ಕೆಪಿಎಸ್ಸಿ ಸದಸ್ಯೆಯಾಗಿ ರೆಡ್ಡಿಹಳ್ಳಿಯ ಡಾ.ಕಾವಲಮ್ಮ ನೇಮಕ
ಮಧುಗಿರಿ, ಮಾ. ೭- ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಪ್ರಾದ್ಯಾಪಕಿ ಡಾ. ಆರ್. ಕಾವಲಮ್ಮ ಅವರು ಕೆ.ಪಿ.ಎಸ್.ಸಿ. ಸದಸ್ಯೆಯಾಗಿ ನೇಮಕಗೊಂಡಿದ್ದಾರೆ.
ತಾಲ್ಲೂಕಿನ ಮಿಡಿಗೇಶಿ ಹೋಬಳಿ ರೆಡ್ಡಿಹಳ್ಳಿ ಗ್ರಾಮದ ನರಸಮ್ಮ ಮತ್ತು ನರಸಪ್ಪ ದಂಪತಿಗಳ ಮಗಳಾಗಿದ್ದು ಬಡ ರೈತನ ಕುಟುಂಬದಲ್ಲಿ ಜನಿಸಿದ ಡಾ.ಆರ್.ಕಾವಲಮ್ಮರವರು ತನ್ನ ಪ್ರತಿಭೆಯಿಂದ ಸ್ನಾತಕೋತ್ತರ ಪದವಿ ಪಡೆದು, ಡಾಕ್ಟರೇಟ್ ಗಳಿಸಿ ಉತ್ತಮ ಪ್ರಾಧ್ಯಾಪಕಾರಾಗಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತಿಹಾಸ ಬೋಧಿಸುತ್ತಾ ಹಲವಾರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ಕರ್ನಾಟಕ ಲೋಕಾ ಸೇವಾ ಆಯೋಗದ ಸದಸ್ಯರಾಗಿ ಕರ್ನಾಟಕ ಸರ್ಕಾರದ ಶಿಫಾರಸ್ಸಿನ ಮೇರೆಗೆ ನೇಮಕವಾಗಿದ್ದಾರೆ.
ಡಾ. ಆರ್. ಕಾವಲಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಜನ ಮನ್ನಣೆ ಗಳಿಸುವ ಮೂಲಕ ತಮ್ಮ ಪ್ರತಿಭೆ ಹೊರ ಹೊಮ್ಮಿಸುವ ನಿಟ್ಟಿನಲ್ಲಿ ವಿದ್ವಾಂಸರ ವಲಯದಲ್ಲಿ ಸ್ನೇಹ ಭಾವದಿಂದ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡು ಹಂತ ಹಂತವಾಗಿ ರಾಜ್ಯದ ಗಮನವನ್ನೇ ಸಳೆದಿದ್ದಾರೆ. ಹಾಗಾಗಿ ಇವರ ಅರ್ಹತೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ಕರ್ನಾಟಕ ಲೋಕಾಸೇವಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.