯಕ್ತಿಕ ಏನೂ ಅಲ್ಲ, ಆದರೆ ನಮ್ಮ ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ” ಎಂದು ಹೇಳಿದ್ದಾರೆ.