ಅಮೆರಿಕದಿಂದ ಭಾರತಕ್ಕೆ ಬರಲಿವೆ ಅಪಾಚೆ
ನವದೆಹಲಿ,ಮಾ.೧೬- ಮುಂದಿನ ಮೇ ತಿಂಗಳಲ್ಲಿ ಆರು ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಅಮೇರಿಕಾದಿಂದ ಭಾರತಕ್ಕೆ ಬರಲಿವೆ. ಇದಕ್ಕೆ ಮುನ್ನವೇ ಭಾರತೀಯ ಸೇನೆ ಜೋಧ್‌ಪುರಕ್ಕೆ ಹೊಂದಿಕೊಂಡಂತಿರುವ ಪಾಕಿಸ್ತಾನದ ಪಶ್ಚಿಮ ಮುಂಭಾಗದಲ್ಲಿ ಹೆವಿ ಡ್ಯೂಟಿ ಹೆಲಿಕಾಪ್ಟರ್‌ಗಳಿಗಾಗಿ ಸ್ಕ್ವಾಡ್ರನ್ ಅನ್ನು ಹೆಚ್ಚಿಸಿದೆ.
ಆರ್ಮಿ ಏವಿಯೇಷನ್‌ನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಅಜಯ್ ಸೂರಿ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಅಪಾಚೆ ಸ್ಕ್ವಾಡ್ರನ್‌ಗೆ ಸೇರ್ಪಡೆ ಮಾಡಲಾಯಿತು.”ಫೆಬ್ರವರಿಯಲ್ಲಿ ವಿತರಣೆ ಪ್ರಾರಂಭವಾಗಬೇಕಿತ್ತು, ಆದರೆ ಸ್ವಲ್ಪ ವಿಳಂಬವಾಗಿದೆ ಎಂದು ಹೇಳಲಾಗಿದೆ.
ಮೊದಲ ಮೂರು ಅಪಾಚೆಗಳು ಈಗ ಮೇ ತಿಂಗಳಿನಲ್ಲಿ ಬರಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
೨೦೧೫ರ ಸೆಪ್ಟೆಂಬರ್ರಲ್ಲಿ ಅಮೇರಿಕಾದೊಂದಿಗೆ ಮಾಡಿಕೊಂಡ ಒಪ್ಪಂದದ ಅನ್ವಯ ೧೩,೯೫೨ ಕೋಟಿ ರೂಪಾಯಿಗಳ ಒಪ್ಪಂದದ ಅಡಿಯಲ್ಲಿ ಈಗಾಗಲೇ ೨೨ ಬೋಯಿಂಗ್ ತಯಾರಿಸಿದ ಅಪಾಚೆ ಹೆಲಿಕಾಪ್ಟರ್‍ಗಳನ್ನು ಸೇನೆಗೆ ಸೇರ್ಪಡೆಗೊಳಿಸಿದೆ. ಫೆಬ್ರವರಿ ೨೦೨೦ ರಲ್ಲಿ ಒಪ್ಪಂದ ಮಾಡಿಕೊಂಡ ೫,೬೯೧ ಕೋಟಿ ರೂಪಾಯಿಗಳ ಒಪ್ಪಂದದ ಅಡಿಯಲ್ಲಿ ಸೇನೆ ಆರು ಚಾಪರ್‍ಗಳನ್ನು ಸದ್ಯದಲ್ಲಿಯೇ ಪಡೆಯಲಿದೆ
“ಟ್ಯಾಂಕ್ಸ್ ಇನ್ ದಿ ಏರ್” ಎಂದು ಕರೆಯಲ್ಪಡುವ ಅಪಾಚೆಗಳು ಸ್ಟಿಂಗರ್ ಏರ್-ಟು-ಏರ್ ಕ್ಷಿಪಣಿಗಳು, ಹೆಲ್ಫೈರ್ ಲಾಂಗ್‌ಬೋ ಏರ್-ಟು-ಗ್ರೌಂಡ್ ಕ್ಷಿಪಣಿಗಳು, ಬಂದೂಕುಗಳು ಮತ್ತು ರಾಕೆಟ್‌ಗಳಿಂದ ಶಸ್ತ್ರಸಜ್ಜಿತವಾಗಿವೆ. “ಅಪಾಚೆಗಳು ಪ್ರಾಥಮಿಕವಾಗಿ ಸೈನ್ಯದ ‘ಸ್ಟ್ರೈಕ್ ಕಾಪ್ರ್ಸ್’ಗೆ ಸಮಗ್ರ ಯುದ್ಧ ವಿಮಾನಯಾನ ರಕ್ಷಣೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿವೆ” ಎಂದು ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ
ಮುಂದಿನ ವರ್ಷಗಳಲ್ಲಿ ಸಿಯಾಚಿನ್ ಗ್ಲೇಸಿಯರ್ ಮತ್ತು ಪೂರ್ವ ಲಡಾಖ್‌ನಂತಹ ಎತ್ತರದ ಪ್ರದೇಶಗಳಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಗೆ ಸಮರ್ಥವಾಗಿರುವ ೧೫೬ ಸ್ವದೇಶಿ ಪ್ರಚಂದ್ ಲಘು ಯುದ್ಧ ಹೆಲಿಕಾಪ್ಟರ್‍ಗಳನ್ನು ಭಾರತೀಯ ಸೇನೆ ಮತ್ತು ಐಎಎಫ್ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.