17+1 ಅಭ್ಯರ್ಥಿಗಳ ಪ್ರಕಟ: ಗರಿಗೆದರಿದೆ ‌ಅಖಾಡ ರಾಯಚೂರಿನಿಂದ ಜಿ.ಕುಮಾರ್ ನಾಯ್ಕೆಗೆ ಟಿಕೆಟ್
ನವದೆಹಲಿ,ಮಾ.21- ಲೋಕಸಭೆ ಚುನಾವಣೆ ದಿನಾಂಕ‌ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದ‌ 17 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಸೇರಿದಂತೆ 3 ನೇ ಪಟ್ಟಿಯಲ್ಲಿ 57 ಮಂದಿಗೆ ಟಿಕೆಟ್ ನೀಡಲಾಗಿದೆ.
ಕರ್ನಾಟಕದ 17 ಲೋಕಸಭಾ ಸ್ಥಾನ ಮತ್ತು ಸುರಪುರ ವಿಧಾನಸಭೆ ಉಪ ಚುನಾವಣರಯಲ್ಲಿ ರಾಜ ವೆಂಕಟೇಶ್ ನಾಯ್ಕ ಅವರಿಗೆ ಟಿಕೆಟ್ ನೀಡಲಾಗಿದೆ. 17 ಮಂದಿಯಲ್ಲಿ 5 ಮಂದಿ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಅಚ್ಚರಿ ಎಂದರೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಜಿ. ಕುಮಾರ್ ನಾಯ್ಕ್ ಅವರಿಗೆ ರಾಯಚೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ, ಲಕ್ಣ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಗೆ ಬೆಳಗಾವಿ, ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಗೆ ಚಿಕ್ಕೋಡಿ, ಈಶ್ಚರ‌ಖಂಡ್ರೆ ಪುತ್ರ ಸಾಗರ್ ಖಂಡ್ರೆಗೆ ಬೀದರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ದಾವಣಗೆರೆ ಕ್ಷೇತ್ರದಿಂದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಅವರಿಗೆ ಟಿಕೆಟ್ ನೀಡಲಾಗಿದೆ.
ಉಳಿದಂತೆ ಯಾರಿಗೆ ಎಲ್ಲಿ ಟಿಕೆಟ್
ಮೊದಲ ಪಟ್ಟಿಯಲ್ಲಿ 7 ಮಂದಿಯನ್ನು ಪ್ರಕಟಿಸಲಾಗಿತ್ತು. ಇಂದು 17 ಮಂದಿ ಪ್ರಕಟಿಸಲಾಗಿದ್ದು ಒಟ್ಟು 24 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಲಾಗಿದೆ. ಇನ್ನೂ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಬೇಕಾಗಿದೆ.
ಉಪ ಚುನಾವಣೆ
ಸುರಪುರದ ಶಾಸಕ ರಾಜಾ ವೆಂಕಟಪ್ಪ‌ನಾಯಕ ನಿಧನದಿಂದ ತೆರವಾಗಿರುವ ಸ್ಥಾನದ ಉಪ ಚುನಾವಣೆಗೆ ಅವರ ಪುತ್ರ ರಾಜ ವೇಣುಗೋಪಾಲ್ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಗಿದೆ.