ಶಾಸಕ ಮುನಿರತ್ನ ಬಂಧನದ ಹಿಂದೆ ಡಿಸಿಎಂ ಡಿ ಕೆ ಶಿವಕುಮಾರ ಕೈವಾಡ ವಿಜಯೇಂದ್ರ ನಾಯಕತ್ವ ನಾನು ಒಪ್ಪುವುದಿಲ್ಲ : ಮಾಜಿ ಸಚಿವ ರಮೇಶ ಜಾರಕಿಹೊಳಿ
ಅಥಣಿ :ಸೆ.17: ಬಿಜೆಪಿ ಶಾಸಕ ಮುನಿರತ್ನ ಬಂಧನದ ಹಿಂದೆ ಸಿಡಿ ಶಿವು ಇದ್ದಾನೆ. ರಾಜಕೀಯ ವಿರೋಧಿಗಳನ್ನು ಈ ರೀತಿ ಷಡ್ಯಂತ್ರದಿಂದ ಮುಗಿಸುವುದೇ ಅವನ ಕೆಲಸವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು.
ಅವರು ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಮುನಿರತ್ನ ದಲಿತರಿಗೆ ಹಾಗೂ ಒಕ್ಕಲಿಗರ ಕುರಿತು ಆಡಿರುವ ಮಾತಿನ ಧ್ವನಿ ಸುರುಳಿ ಸತ್ಯಹರಿಸುತ ದೇವರ ಬರಬೇಕು. ಆದರೆ ಸಿಡಿ ಶಿವು ಅವನ ವಿರೋಧಿಗಳನ್ನು ಜೈಲಿಗೆ ಹಾಕುವ ಕೆಲಸ ಮಾಡುತ್ತಿದ್ದಾನೆ. ಇವರ ಕುತಂತ್ರಕ್ಕೆ ಮೊದಲು ಬಲಿಯಾಗಿದ್ದೆ ನಾನು. ನಂತರ ದೇವೇಗೌಡರ ಕುಟುಂಬ. ಈಗ ಶಾಸಕ ಮುನಿರತ್ನನಿಗೆ ಆಗಿದೆ ಎಂದು ಆರೋಪಿಸಿದ ಅವರು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ಮತ್ತು ಕುಸುಮ ಅವರ ಕೈವಾಡ ಇದೆ.
ಸಿಡಿ ಶಿವು ನಿಂದ ಕಾಂಗ್ರೆಸ್ ನಾಯಕರೇ ನೋವು ಅನುಭವಿಸುತ್ತಿದ್ದಾರೆ. ಇನ್ನು ಮುಂದೆ ಅನೇಕ ಸಿಡಿಗಳು ದೊಡ್ಡ ಪ್ರಮಾಣದಲ್ಲಿ ಹೊರಬರಲಿವೆ. ಸತ್ಯ ಸಿಡಿ ಕುರಿತಾದ ತನಿಖೆಯನ್ನು ಸಿಬಿಐಗೆ ನೀಡಬೇಕಾಗಿದೆ. ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ರಾಜಕೀಯದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ಪಕ್ಷಾತೀತವಾಗಿ ಸೂಕ್ತ ತನಿಖೆ ನಡೆಯಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಕಲಿ ಸಿಡಿ ತಡೆಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಭೇಟಿಯಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ವಿಜಯೇಂದ್ರ ನಮ್ಮ ನಾಯಕ ಅಲ್ಲ..!
ಬಿಜೆಪಿ ಅತೃಪ್ತ ನಾಯಕರ ಜೊತೆ ಸಂಘ ಪರಿವಾರದ ಮುಖಂಡರು ನಡೆಸಿದ ಸಭೆ ಉದ್ದೇಶಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ವಿಜಯೇಂದ್ರ ಆ ಪಕ್ಷದ ಅಧ್ಯಕ್ಷರಾಗಿರುವುದಕ್ಕೆ ನನ್ನ ವಿರೋಧವಿದೆ. ಅವರನ್ನು ನಮ್ಮ ಪಕ್ಷದ ನಾಯಕರು ಎಂದು ನಾನು ಒಪ್ಪಿಕೊಂಡಿಲ್ಲ. ಅವರ ನಾಯಕತ್ವವನ್ನು ನಾವು ಒಪ್ಪುವುದಿಲ್ಲ. ಅವರ ತಂದೆ ಯಡಿಯೂರಪ್ಪನವರ ಬಗ್ಗೆ ನಮಗೆ ಗೌರವವಿದೆ. ಅವರನ್ನು ನೋಡಿ ನಾವು ಪಕ್ಷಕ್ಕೆ ಬಂದಿದ್ದೇವೆ. ಬಿಜೆಪಿ ಪಕ್ಷವನ್ನು ಇನ್ನಷ್ಟು ಸಂಘಟಿಸಲು ಸಾಮೂಹಿಕ ನಾಯಕತ್ವದ ಅವಶ್ಯಕತೆ ಇದೆ. ಯಡಿಯೂರಪ್ಪನವರ ಮಗ ಎಂಬ ಅರ್ಹತೆಯನ್ನು ಬಿಟ್ಟರೆ, ವಿಜಯೇಂದ್ರನಿಗೆ ಅಧ್ಯಕ್ಷನಾಗುವ ಯಾವುದೇ ಅರ್ಹತೆ ಇಲ್ಲ. ಏಕ ವ್ಯಕ್ತಿಗೆ ಪಕ್ಷದ ಜವಾಬ್ದಾರಿ ನೀಡಬಾರದು. ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ ನೀಡಿದರೆ 130 ಆರಕ್ಕೂ ಅಧಿಕ ಸ್ಥಾನ ಗೆದ್ದು ತೋರಿಸುತ್ತೇವೆ ಎಂದು ಹೇಳಿದರು.
ರಾಜ್ಯಪಾಲರ ಭೇಟಿ..!
ಮುಡಾ ಹಗರಣಕ್ಕಿಂತ ದೊಡ್ಡ ಹಗರಣ ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಈ ಹಗರಣದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಲು ಹೈಕಮಾಂಡ್ ಗೆ ಅನುಮತಿ ಕೇಳಿದ್ದೇವೆ. ಅವರ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಈ ವಿಚಾರದಲ್ಲಿ ಶೀಘ್ರದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ ಎಂದು ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಭಯೋತ್ಪಾದನೆ, ಕೋಮು ಗಲಭೆಗಳು, ಭ್ರಷ್ಟಾಚಾರ ಹೆಚ್ಚಾಗುತ್ತಿದೆ, ಬಿಜೆಪಿಗೆ ಕೇವಲ 40 ಸ್ಥಾನಗಳು ಕಡಿಮೆ ಬಂದಿರುವುದಕ್ಕೆ ಕಾಂಗ್ರೆಸ್ ಪಕ್ಷದವರು ಇಷ್ಟು ಹಾರಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಕೈ ಬಲಪಡಿಸಿದರೆ ಮಾತ್ರ ಹಿಂದುಗಳ ರಕ್ಷಣೆ ಸಾಧ್ಯ ಎಂದು ವಿವರಿಸಿದರು.
ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ರಮೇಶ್ ಜಾರಕಿಹೊಳಿ ಮುಂದಿನ ದಿನಗಳಲ್ಲಿ ಅಥಣಿ ಕಾಗವಾಡ, ಕುಡುಚಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಹಾರಿಸುತ್ತೇವೆ. ಈಗಾಗಲೇ ನಾವು ಎಲ್ಲೆಡೆ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ. ಸ್ಥಳೀಯ ಚುನಾವಣೆ ಹಿಡಿದು ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ. ಅದಕ್ಕಾಗಿ ಬೇಕಾಗುವ ತಂತ್ರ ಪ್ರತಿ ತಂತ್ರ ಹೆಣೆಯುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಗವಾಡ ಮಾಜಿ ಶಾಸಕ ಶ್ರೀಮಂತ ಪಾಟೀಲ, ಅಥಣಿಯ ಮಾಜಿ ಶಾಸಕ ಮಹೇಶ ಕುಮಟಳ್ಳಿ, ಬಿಜೆಪಿ ಮುಖಂಡರಾದ ಧರೆಪ್ಪ ಠಕ್ಕಣ್ಣನವರ, ಅಪ್ಪಾಸಾಹೇಬ ಅವತಾಡೆ, ನಿಂಗಪ್ಪ ನಂದೇಶ್ವರ, ಮಲ್ಲಪ್ಪ ಹಂಚಿನಾಳ, ದೀಪಕ ಪಾಟೀಲ, ಶಿವಾನಂದ ಸಿಂಧೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.