ವಿದ್ಯು ತ್ ಸಮಸ್ಯೆಗೆ ಪರಿಹಾರ: ಎಸ್.ಟಿ.ಎಸ್
ಕೆಂಗೇರಿ,ಮಾ.೮: ಕ್ಷೇತ್ರ ವ್ಯಾಪ್ತಿಯ ಬೆಸ್ಕಾಂ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಹಾಗೂ ಕರ್ತವ್ಯ ನಿಷ್ಠೆಯ ಪರಿಣಾಮದಿಂದಾಗಿ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರಕಿದೆ ಎಂದು ಶಾಸಕ ಎಸ್. ಟಿ. ಸೋಮಶೇಖರ್ ತಿಳಿಸಿದರು
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗೇರಿ ವಳಗೇರಹಳ್ಳಿ ಬಿಡಿಎ ವಸತಿ ಸಂಕೀರ್ಣ ಆವರಣದಲ್ಲಿ ನೂತನವಾಗಿ ಕೆಂಗೇರಿ ಉಪ ವಿಭಾಗ ಒಂದರ ಘಟಕ ೨೨ರ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರದ ಅನುದಾನಕ್ಕೆ ಕಾಯದೆ ದಾನಿಗಳ ನೆರವಿನಿಂದ ನಿರ್ಮಾಣ ಮಾಡಲಾಗಿರುವ ಕಟ್ಟಡ ಅಧಿಕಾರಿಗಳ ಸಾಮಾಜಿಕ ಬದ್ಧತೆ ಹಾಗೂ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು ಕೆಂಗೇರಿ ಕೆಂಗೇರಿ ಉಪವಿಭಾಗದ ಬೃಹತ್ ಬೆಸ್ಕಾಂ ಕಟ್ಟಡಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ರಹ ಜ್ಯೋತಿ ಕ್ಷೇತ್ರ ವ್ಯಾಪ್ತಿಯಲ್ಲಿ ನೂರಕ್ಕೆ ನೂರರಷ್ಟು ಅನುಷ್ಠಾನಗೊಳಿಸುವಲ್ಲಿ ಬೆಸ್ಕಾಂ ಅಧಿಕಾರಿಗಳ ಮಹತ್ವದ ಪಾತ್ರವಿದೆ ಎಂದರು.
ಬೆಸ್ಕಾಂ ಕೆಂಗೇರಿ ವಿಭಾಗದ ಕಾರ್ಯಪಾಲಕ ಅಭಿಯಂತರ ಕುಮಾರ್ ನಾಯಕ್ ಮಾತನಾಡಿ ಶಾಸಕ ಎಸ್. ಟಿ. ಸೋಮಶೇಖರ್ ಅವರ ಸೂಚನೆ ಮೇರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ನೊಂದಿಗೆ ವಿದ್ಯುತ್ ವಿತರಣಾ ನಷ್ಟ ೬.೭% ಇದ್ದಿದ್ದನ್ನು ೪.೦೨ % ಇಳಿಸಲಾಗಿದೆ ಎಂದರು. ಬೆಸ್ಕಾಂನ ಸ್ವಂತ ಕಚೇರಿ ಹೊಂದಬೇಕೆನ್ನುವ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವಿದ್ಯುತ್ ಅವಘಡಗಳು ಸಂಭವಿಸದಂತೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಬೆಸ್ಕಾಂನ ಮುಖ್ಯ ಇಂಜಿನಿಯರ್ ಕೆ. ರವೀಂದ್ರ, ಪಶ್ಚಿಮ ವೃತದ ಅಧೀಕ್ಷಕ ಇಂಜಿನಿಯರ್ ಕಾಶಿ ರಾಮ್ ಪವರ್ , ಕೆಂಗೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕುಮಾರ್ ನಾಯಕ್, ಬೆಸ್ಕಾಂ ನೌಕರರ ಸಂಘದ ಕಾರ್ಯದರ್ಶಿ ಬಲರಾಮ್, ಬೆಸ್ಕಾಂ ಕೇ ಒನ್ ಉಪವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ರಮೇಶ್, ಸಹಾಯಕ ಇಂಜಿನಿಯರ್ ಧವಲೇಶ್, ಕೇತ್ರಿ ವಿಭಾಗದ ಬೆಸ್ಕಾಂ ಸಹಾಯಕ ಕಾರಪಾಲಕ ಅಭಿಯಂತರ ಅನುರಾಧ ಮತ್ತಿತರ ಬೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.