ಭಾರತದ ಮಡಿಲಿಗೆ ಏಷ್ಯನ್ ಹಾಕಿ ಚಾಂಪಿಯನ್; ಚೀನಾ ವಿರುದ್ಧ 1-0 ಯಿಂದ ಜಯ
ಮೊಕಿ(ಚೀನಾ): ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಮುಡಿಗೇರಿಸಿಕೊಂಡಿದೆ.
ಇಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ಚೀನಾವನ್ನು 1-0 ಗೋಲಿನಿಂದ ಮಣಿಸಿದೆ.
ಇದರೊಂದಿಗೆ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ದಾಖಲೆಯ 5ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಕಿರೀಟ ಧರಿಸಿದೆ. ಜೊತೆಗೆ ಭಾರತ ಫೈನಲ್ ಸೇರಿದಂತೆ ಸತತ 7 ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಕೈವಶ ಮಾಡಿಕೊಂಡಿದೆ.
ಭಾರತದ ಜುಗ್ ರಾಜ್ ಸಿಂಗ್ ಏಕೈಕ ಗೋಲು ಬಾರಿಸುವ ಮೂಲಕ ತಂಡಕ್ಕೆ ವಿಜಯದ ಮಾಲೆ ತೊಡಿಸಿದರು.