ದೇಶಕ್ಕೆ ಮೋದಿಯೇ ಶಾಶ್ವತ ಗ್ಯಾರಂಟಿ
ಸಂಜೆವಾಣಿ ಪ್ರತಿನಿಧಿಯಿಂದ
ದಾವಣಗೆರೆ.ಮಾ.೧೨; ದೇಶದಲ್ಲಿ ಮೋದಿ ಪ್ರಧಾನಿಯಾದ ನಂತರ ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸೇರಿದಂತೆ ದೇಶದ ಜನತೆಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳಲ್ಲದೇ ಎಲ್ಲಾಹಂತದ ಸೌಲಭ್ಯ ಒದಗಿಸುವಲ್ಲಿ ಮೋದಿನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿದ್ದು ಇವುಗಳೇ ದೇಶಕ್ಕೆ ಶಾಶ್ವತವಾದ ಗ್ಯಾರಂಟಿಗಳು ಎಂದು ಸಂಸದ ಜಿ.ಎಂ ಸಂಸದ ಸಿದ್ದೇಶ್ವರ್ ಬಣ್ಣಿಸಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆಯಿಂದ ಆಯೋಜಿಸಲಾಗಿದ್ದ ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆ ಉದ್ಘಾಟನೆ ನೆರವೇರಿಸಿ ಮೋದಿಯವರ ವರ್ಚುವಲ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದ ನಂತರ ದೇಶ ಆಳಿದ ಸರ್ಕಾರಗಳು ಹೇಳಿಕೊಳ್ಳುವಷ್ಟು ಅಭಿವೃದ್ಧಿ ಮಾಡಲಿಲ್ಲ ಕಳೆದ ಹತ್ತು ವರ್ಷಗಳಲ್ಲಿ ಮೋದಿ ಪ್ರಧಾನಿಯಾದ ನಂತರ ಇಡಿ ದೇಶವೇ ಭಾರತದತ್ತ ನೋಡುವಷ್ಟು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡಿದೆ.ದೇಶದ ಅಭಿವೃದ್ಧಿಗಾಗಿ ಮೋದಿ ನಿರಂತವಾಗಿ ಶ್ರಮಿಸುತ್ತಿದ್ದಾರೆ.ವಿಶ್ವದ ಆರ್ಥಿಕಸ್ಥಿತಿಯಲ್ಲಿ ೧೩ ನೇ ಸ್ಥಾನದಲ್ಲಿದ್ದ ಭಾರತ ಈಗ ಮೂರನೇ ಸ್ಥಾನಕ್ಕೆ ಬಂದಿದೆ ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ನಂಬರ್ ಒನ್ ಆರ್ಥಿಕತೆಯ ದೇಶವಾಗಿ ಬೆಳೆಯಲಿದೆ.ನಗರದ ಜ್ವಲಂತ ಸಮಸ್ಯೆಯಾಗಿರುವ ಅಶೋಕರಸ್ತೆ ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ೪೯.೫೦ ಕೋಟಿ ಕೇಂದ್ರ ಸರ್ಕಾರದ ಹಣ ಮಂಜೂರಾಗಿದ್ದು ಶೀಘ್ರವೇ ಈ ಕುರಿತಂತೆ ಜಿಲ್ಲಾಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಕಳೆದ ಹತ್ತು ವರ್ಷಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಅಭೂತಪೂರ್ವ ಸಾಧನೆಯಾಗಿದ್ದು ದೇಶದ ಮೂಲೆಮೂಲೆಗೂ ರೈಲು ಮಾರ್ಗ ಕಲ್ಪಿಸಲಾಗಿದೆ.ರೈಲ್ವೆ ದ್ವಿಪಥ ಮಾರ್ಗ ವಿದ್ಯುದ್ದೀಕರಣ, ಕೋಚ್ ರೆಸ್ಟೋರೆಂಟ್ ಸೇರಿದಂತೆ ವಿಶ್ವದ ಅತ್ಯುತ್ತಮ ರೈಲ್ವೆ ವ್ಯವಸ್ಥೆ ಸಾಲಿಗೆ ನಮ್ಮ ಭಾರತ ರೈಲ್ವೆ ಸೇರಿದೆ ಎಂದರು.
ಶಾಸಕ ಬಿ.ಪಿ ಹರೀಶ್ ಮಾತನಾಡಿ ರೈಲ್ವೆ ಇಲಾಖೆಗೆ ಕಾಯಕಲ್ಪನೀಡುವ ನಿಟ್ಟಿನಲ್ಲಿ ಮೋದಿಯವರು ಪ್ರತ್ಯೇಕ ಬಜೆಟ್ ಮಂಡಿಸಿದರು. ಆ ಮೂಲಕ ವಿಶ್ವದ ಅತೀ ಹೆಚ್ಚು ರೈಲ್ವೆ ಸಿಬ್ಬಂದಿ ಹೊಂದಿದ ಇಲಾಖೆಯಾಗಿದೆ ಎಂದರು.ಹರಿಹ ರೈಲ್ವೆ ನಿಲ್ದಾಣ ಉತ್ತರ ಮತ್ತು ದಕ್ಷಿಣ ರಾಜ್ಯಗಳ ಬೆಸೆಯುವ ಹೆಬ್ಬಾಗಿಲಾಗಿದ್ದು ಇಲ್ಲಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರು ದೇಶದ ವಿವಿಧೆಡೆ ಸಂಚರಿಸುತ್ತಾರೆ.ದೇಶದ ಅಭಿವೃದ್ಧಿಯಲ್ಲಿ ರೈಲ್ವೆ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಮೋದಿಜಿಯವರ ಶ್ರಮ ಅವರ್ಣನೀಯ ಎಂದರು. ಈ ವೇಳೆ ಸಂಸದರ ಧರ್ಮಪತ್ನಿ ಗಾಯತ್ರಿಸಿದ್ದೇಶ್ವರ್,ಉಪಮೇಯರ್ ಯಶೋಧ ಯಗ್ಗಪ್ಪ,ಯಶವಂತರಟವ್ ಜಾಧವ್,ರೈಲ್ವೆ ಅಧಿಕಾರಿಗಳಾದ ರೋಹನ್ ಡೌಂಗ್ರೆ,ಪ್ರಶಾಂತ್ ಕುಮಾರ್ ಮತ್ತಿತರರಿದ್ದರು.