ಲೋಕ ಸಮರ: ಬಿಜೆಪಿ 2ನೇ ಪಟ್ಟಿ ಬಿಡುಗಡೆ; ಬೆಂಗಳೂರು ಉತ್ತರಕ್ಕೆ ಶೋಭಾ, ತುಮಕೂರಿಗೆ ಸೋಮಣ್ಣ, ಬೆಂ. ಗ್ರಾಮಾಂರಕ್ಕೆ ಮಂಜುನಾಥ್ ಗೆ ಮಣೆ

ನವದೆಹಲಿ: ಲೋಕಸಭಾ ಚುನಾವಣೆಗೆ ಭಾರತೀಯ ಜನತಾಪಕ್ಷದ ಎರಡನೇ ಪಟ್ಟಿ ಬುಧವಾರ ಬಿಡುಗಡೆಯಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಉಮೇದುವಾರರನ್ನು ಅಖೈರುಗೊಳಿಸಿದೆ..
ಬೆಂಗಳೂರು ಉತ್ತರಕ್ಕೆ ಶೋಭಾ ಉತ್ತರ ಕ್ಷೇತ್ರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರು ಗ್ರಾಮಾಂರ ಕ್ಷೇತ್ರಕ್ಕೆ ಖ್ಯಾತ ಹೃದ್ರೋಗ ತಜ್ಞ ಡಾ.ಮಂಜುನಾಥ್ ಅವರಿಗೆ ಮಣೆ ಹಾಕಲಾಗಿದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಿರೀಕ್ಷೆಯಂತೆ ವಿ.ಸೋಮಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ.
ಒಂಭತ್ತು ಹಾಲಿ ಸಂಸದರ ಪೈಕಿ ಆರು ಮಂದಿಗೆ ಟಿಕೆಟ್ ಕೈತಪ್ಪಿದೆ.
ರಾಜ್ಯ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಾಕಷ್ಟು ಅಳೆದು ತೂಗಿ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರ-ಅಣ್ಣಾ ಸಾಹೇಬ್ ಜೊಲ್ಲೆ
ಬಾಗಲಕೋಟೆ ಲೋಕಸಭಾ ಕ್ಷೇತ್ರ-ಪಿ.ಸಿ.ಗದ್ದಿಗೌಡರ್
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ-ಕೋಟ ಶ್ರೀನಿವಾಸ ಪೂಜಾರಿ
ಹಾವೇರಿ ಲೋಕಸಭಾ ಕ್ಷೇತ್ರ-ಬಸವರಾಜ ಬೊಮ್ಮಾಯಿ
ಮೈಸೂರು ಕ್ಷೇತ್ರ-ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಬೆಂಗಳೂರು ಗ್ರಾಮಾಂತರ ಕ್ಷೇತ್ರ-ಡಾ.ಸಿ.ಎನ್.ಮಂಜುನಾಥ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಶೋಭಾ ಕರಂದ್ಲಾಜೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ-ತೇಜಸ್ವಿ ಸೂರ್ಯ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ-ಪಿ.ಸಿ.ಮೋಹನ್
ತುಮಕೂರು ಲೋಕಸಭಾ ಕ್ಷೇತ್ರ-ವಿ.ಸೋಮಣ್ಣ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ-ಕ್ಯಾಪ್ಟನ್ ಬ್ರಿಜೇಶ್ ಚೌಟಾ
ಚಾಮರಾಜನಗರ ಲೋಕಸಭಾ ಕ್ಷೇತ್ರ-ಎಸ್.ಬಾಲರಾಜು
ಧಾರವಾಡ ಲೋಕಸಭಾ ಕ್ಷೇತ್ರ-ಪ್ರಹ್ಲಾದ್ ಜೋಶಿ
ಕೊಪ್ಪಳ ಲೋಕಸಭಾ ಕ್ಷೇತ್ರ-ಡಾ.ಬಸವರಾಜ ತ್ಯಾವಟೂರು
ದಾವಣಗೆರೆ ಲೋಕಸಭಾ ಕ್ಷೇತ್ರ-ಗಾಯತ್ರಿ ಸಿದ್ದೇಶ್ವರ್
ಬಳ್ಳಾರಿ ಲೋಕಸಭಾ ಕ್ಷೇತ್ರ-ಬಿ.ಶ್ರೀರಾಮುಲು
ಕಲಬುರಗಿ ಲೋಕಸಭಾ ಕ್ಷೇತ್ರ-ಡಾ.ಉಮೇಶ್ ಜಾಧವ್
ಬೀದರ್ ಲೋಕಸಭಾ ಕ್ಷೇತ್ರ-ಭಗವಂತ ಖೂಬಾ
ವಿಜಯಪುರ ಲೋಕಸಭಾ ಕ್ಷೇತ್ರ-ರಮೇಶ್ ಜಿಗಜಿಣಗಿ
ಶಿವಮೊಗ್ಗ ಲೋಕಸಭಾ ಕ್ಷೇತ್ರ-ಬಿ.ವೈ.ರಾಘವೇಂದ್ರ