ಮೇ ವೇಳೆಗೆ ಉತ್ತರ ಗಾಜಾದಲ್ಲಿ ಬರಗಾಲ
ನ್ಯೂಯಾರ್ಕ್, ಮಾ.೧೯- ಸೂಕ್ತ ಮತ್ತು ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮೇ ತಿಂಗಳ ವೇಳೆಗೆ ಉತ್ತರ ಗಾಜಾವನ್ನು ಬರಗಾಲ ಆವರಿಸಲಿದೆ. ಗಾಝಾ ಪಟ್ಟಿಯಲ್ಲಿ ವಾಸಿಸುತ್ತಿರುವ ಅರ್ಧದಷ್ಟು ಜನರು ಭೀಕರ ಹಸಿವೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಾಯೋಜಕತ್ವದ ಇಂಟಗ್ರೇಟಡ್ ಫೂಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಶನ್ (ಐಪಿಸಿ) ವರದಿ ಮಾಡಿದೆ.
ಗಾಜಾದ ಅರ್ಧದಷ್ಟು ಪ್ರತಿಶತ ಜನರು (೧೧ ಲಕ್ಷ) ಈಗಾಗಲೇ ಹಸಿವಿನಿಂದ ಬಳಲುತ್ತಿದ್ದಾರೆ. ಜುಲೈ ವೇಳೆಗೆ ಉಳಿದ ಜನರು ಉಳಿದ ಜನರು ತೀವ್ರ ರೀತಿಯ ಕ್ಷಾಮಕ್ಕೆ ಒಳಗಾಗಬಹುದು. ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಸೇನಾ ದಾಳಿಯಿಂದಾಗಿ ಸುಮಾರು ೧೧ ಲಕ್ಷ ಜನರು ಭೀಕರ ಆಹಾರ ಅಭದ್ರತೆಗೆ ಒಳಗಾಗಿದ್ದಾರೆ. ಮುಖ್ಯವಾಗಿ ಉತ್ತರ ಗಾಜಾದಲ್ಲಿ ಪರಿಸ್ಥಿತಿ ಭೀಕರವಾಗಿದೆ. ಆಹಾರ ಮತ್ತು ಇತರ ನೆರವು ಸಾಮಗ್ರಿಗಳನ್ನು ವಿತರಿಸಲು ಅಲ್ಲಿಗೆ ಹೋಗುವುದು ಭಾರೀ ಕಷ್ಟದ ಕೆಲಸವಾಗಿದೆ ಎಂದು ಇಂಟಿಗ್ರೇಟೆಡ್ ಫುಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಶನ್ (ಐಪಿಸಿ) ತಿಳಿಸಿದೆ. ಒಂದು ಪ್ರದೇಶದ ಜನಸಂಖ್ಯೆಯ ೫೦ ಶೇಕಡ ಭಾಗ ಭೀಕರ ಹಸಿವೆಯಿಂದ ಬಳಲುವುದು ಮತ್ತು ಬರಗಾಲಕ್ಕೆ ಒಳಗಾಗುವುದು ಹಿಂದೆಂದೂ ನಡೆದಿಲ್ಲ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ)ಯ ಉಪ ಮಹಾ ನಿರ್ದೇಶಕಿ ಬೆತ್ ಬೆಕ್ಡೋಲ್ ಎಎಫ್ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಉತ್ತರ ಗಾಜಾದಲ್ಲಿ ಆಹಾರ ಬಿಕ್ಕಟ್ಟು ಅತ್ಯಂತ ತೀವ್ರವಾಗಿದೆ. ಬಡತನ ಚಾರಿಟಿ ಕೇರ್ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಉತ್ತರ ಗಾಜಾದಲ್ಲಿ ಕನಿಷ್ಠ ೨೭ ಜನರಲ್ಲಿ ೨೩ ಮಕ್ಕಳು ಅಪೌಷ್ಟಿಕತೆ ಅಥವಾ ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾರೆ. ಉತ್ತರದ ಹಲವಾರು ಆಸ್ಪತ್ರೆಗಳ ವೈದ್ಯರ ಪ್ರಕಾರ ನೈಜ ಸಂಖ್ಯೆಯು ಹೆಚ್ಚಾಗಿದೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ಪವಿತ್ರ ರಂಝಾನ್ ತಿಂಗಳಾಗಿರುವ ಹಿನ್ನೆಲೆಯಲ್ಲಿ ಸದ್ಯ ನಾಗರಿಕರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಇಲ್ಲಿನ ಬಹುತೇಕ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ.