ಬಾಣಸಿಗನ ಪುತ್ರಿಗೆ ಅಮೆರಿಕಾದಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿ ವೇತನ
ನವದೆಹಲಿ,ಮಾ.೧೪-ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವಾಸದಲ್ಲಿ ಅಡುಗೆ ಮಾಡುವ ಬಾಣಸಿಗನ ಮಗಳು ತಂದೆಗೆ ಹೆಮ್ಮೆ ತರುವ ಮೂಲಕ ಮಾದರಿಯಾಗಿದ್ದಾರೆ.ಇದೀಗ ಅಮೆರಿಕದ ೬ ಕಾನೂನು ಕಾಲೇಜುಗಳು ಬಾಣಸಿಗನ ಮಗಳು ಪ್ರಜ್ಞಾಗೆ ಎಲ್‌ಎಲ್‌ಎಂ ಪ್ರವೇಶ ಮತ್ತು ಲಕ್ಷ ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನವನ್ನು ನೀಡಿವೆ. ಈ ಸಾಧನೆಗಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪ್ರಜ್ಞಾ ಅವರನ್ನು ಸನ್ಮಾನಿಸಿದ್ದಾರೆ.
ಅವರು ಕಾನೂನು ಅಧ್ಯಯನ ಮಾಡಲು ಅಮೆರಿಕದ ಎರಡು ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿವೇತನ ಪಡೆದಿದ್ದಾರೆ. ಇತ್ತೀಚೆಗೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಪ್ರಜ್ಞಾ ಅವರ ಸಾಧನೆಗಳಿಗಾಗಿ ಸಮಾರಂಭದಲ್ಲಿ ಗೌರವಿಸಲಾಯಿತು. ಸಿಜೆಐ ಡಿವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸಹ ಭಾಗವಹಿಸಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಪ್ರಜ್ಞಾ ಅವರ ಪೋಷಕರಿಗೆ ಶಾಲುಗಳನ್ನು ನೀಡಿದರು ಮತ್ತು ಅವರ ಹಸ್ತಾಕ್ಷರದೊಂದಿಗೆ ಮೂರು ಪುಸ್ತಕಗಳನ್ನು ಸಹ ನೀಡಿದ್ದಾರೆ.
ಪ್ರಜ್ಞಾ ಅವರು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಸಂಶೋಧನೆ ಮತ್ತು ಯೋಜನೆ ಕೇಂದ್ರದಲ್ಲಿ ಕಾನೂನು ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕೊಲಂಬಿಯಾ ಕಾನೂನು ಶಾಲೆ, ಯುಎಸ್‌ಎ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಕ್ಯಾರಿ ಕಾನೂನು ಶಾಲೆಯಿಂದ ಎಲ್ ಎಲ್ ಎಮ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ, ಚಿಕಾಗೋ ಕಾನೂನು ಶಾಲೆ, ನ್ಯೂಯಾರ್ಕ್ ವಿಶ್ವವಿದ್ಯಾಲಯ, ಬರ್ಕ್ಲಿ ಕಾನೂನು ಮತ್ತು ಮಿಚಿಗನ್ ಕಾನೂನು ಶಾಲೆಯಿಂದ ಪ್ರಜ್ಞಾ ಪ್ರವೇಶದ ಕೊಡುಗೆಗಳನ್ನು ಸಹ ಪಡೆದಿದ್ದಾರೆ. ಮಿಚಿಗನ್ ಕಾನೂನು ಶಾಲೆಯು ಅವರಿಗೆ $೫೦,೦೦೦ (ಸುಮಾರು ರೂ ೪೧೩೯೯೭೭) ವಿದ್ಯಾರ್ಥಿವೇತನವನ್ನು ನೀಡಿದೆ. ಸುಪ್ರೀಂ ಕೋರ್ಟ್ ಬಾಣಸಿಗನ ಪುತ್ರಿ ಪ್ರಜ್ಞಾ ಅವರನ್ನು ನ್ಯಾಯಾಲಯಕ್ಕೆ ಸ್ವಾಗತಿಸಿದ ಸಿಜೆಐ ಡಿವೈ ಚಂದ್ರಚೂಡ್, ಏನನ್ನಾದರೂ ಸಾಧಿಸುವ ಉತ್ಸಾಹ ಮತ್ತು ಹುರುಪು ಇದ್ದರೆ ಅದನ್ನು ಸಾಧಿಸಲು ಸಂಪನ್ಮೂಲಗಳು ಮತ್ತು ಸೌಲಭ್ಯಗಳು ಸಿಗುತ್ತವೆ ಎಂಬುದನ್ನು ಪ್ರಜ್ಞಾ ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಸಂಪನ್ಮೂಲದ ಕೊರತೆಯಿಂದ ವಿದ್ಯಾರ್ಥಿಯ ಸಹಜ ಪ್ರತಿಭೆ ಗಮ್ಯ ತಲುಪದಂತಾಗಬಾರದು ಎಂದಿದ್ದಾರೆ ಸುಪ್ರೀಂ ಕೋರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಣಸಿಗನ ಪುತ್ರಿ ಪ್ರಜ್ಞಾ ಅವರನ್ನು ಮುಖ್ಯ ನ್ಯಾಯಮೂರ್ತಿ ಅಭಿನಂದಿಸಿದ್ದಾರೆ . ಈ ಸಂದರ್ಭದಲ್ಲಿ ಸಿಜೆಐ ಸೇರಿದಂತೆ ಹಲವು ನ್ಯಾಯಾಧೀಶರು ಮತ್ತು ವಕೀಲರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾವುಕರಾದ ಪ್ರಜ್ಞಾ, ಎಲ್ಲರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದಿದ್ದಾರೆ.