ಟಿಎಂಸಿ ನಾಯಕ ಸಿಬಿಐಗೆ ಹಸ್ತಾಂತರ
ಕೋಲ್ಕತ್ತಾ, ಮಾ.೭- ಭೂಹಗರಣ, ಅತ್ಯಾಚಾರ ಪ್ರಕರಣಕ್ಕೆ ಸಂಬಂಸಿದಿಂತೆ ತೃಣಮೂಲದಿಂದ ಇತ್ತೀಚೆಗೆ ಅಮಾನತುಗೊಂಡಿರುವ ಬಂಧಿತ ಟಿಎಂಸಿ ಮಾಜಿ ನಾಯಕ ಶೇಖ್ ಷಹಜಹಾನ್ ಅವರನ್ನು ಸಿಆರ್‍ಪಿಎಫ್ ಬೆಂಗಾವಲಿನಲ್ಲಿ ಹೆಚ್ಚಿನ ವಿಚಾರಣೆಗೆ ಸಿಬಿಐಗೆ ಹಸ್ತಾಂತರಿಸಲಾಗಿದೆ.
ಪಶ್ವಿಮ ಬಂಗಾಳದ ಸಂದೇಶ್‌ಖಾಲಿ ಪ್ರರಣಕ್ಕೆ ಸಂಬಂಧಿಸಿದಂತೆ ಶೇಖ್ ಷಹಜಹಾನ್‌ನ ಬಂಧನಕ್ಕಾಗಿ ರಾಜ್ಯ
ಮತ್ತು ಕೇಂದ್ರ ಏಜೆನ್ಸಿಗಳ ನಡುವಿನ
ಹಗ್ಗ ಜಗ್ಗಾಟ ಕೊನೆಗೂ ಮುಕ್ತಾಯ
ಗೊಂಡಿದ್ದು, ಪಶ್ಚಿಮ ಬಂಗಾಳ ಸಿಐಡಿ, ಸಿಬಿಐಗೆ ಹಸ್ತಾಂತರಿಸಿದೆ.
ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಪ್ರಾದೇಶಿಕ ಪ್ರಧಾನ ಕಛೇರಿಗೆ ಸಿಬಿಐ ಕರೆದೊಯ್ದಿದ್ದು ಅಲ್ಲಿ ಹೆಚ್ಚಿನ ವಿಚಾರಣೆ ನಡೆಸಲಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಭೂಹಗರಣ, ಅತ್ಯಾಚಾರ ಪ್ರಕರಣಕ್ಕೆ ಸಂಬಂಸಿದಂತೆ ಟಿಎಂಸಿ ನಾಯಕ ಶಹಜಹಾನ್ ಶೇಖ್ ಬಂಧಿಸಿ ಸಿಐಡಿ ತನಿಖೆ ಆರಂಭ ಮಾಡಿತ್ತು. ಇದನ್ನು ಪ್ರಶ್ನಿಸಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಹೋರಾಟ ನಡೆಸಿತ್ತು.
ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ ಬಾಕಿ ಇದೆ ಎಂಬ ಕಾರಣಕ್ಕಾಗಿ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಜಾರಿ ನಿರ್ದೇಶನಾಲತ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಂದೂಡುವಂತೆ ಬಂಗಾಳದ ಅಡ್ವೊಕೇಟ್ ಜನರಲ್ ಮನವಿ ಮಾಡಿದ್ದರು.
ಅವರ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹರೀಶ್ ಟಂಡನ್, ಸಿಬಿಐ ಷಹಜಹಾನ್ ಕಸ್ಟಡಿಗೆ ನೀಡಿ ಇರಿಸಿಕೊಳ್ಳಲು ಯಾವುದೇ ಕಾರಣವಿಲ್ಲ ಎಂದು ಆದೇಶ ನೀಡಿದ ನಂತರ ಸಿಬಿಐಗೆ ಹಸ್ತಾಂತರ ಮಾಡಲಾಗಿದೆ.
ಬಂಗಾಳದ ಮುಖ್ಯ ಕಾರ್ಯದರ್ಶಿ ಬಿ ಪಿ ಗೋಪಾಲಿಕಾ, ಗೃಹ ಕಾರ್ಯದರ್ಶಿ ನಂದಿನಿ ಚಕ್ರವರ್ತಿ, ಡಿಜಿಪಿ ರಾಜೀವ್ ಕುಮಾರ್, ಎಡಿಜಿ ವಿರುದ್ಧದ ತನ್ನ ಅವಹೇಳನ ಅರ್ಜಿಯ ತುರ್ತು ವಿಚಾರಣೆ ಕೋರಿ, ಷಹಜಹಾನ್ ಅರ್ಜಿ ಸಲ್ಲಿದ್ದಾರೆ.