ವಲಸಿಗರ ಬಂಧನಕ್ಕೆ ಕಠಿಣ ಕಾನೂನು
ನ್ಯೂಯಾರ್ಕ್, ಮಾ.೨೦- ಅಮೆರಿಕಾದ ವಲಸೆ ನೀತಿಗೆ ಸಂಬಂಧಿಸಿದಂತೆ ಇತ್ತೀಚಿಗಿನ ವರ್ಷಗಳಲ್ಲಿ ಯುಎಸ್‌ನ ಟೆಕ್ಸಾಸ್ ರಾಜ್ಯದಲ್ಲಿ ಅತೀ ಕಠಿಣವಾದ ಕಾನೂನು (ಎಸ್‌ಬಿ೪) ಜಾರಿಗೆ ಅಲ್ಲಿನ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಸದ್ಯ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಜೋ ಬೈಡೆನ್ ಸರ್ಕಾರವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕಾನೂನಿನನ್ವಯ ಅಮೆರಿಕಾ-ಮೆಕ್ಸಿಕೊ ಗಡಿ ಪ್ರದೇಶವನ್ನು ಅಕ್ರಮವಾಗಿ ದಾಟಿ ಬಂದ ವಲಸಿಗರನ್ನು ಬಂಧಿಸಲು ಹಾಗೂ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಅನುವು ಮಾಡಿಕೊಡಲಿದೆ. ಸದ್ಯ ಅಮೆರಿಕಾ-ಮೆಕ್ಸಿಕೊ ಗಡಿ ಪ್ರದೇಶವಾದ ಟೆಕ್ಸಾಸ್ ಮೂಲಕ ಭಾರೀ ಸಂಖ್ಯೆಯಲ್ಲಿ ಅಕ್ರಮವಾಗಿ ನಾಗರಿಕರು ಅಮೆರಿಕಾ ಪ್ರವೇಶಿಸುತ್ತಿದ್ದು, ಅವರನ್ನು ಬಂಧಿಸಲು ಅಥವಾ ಕಾನೂನು ಕ್ರಮ ತೆಗೆದುಕೊಳ್ಳಲು ಈ ಹಿಂದೆ ಅವಕಾಶ ಇರಲಿಲ್ಲ. ಸದ್ಯ ಬಂಧನ ಹಾಗೂ ಕ್ರಮಕ್ಕೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಸದ್ಯದ ಕಾನೂನನ್ನು ಅಧ್ಯಕ್ಷ ಜೋ ಬೈಡೆನ್ ಅವರ ಸರ್ಕಾರವು ಅಸವಿಂಧಾನಿಕ ಎಂದು ಕರೆದಿದೆ. ಯಾಕೆಂದರೆ ಈ ಹಿಂದೆ ಫೆಡರಲ್ ಸರ್ಕಾರ ಮಾತ್ರ ಕಾನೂನನ್ನು ಜಾರಿಗೊಳಿಸುವ ವ್ಯವಸ್ಥೆ ಹೊಂದಿತ್ತು. ಅಲ್ಲದೆ ರಾಜ್ಯವೊಂದು ವಲಸೆ ನೀತಿಗೆ ಸಂಬಂಧಿಸಿದಂತೆ ಸ್ವತಂತ್ರವಾಗಿ ಪ್ರತ್ಯೇಕ ರೂಪಿಸಿಕೊಳ್ಳುವ ಅವಕಾಶ ಇರಲಿಲ್ಲ. ಸದ್ಯ ಟೆಕ್ಸಾಸ್ ರಾಜ್ಯಕ್ಕೆ ಕೋರ್ಟ್ ಅವಕಾಶ ನೀಡಿದೆ. ಅಲ್ಲದೆ ಟೆಕ್ಸಾಸ್ ಕಾನೂನು ಎಸ್‌ಬಿ೪ ಕಾನೂನು ಪ್ರಕಾರ ಶಾಲೆಗಳು, ಆರೋಗ್ಯ ಸೌಲಭ್ಯಗಳು ಮತ್ತು ಪೂಜಾ ಸ್ಥಳಗಳನ್ನು ಹೊರತುಪಡಿಸಿ, ಅಕ್ರಮವಾಗಿ ಗಡಿ ದಾಟಿದ ಶಂಕಿತ ಯಾರನ್ನಾದರೂ ನಿಲ್ಲಿಸುವ ಮತ್ತು ಬಂಧಿಸುವ ಅಧಿಕಾರವನ್ನು ಸ್ಥಳೀಯ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ನೀಡುತ್ತದೆ. ಇನ್ನು ಶಿಕ್ಷೆಗಳು ದುಷ್ಕೃತ್ಯಗಳಿಂದ ಅಪರಾಧಗಳು ಮತ್ತು ಸಂಭಾವ್ಯ ಸೆರೆವಾಸ ಅಥವಾ ೨ ಸಾವಿರ ಡಾಲರ್ ವರೆಗಿನ ದಂಡದವರೆಗೆ ಇರುತ್ತದೆ. ಅದೂ ಅಲ್ಲದೆ ಗಡೀಪಾರು ಮಾಡಿದ ನಂತರ ಅಕ್ರಮವಾಗಿ ಟೆಕ್ಸಾಸ್‌ಗೆ ಮತ್ತೆ ಪ್ರವೇಶಿಸುವವರಿಗೆ ದಂಡಗಳು ವ್ಯಕ್ತಿಯ ವಲಸೆ ಮತ್ತು ಕ್ರಿಮಿನಲ್ ಇತಿಹಾಸವನ್ನು ಅವಲಂಬಿಸಿ ಬರೊಬ್ಬರಿ ೨೦ ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು.