ರಾಖಿ ಸಾವಂತ್ ೨ನೇ ಮದುವೆ
ಮುಂಬೈ,ಮಾ.೮-ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಪ್ರಸ್ತುತ ತಮ್ಮ ಎರಡನೇ ಮದುವೆಯ ಬಗ್ಗೆ ಸುದ್ದಿಯಲ್ಲಿದ್ದಾರೆ.
ಬಿಗ್ ಬಾಸ್ ೧೨ ಸ್ಪರ್ಧಿ ಸೋಮಿ ಖಾನ್ ಅವರನ್ನು ಆದಿಲ್ ಖಾನ್ ದುರಾನಿ ಎರಡನೇ ಮದುವೆಯಾಗಿದ್ದಾರೆ ಎನ್ನಲಾಗಿದೆ .
ಈಗ ಆದಿಲ್ ಖಾನ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ ಮತ್ತು ಅವರ ಹೊಸ ಹೆಂಡತಿಯ ಅನೇಕ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ ಆದಿಲ್ ಮಾಜಿ ಪತ್ನಿ ಹಾಗೂ ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಪ್ರತಿಕ್ರಿಯೆ ಬೆಳಕಿಗೆ ಬಂದಿದೆ.
ಇದನ್ನು ಕೇಳಿ ರಾಖಿ ಸಾವಂತ್ ಸಾಕಷ್ಟು ಶಾಕ್ ಆಗಿದ್ದಾರೆ.
ಆದಿಲ್ ಖಾನ್ ದುರಾನಿ ಮತ್ತು ಸೋಮಿ ಖಾನ್ ಮಾರ್ಚ್ ೩ ರಂದು ಜೈಪುರದಲ್ಲಿ ಕುಟುಂಬ ಸದಸ್ಯರ ನಡುವೆ ವಿವಾಹವಾದರು. ಈ ಜೋಡಿ ತಮ್ಮ ಮದುವೆ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಆದರೆ, ಇಬ್ಬರೂ ತಮ್ಮ ಮದುವೆಯನ್ನು ಮುಚ್ಚಿಡಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತಿದೆ, ಆದರೆ ಈ ಸುದ್ದಿಯನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಾಗಲಿಲ್ಲ. ಸೋಮಿ ಖಾನ್ ಟಿವಿ ನಟಿ. ನ್ಯಾಯ: ದಿ ಜಸ್ಟೀಸ್, ಕೇಸರಿಯಾ ಬಲಮ್ ಮತ್ತು ಹಮಾರಾ ಹಿಂದೂಸ್ತಾನ್ ಮುಂತಾದ ಕಾರ್ಯಕ್ರಮಗಳಲ್ಲಿ ಅವರು ಕೆಲಸ ಮಾಡಿದ್ದಾರೆ.
ಕಳೆದ ವರ್ಷ ೨೦೨೩ ರಲ್ಲಿ, ರಾಖಿ ಮತ್ತು ಆದಿಲ್ ಬೇರ್ಪಟ್ಟರು, ಅದಕ್ಕೂ ಮೊದಲು ರಾಖಿ ಅವರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ . ಇದರಿಂದಾಗಿ ಆದಿಲ್ ಕೆಲವು ದಿನಗಳ ಕಾಲ ಜೈಲಿನ ಕಂಬಿಗಳ ಹಿಂದೆ ಉಳಿಯಬೇಕಾಯಿತು. ಆದಿಲ್ ಎರಡನೇ ಮದುವೆಯ ಸುದ್ದಿ ಕೇಳಿ ರಾಖಿ ಸಾವಂತ್ ಶಾಕ್ ಆಗಿದ್ದರೆ, ಆದಿಲ್ ತನ್ನ ಮೊದಲ ಮದುವೆ ಎನ್ನುತ್ತಿದ್ದಾರೆ.
ಆದಿಲ್ ಖಾನ್ ಮತ್ತು ಸೋಮಿ ಖಾನ್ ಈ ಮದುವೆಯ ಅನೇಕ ಸುಂದರವಾದ ಚಿತ್ರಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಇಬ್ಬರೂ ನಿಕಾಹ್ ಆಚರಣೆಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಆದಿಲ್ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.