ಅಂಬಾನಿ ಹೋಳಿ ಪಾರ್ಟಿಗೆ ತಾರೆಯರ ಮೆರುಗು
ಮುಂಬೈ,ಮಾ.೧೬-ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ತೆರೆದಿರುವ ಹೊಸ ಆಭರಣ ಮಳಿಗೆ ಬ್ರಾಂಡ್ ಬಲ್ಗೇರಿಯ ಅಂಗಡಿಯ ಉದ್ಘಾಟನೆಗೆ ಪ್ರಿಯಾಂಕಾ ಮುಂಬೈಗೆ ಬಂದಿದ್ದಾರೆ.
ಮುಂಬೈನಲ್ಲಿ ನಡೆದ ಈ ಆಭರಣ ಪ್ರದರ್ಶನ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಗುಲಾಬಿ ಬಣ್ಣದ ಸೀರೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ .
ಮಳಿಗೆಯ ಅದ್ಧೂರಿ ಪ್ರಾರಂಭದ ನಂತರ, ರೋಮನ್ ಮೂಲದ ಬಲ್ಗೇರಿ ಮತ್ತು ಇಶಾ ಅಂಬಾನಿ ಜಂಟಿಯಾಗಿ ಹೋಳಿ ಪಾರ್ಟಿಯನ್ನು ಆಯೋಜಿಸಿದ್ದಾರೆ.
ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಕೂಡ ಇಶಾ ಮತ್ತು ಬಲ್ಗೇರಿಯ ಹೋಳಿ ಬಾಷ್‌ನಲ್ಲಿ ವಿಶೇಷವಾಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಪ್ರಿಯಾಂಕಾ ತುಂಬಾ ಗ್ಲಾಮ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಪಿಂಕ್ ಕಾಕ್‌ಟೈಲ್ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಈ ಸೀರೆಯೊಂದಿಗೆ ಪ್ರಿಯಾಂಕಾ ಸುಂದರವಾದ ವಜ್ರದ ನೆಕ್ಲೇಸ್ ಸಹ ಧರಿಸಿದ್ದಾರೆ.ಅವರು ಧರಿಸಿದ ಸೊಗಸಾದ ಕಲಾತ್ಮಕ ಬಲ್ಗೇರಿಯ ನೆಕ್ಲೇಸ್ ಮತ್ತು ಉಳಿದ ಆಭರಣಗಳನ್ನು ಜೈಪುರ ಕುಶಲಕರ್ಮಿಗಳು ತಯಾರಿಸಿದ್ದಾರೆ.
ನಟಿಯ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ಈ ಚಿತ್ರಗಳ ಮೇಲೆ ಅಭಿಮಾನಿಗಳು ಪ್ರೀತಿಯ ಮಳೆಗರೆದಿದ್ದಾರೆ.
ಹಿರಿಯ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸಹ ತಮ್ಮ ಪತಿ ಡಾ. ಶ್ರೀ ರಾಮ್ ನೆನೆ ಅವರೊಂದಿಗೆ ಇಶಾ ಅಂಬಾನಿ ಮತ್ತು ಬಲ್ಗೇರಿಯ ಹೋಳಿ ಬಾಷ್‌ಗೆ ಸ್ಟೈಲ್ ಆಗಿ ಆಗಮಿಸಿದರು.
ಈ ವೇಳೆ ಮಾಧುರಿ ದೀಕ್ಷಿತ್ ಪಿಂಕ್ ಕಲರ್ ಕೋಟ್ ಮತ್ತು ಪ್ಯಾಂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಉಡುಪಿನೊಂದಿಗೆ ಮಾಧುರಿ ಕಪ್ಪು ಬಣ್ಣದ ಹೈ ಹೀಲ್ಸ್ ಧರಿಸಿದ್ದಾರೆ. ಈ ಲುಕ್‌ನಲ್ಲಿ ಮಾಧುರಿ ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು.