ಹೊಸ ಕೋವಿಡ್ ರೂಪಾಂತರ ಎಕ್ಸ್‌ಇಸಿ ಸೃಷ್ಟಿಸಿದ ಆತಂಕ
ನ್ಯೂಯಾರ್ಕ್,ಸೆ.೧೮-ಕೊರೊನಾ ವೈರಸ್ ವಿನಾಶಕ್ಕೆ ಅಂತ್ಯವಿಲ್ಲ ಎಂಬಂತಾಗಿದೆ.ಒಂದರ ಹಿಂದೆ ಒಂದರಂತೆ ಬರುತ್ತಿರುವ ರೂಪಾಂತರಗಳು ಆತಂಕವನ್ನು ಹೆಚ್ಚಿಸಿವೆ. ಈಗ ಮತ್ತೊಂದು ಹೊಸ ರೂಪಾಂತರ ಎಕ್ಸ್‌ಇಸಿ -ಹೊಸ ಕೋವಿಡ್ ಎಕ್ಸ್‌ಇಸಿ ರೂಪಾಂತರ ಯುರೋಪ್‌ನಲ್ಲಿ ವೇಗವಾಗಿ ಹರಡುತ್ತಿದೆ. ಒಮಿಕ್ರಾನ್ ಉಪತಳಿಯಾಗಿರುವ ಎಕ್ಸ್‌ಇಸಿ ರೂಪಾಂತರವನ್ನು ಕಳೆದ ಜೂನ್‌ನಲ್ಲಿ ಜರ್ಮನಿಯಲ್ಲಿ ಗುರುತಿಸಲಾಗಿದೆ.ಇದು ಮೊದಲು ಜೂನ್ ೨೦೨೪ ರಲ್ಲಿ ಜರ್ಮನಿಯಲ್ಲಿ ಕಂಡುಬಂದಿದೆ.ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸುಮಾರು ೨೭ ದೇಶಗಳಲ್ಲಿ ಈ ವೈರಸ್ ಭಾರಿ ಆತಂಕ ಹುಟ್ಟಿಸಿದೆ.
ಪ್ರಪಂಚದಾದ್ಯಂತ ಮತ್ತೇನು ಗಂಡಾಂತರ ಕಾದಿದಿಯೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.ಯುಕೆ, ಯುಎಸ್ , ಡೆನ್ಮಾರ್ಕ್, ಪೋಲೆಂಡ್, ನಾರ್ವೆ, ಲಕ್ಸೆಂಬರ್ಗ್, ಉಕ್ರೇನ್ ಪೋರ್ಚುಗಲ್ ಸೇರಿದಂತೆ ಸುಮಾರು ೨೭ ದೇಶಗಳಲ್ಲಿ ೫೦೦ ವೈರಸ್ ಮಾದರಿಗಳು ಕಾಣಿಸಿಕೊಂಡಿವೆ.
ಜರ್ಮನಿ, ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ಮಾರಣಾಂತಿಕ ಪ್ರಮಾಣದಲ್ಲಿ ವೈರಸ್ ಹರಡುತ್ತಿವೆ. ಎಚ್ಚೆತ್ತು ಆದಷ್ಟು ಬೇಕ ಲಸಿಕೆ ಪಡೆದುಕೊಂಡರೇ ಕನಿಷ್ಠ ಮರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಲಂಡನ್‌ನಲ್ಲಿರುವ ಜೆನೆಟಿಕ್ಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊಫೆಸರ್ ಫ್ರಾಂಕೋಯಿಸ್ ಬಲೂಕ್ಸ್ ತಿಳಿಸಿದ್ದಾರೆ.ವಿಜ್ಞಾನಿಗಳು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇದು ಮತ್ತಷ್ಟು ಸಾಂಕ್ರಾಮಿಕವಾಗುವ ಸಾಧ್ಯತೆಯಿದೆ. ಇದು ಸಂಭವಿಸಿದಲ್ಲಿ, ಆದರೆ ಇದು ವೇಗವಾಗಿ ವ್ಯಾಪಿಸಿ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಎಕ್ಸ್‌ಇಸಿ ರೂಪಾಂತರವು ಅಸ್ತಿತ್ವದಲ್ಲಿರುವ ಕೋವಿಡ್ -೧೯ ಲಸಿಕೆಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.