ಮನೆಗೆಲಸಕ್ಕೆ ೭೯ ಲಕ್ಷ ರೂ.ಪರಿಹಾರ ಪಡೆದ ಪತ್ನಿ
ಸ್ಪೇನ್ ,ಮಾ.೧೯- ಎಲ್ಲಾ ಕೆಲಸಗಳಿಗೆ ಸಂಬಳವಿದೆ. ಆದರೆ ಗಂಡ, ಮಕ್ಕಳನ್ನು ನೋಡಿಕೊಳ್ಳುವ, ಅಡುಗೆ ಮಾಡುವ, ಬಟ್ಟೆ ಒಗೆಯುವ, ಎಲ್ಲರ ಕಾಳಜಿ ವಹಿಸುವ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಗೃಹಿಣಿಯ ಕೆಲಸಕ್ಕೆ ಸಂಬಳವಿಲ್ಲ, ಆದರೆ ಅವಳು ಈ ಎಲ್ಲಾ ಜವಾಬ್ದಾರಿಗಳನ್ನು ಸಂತೋಷದಿಂದ ಮಾಡುತ್ತಾಳೆ ಹೊರತು ಸಂಬಳಕ್ಕಾಗಿ ಅಲ್ಲ. ಆದರೆ ಸ್ಪೇನ್‌ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ಇಲ್ಲಿ ೨೬ ವರ್ಷಗಳಿಂದ ಗೃಹಿಣಿಯಾಗಿ ಮಾಡಿದ ಮನೆಗೆಲಸಕ್ಕೆ ಪತಿ ತನಗೆ ಪರಿಹಾರ ನೀಡುವಂತೆ ಪತ್ನಿ ಕೋರ್ಟ್ ಮೊರೆ ಹೋಗಿದ್ದಾಳೆ. ಅಂತಿಮವಾಗಿ ನ್ಯಾಯಾಲಯವು ೨೬ ವರ್ಷಗಳಿಂದ ಗೃಹಿಣಿಯಾಗಿ ಮಾಡಿದ ಮನೆಗೆಲಸಕ್ಕೆ ರೂ.೭೯ ಲಕ್ಷ ೪೮ ಸಾವಿರ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿದೆ.
ಇತ್ತೀಚೆಗಷ್ಟೇ ಸ್ಪೇನ್‌ನ ಪಾಂಟೆವೆಡ್ರಾ ಪ್ರಾಂತೀಯ ನ್ಯಾಯಾಲಯ ಈ ತೀರ್ಪು ನೀಡಿದೆ, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ೭೯ ಲಕ್ಷ ೪೮ ಸಾವಿರ ರೂ. ಪರಿಹಾರವನ್ನು ಪಾವತಿಸಲಾಗಿದೆ. ಆದರೆ ದಂಪತಿಗಳ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.
೧೯೯೬ ರಲ್ಲಿ ವಿವಾಹವಾದ ದಂಪತಿಗಳು ಕೆಲವು ಭಿನ್ನಾಭಿಪ್ರಾಯಗಳಿಂದ ೨೦೨೨ ರಲ್ಲಿ ವಿಚ್ಛೇದನ ಪಡೆದರು. ಸುಮಾರು ೨೬ ವರ್ಷಗಳ ದಾಂಪತ್ಯ ಜೀವನದಲ್ಲಿ ಹೆಂಡತಿ ಮನೆಗೆಲಸ ಮಾಡಿ ಮಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದಳು. ಜೀವನ ನಿರ್ವಹಣೆಗೆ ಏನೂ ಸಿಗದ ಕಾರಣ ಪತ್ನಿ ನ್ಯಾಯಾಲಯದ ಮೊರೆ ಹೋಗಿ ೨೬ ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದ ಪತಿಯಿಂದ ೭೯ ಲಕ್ಷ ರೂ. ಅವಳಿಗೆ ಪರಿಹಾರ ಸಿಕ್ಕಿದೆ.