ಚೋಪ್ರಾ ಮೊಬೈಲ್ ನಂ ಕೇಳಿದ ಮಹಿಳಾ ಅಭಿಮಾನಿಗಳು
ನವದೆಹಲಿ,ಸೆ.೧೮-ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾಗವಹಿಸಿದ್ದರು. ನೀರಜ್ ಒಂದು ಸೆಂಟಿಮೀಟರ್ ಅಂತರದಿಂದ ಪ್ರಶಸ್ತಿ ತಪ್ಪಿಸಿಕೊಂಡರೂ ಅವರ ಫ್ಯಾನ್ ಫಾಲೋಯಿಂಗ್ ಸ್ವಲ್ಪವೂ ಕಡಿಮೆಯಾಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಇಬ್ಬರು ಸುಂದರ ಮಹಿಳಾ ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಒತ್ತಾಯಿಸುತ್ತಿರುವುದು ಕಂಡುಬಂದಿದೆ.
ನೀರಜ್ ಇಬ್ಬರನ್ನೂ ನಿರಾಸೆಗೊಳಿಸಲಿಲ್ಲ ನೀರಜ್ ಕೂಡ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ, ಇದಾದ ಬಳಿಕ ಮಹಿಳಾ ಅಭಿಮಾನಿಗಳು ನೀರಜ್ ಮೊಬೈಲ್ ಫೋನ್ ನಂಬರ್ ಕೇಳಿದ್ದಾನೆ. ನೀರಜ್ ಮನವಿಯನ್ನು ನಯವಾಗಿ ತಿರಸ್ಕರಿಸಿದ್ದಾರೆ, ಇದು ಮಹಿಳಾ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದೆ. ಇದರ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ನೀರಜ್ ನ ವಿನಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.