ರಾಮಮಂದಿರ ಚುನಾವಣೆಯಲ್ಲಿ ಬಳಸಿದರೆ ತಪ್ಪಿಲ್ಲ
ದಾವಣಗೆರೆ. ಮಾ.೧೪; ಶ್ರೀರಾಮನ ನಾಡಿನಿಂದ ಇದೀಗ ಹನುಮನ ನಾಡಿಗೆ ಬಂದಿದ್ದೇನೆ. ಕಳೆದ ೪೦ ದಿನಗಳಿಂದ ಅಯ್ಯೋಧ್ಯೆಯ ಶ್ರೀರಾಮಮಂದಿರದಲ್ಲಿ ಹೋಮಪೂಜಾದಿ ಕಾರ್ಯಕ್ರಮ ನೆರವೇರಿಸಿ ಬಂದಿದ್ದೇನೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ನುಡಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯುತ್ತಿರುವ ೩೧ ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದಲ್ಲಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಶ್ರೀರಾಮ ಮಂದಿರದ ಕನಸು ನನಸಾಗಿದೆ.ರಾಮರಾಜ್ಯವಾಗಲು ಶ್ರೀರಾಮನ ಅನುಗ್ರಹ ಬೇಕಿದೆ ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು. ರಾಮಂದಿರಕ್ಕೆ ಬಾಂಬ್ ಹಾಕುವ ಬೆದರಿಕೆ ಬಗ್ಗೆ ಮಾತನಾಡಿದ ಶ್ರೀಗಳು ಇಂತಹ ಹೀನಕೃತ್ಯ ಸರಿಯಲ್ಲ .ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮೇಲೆ ಹಾಗೂ ನ್ಯಾಯಾಲಯದ ಮಾರ್ಗದರ್ಶನದಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ನಡೆದಿದೆ ಎಂದರು.ದೇವಸ್ಥಾನದ ಕಾಣಿಕೆ ಹಣ ಹಿಂದೂ ಧರ್ಮದ ಅಭಿವೃದ್ಧಿಗೆ ಬಳಕೆಯಾಗಬೇಕು ಈ ಹಣ ಅನ್ಯ ಧರ್ಮದವರಿಗೆ ನೀಡಬಾರದು.ಅವರವರ ಧರ್ಮದವರಿಗೆ ಆ ಹಣ ಬಳಕೆಯಾಗಲಿ ಎಂದರು. ಸರ್ಕಾರ ದೇವಸ್ಥಾನದ ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು ಪ್ರಸಾದ ತಯಾರಿಸಲು ಮಾರ್ಗಸೂಚಿ ಬಿಡುಗಡೆ ಮಾಡಬೇಕು.ಕೇವಲ ದೇವಸ್ಥಾನದ ಪ್ರಸಾದದಲ್ಲಿ ಮಾತ್ರ ಅನಾರೋಗ್ಯ ಉಂಟಾಗುವುದಿಲ್ಲ. ಸಾರ್ವಜನಿಕವಾಗಿ ವಿತರೆಯಾಗುವ ಸ್ಥಳದಲ್ಲಿ ಮಾರ್ಗಸೂಚಿ ಹಾಕುವುದು ಉತ್ತಮ ಎಂದರು.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದಂತೆ ರಾಜ್ಯದಲ್ಲಿ ಹನುಮ ಪುಣ್ಯಕ್ಷೇತ್ರ ಅಭಿವೃದ್ದಿ ಆಗಬೇಕು ಇದಕ್ಕೊಂದು ಟ್ರಸ್ಟ್ ಮಾಡಬೇಕು ಎಂದರು.
ರಾಮಮಂದಿರ ವಿಚಾರ ಬಿಜೆಪಿಯವರು ಬಳಸಿಕೊಂಡರೆ ಯಾವ ತಪ್ಪಿಲ್ಲ ಬಿಜೆಪಿಯವರು ಕೆಲಸ ಮಾಡಿದ್ದಾರೆ ಹಾಗಾಗಿ ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ-ಪೇಜಾವರ ಶ್ರೀ