ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಪ್ರತಿಭಟನೆ
ಕೆ.ಆರ್.ಪುರ,ಮಾ.೭-ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹದೇವಪುರ ವಲಯದ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೋರಹುಣುಸೆ ಎನ್.ವೆಂಕಟೇಶ್ ಅವರು ಮಾತನಾಡಿ ಬೆಂಗಳೂರು ಪೂರ್ವ ತಾಲ್ಲ. ದೌರ್ಜನ್ಯವಾಗಿ ಗ್ರಾಮಸ್ಥರ ಗಮನಕ್ಕೆ ಬಾರದೆ ದೇವಾಲ ಯವನ್ನು ಧ್ವಂಸ ಮಾಡಿ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ
. ಗ್ರಾಮಸ್ಥರು ತಹಶೀಲ್ದಾರ್ ಗೆ ಈ ಬಗ್ಗೆ ದೂರು ಸಲ್ಲಿಸಿದ್ದಾಗ ತಹಶೀಲ್ದಾರ್ ಸ್ಥಳಕ್ಕೆ ಬಂದು ಸರ್ವೆ ನಡೆಸಲು ಆದೇಶ ಮಾಡಿ ಅದರಂತೆ ಈ ಜಾಗವನ್ನು ಸ್ಮಶಾನಕ್ಕೆ ಸೇರಿದೆ ಎಂದು ನಾಮಫಲಕ ಸಹ ಹಾಕಿಸಿರುತ್ತಾರೆ. ಇದನ್ನು ಲೆಕ್ಕಿಸದೆ ನಾಮಫಲಕವನ್ನು ಕಿತ್ತು ಎಸೆದು ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿ ದ್ದಾರೆ. ಈ ಸಂಬಂಧ ಭೋಗನಹಳ್ಳಿ ಗ್ರಾಮಕ್ಕೆ ಸೇರಿದ ಸ್ಮಶಾನ ಜಾಗ ಒತ್ತುವರಿ ಮಾಡಿರುವ ಭೂಗಳ್ಳರ ವಿರುದ್ದ ಕ್ರಮ ಕೈಗೊಳ್ಳ ಬೇಕು. ಗ್ರಾಮದ ಜನರಿಗೆ ಅನುಕೂಲವಾಗುವಂತೆ ಸ್ಮಶಾ ನಕ್ಕೆ ಮೀಸಲಿಟ್ಟು ಕಾಂಪೌಂಡ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನಂತರ ಮಹದೇವಪುರ ವಲಯ ಆಯುಕ್ತರಾದ ಇಬ್ರಾಹಿಂ ಅವರಿಗೆ ಮನವಿ ಸಲ್ಲಿಸಿ ಸರ್ಕಾರಿ ಜಮೀನು ಒತ್ತುವರಿ ಮಾಡಲು ಭೂಗಳ್ಳರ ಜೊತೆ ಕೈಜೋಡಿಸಿರುವ ಹಾಗೂ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿ ರುವ ವರ್ತೂರು ವಾರ್ಡ್ ಎಇಇ ವೆಂಕಟೇಶ್ ಹಾಗೂ ಎಇ ಎನ್,ವೆಂಕಟೇಶ್ ರನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ರಾಮಕೃಷ್ಣ, ಜಯ ಕುಮಾರ್, ರಾಜ್ಯ ಯುವ ಘಟಕ ಅಧ್ಯಕ್ಷ ಎನ್.ವಿಜಯಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಸತ್ಯವತಿ, ಆಮ್ ಆದ್ಮಿ ಪಕ್ಷದ ಮುಖಂಡ ಮೃತ್ಯುಂಜಯ, ಭೋಗನಹಳ್ಳಿ ಸುರೇಶ್, ರಾಮಚಂದ್ರಪ್ಪ,,ಕಮಲ,ಚಂದ್ರಮ್ಮ,ಭಾಗ್ಯ, ಜಮುನಾ, ಮತ್ತಿತರರು ಹಾಜರಿದ್ದರು.