ಬಿಜೆಪಿಯತ್ತ ಸೂರ್ಯನಾರಾಯಣರೆಡ್ಡಿ ಚಿತ್ತ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಮಾ.೭- ಲೋಕಸಭೆ ಚುನಾವಣೆ ಹೊತ್ತನಲ್ಲಿಯೇ ಬಳ್ಳಾರಿಯಲ್ಲಿ ಆಪರೇಷನ್ ಬಿಜೆಪಿ ನಡೆದಿದ್ದು. ಇದಕ್ಕೆ ನಗರದ ಕಾಂಗ್ರೆಸ್ ಶಾಸಕ ಭರತರೆಡ್ಡಿ ಅವರ ತಂದೆ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಬಿಜೆಪಿ ಬಾಗಿಲು ಬಡಿದಿದ್ದಾರಂತೆ.
ನಾರಾಯಣರೆಡ್ಡಿ ಅವರು ಈ ಹಿಂದೆ ಜೆಡಿಎಸ್ ಸರ್ಕಾರವಿದ್ದಾಗ ಕುರುಗೋಡು ಶಾಸಕರಾಗಿ, ಅಂದು ಮುಖ್ಯ ಮಂತ್ರಿಯಾಗಿದ್ದ ಕುಮಾರ ಸ್ವಾಮಿ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದರು.
ನಂತರದ ಬೆಳವಣಿಗೆಯಲ್ಲಿ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರಿದ್ದರು. ಅವರ ಮಗ ಭರತ್ ರೆಡ್ಡಿ ಹಾಲಿ ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕರಾಗಿದ್ದಾರೆ.
ಕಳೆದ ಫೆ. ೨೩ ರಂದು ಬಿಜೆಪಿಯ ಮಾಜಿ ಸಚಿವ ಬೆಳಗಾವಿಯ ರಮೇಶ್ ಜಾರಕಿಹೊಳಿ ಮೂಲಕ ಮಹಾರಾಷ್ಟ್ರದ ಸಿಎಂ ಫಡ್ನವಿಸ್ ಅವರ ಜೊತೆ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಫಡ್ನವಿಸ್ ಮೂಲಕ ಬಿಜೆಪಿ ಹೈಕಮಾಂಡ ಅಮಿತ್ ಷಾ ಅವರನ್ನು ಭೇಟಿ ಮಾಡವ ಪ್ರಯತ್ನ ನಡೆದಿದೆಯಂತೆ. ಇನ್ನೂ ಈ ಬಗ್ಗೆ ಅಂತಿಮ ಮಾತುಕತೆ ನಡೆದಿಲ್ಲವಂತೆ.
ಮಾಜಿ ಶಾಸಕ ಸೂರ್ಯ ನಾರಾಯಣ ರೆಡ್ಡಿ ಅವರು ಬಿಜೆಪಿ ಸೇರ್ಪಡೆ ಯಾದರೆ, ಬಳ್ಳಾರಿ ಲೋಕಸಭಾ ಕ್ಷೇತ್ರದ ಗೆಲವು ಸಲಭ ಸಾಧ್ಯ ಎನ್ನುವ ಲೆಕ್ಕಾಚಾರವಿದೆ. ಬಳ್ಳಾರಿ ಲೋಕಸಭೆ ವ್ಯಾಪ್ತಿಯ ೮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಕ್ಷೇತ್ರದಲ್ಲಿ ಹಿಡಿತವನ್ನು ಸೂರ್ಯನಾರಾಯಣ ರೆಡ್ಡಿ ಹೊಂದಿದ್ದಾರೆ. ಈ ಹಿನ್ನಲೆಯಿಂದ ಬಿಜೆಪಿ ಕೂಡ ಸೂರ್ಯನಾರಾಯಣ ರೆಡ್ಡಿ ಬಿಜೆಪಿ ಸೇರ್ಪಡೆಗೆ ವಿರೋಧ ಕೇಳಿಬರುತ್ತಿಲ್ಲ.
ರಮೇಶ್ ಜಾರಕಿಹೊಳಿ ಮತ್ತು ಪಡ್ನವಿಸ್ ಭೇಟಿ ಬಗ್ಗೆ ಅವರ ಆಪ್ತರು ಖಚಿತ ಪಡಿಸಿದ್ದು. ಬಿಜೆಪಿ ಸೇರ್ಪಡೆ ಬಗ್ಗೆ ಮಾತ್ರ ಸ್ಪಷ್ಟಪಡಿಸಿಲ್ಲ. ಕಳೆದ ತಿಂಗಳು ಸೂರ್ಯನಾರಾಯಣ ರೆಡ್ಡಿ, ಭರತ್ ರೆಡ್ಡಿ ಮನೆ, ಕಚೇರಿ ಸೇರಿದಂತೆ ಆರು ಕಡೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಮತ್ತು ಗಾಲಿ ಜನಾರ್ಧನರೆಡ್ಡಿ ಅವರು ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ಪಡೆದಿದ್ದರಿಂದ ಶಾಸಕ ಭರತ್ ಸಹ ಬೇಸರಗೊಂಡಿದ್ದಾರೆಂಬ ಮಾತುಗಳಿವೆ. ಇಡಿ ದಾಳಿಯ ಪರಿಹಾರದ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರ ಸಲಹೆಯಂತೆ ಪಡ್ವೀಸ್ ಅವರನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿಯೂ ಇದೆ.ಈ ಬಗ್ಗೆ ಪ್ರತಿಕ್ರಿಯೆಗೆ ಸೂರ್ಯನಾರಾಯಣ ರೆಡ್ಡಿ ಅವರಿಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ.