ಪ್ಯಾರ್ ಹುವಾ ಹಾಡಿಗೆ ಹೆಜ್ಜೆ ಹಾಕಿದ ಅಂಬಾನಿ ದಂಪತಿ
ಜಾಮ್ ನಗರ,ಮಾ.೪-ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಪೂರ್ವ ಸಮಾರಂಭಗಳು ಗುಜರಾತ್ ನ ಜಾಮ್ ನಗರದಲ್ಲಿ ನಡೆದವು.
ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ತಮ್ಮ ಮಗನ ಸಂಗೀತವನ್ನು ಸ್ಮರಣೀಯವಾಗಿಸಲು ವಿಶೇಷ ಪ್ರದರ್ಶನ ನೀಡಿದ್ದಾರೆ. ೧೯೫೫ ರಲ್ಲಿ ರಾಜ್ ಕಪೂರ್ ಅವರ ಹಿಟ್ ಚಿತ್ರ ಶ್ರೀ ೪೨೦ ರ ಪ್ಯಾರ್ ಹುವಾ ಇಕ್ರಾರ್ ಹುವಾ ಹಾಡಿಗೆ ನೃತ್ಯ ಇಬ್ಬರು ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ ಆಗುತ್ತಿದೆ.
ಎರಡನೇ ದಿನದ ಕಾರ್ಯಕ್ರಮದಲ್ಲಿ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಕಾರ್ಯಕ್ರಮ ನೀಡಿದರು. ಪ್ರಪಂಚದಾದ್ಯಂತದ ಅತಿಥಿಗಳು ಜಾಮ್‌ನಗರಕ್ಕೆ ಬಂದಿದ್ದಾರೆ. ಅವರಿಗಾಗಿ ವಿಶೇಷ ವಿಮಾನ ಸೇವೆಗೆ ವ್ಯವಸ್ಥೆ ಮಾಡಲಾಗಿದೆ.
ಮಾಹಿತಿ ಪ್ರಕಾರ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪೂರ್ವ ವಿವಾಹಕ್ಕೆ ಬರುವ ಅತಿಥಿಗಳಿಗಾಗಿ ಸುಮಾರು ೨೦ ವಿಮಾನಗಳನ್ನು ವ್ಯವಸ್ಥೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖೇಶ್ ಅಂಬಾನಿ ಕಂಪನಿಯ ಸುಮಾರು ಎಂಟರಿಂದ ಹತ್ತು ವಿಮಾನಗಳ ಹೊರತಾಗಿ ವಿದೇಶಿ ಕಂಪನಿಯಿಂದಲೂ ವಿಶೇಷ ವಿಮಾನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ದೇಶ ಮತ್ತು ಪ್ರಪಂಚದ ಅತಿಥಿಗಳನ್ನು ಜಾಮ್‌ನಗರಕ್ಕೆ ಕರೆತರುವುದು ಮತ್ತು ನಂತರ ಅವರನ್ನು ಜಾಮ್‌ನಗರದಿಂದ ಅವರ ದೇಶಕ್ಕೆ ಬಿಡುವುದು ಮಾತ್ರ ಅವರ ಕೆಲಸವಾಗಿತ್ತು.
ಮಾರ್ಚ್ ೩ ರಂದು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಜಾಮ್‌ನಗರಕ್ಕೆ ಆಗಮಿಸಿದ್ದಾರೆ.
ಈ ಸೂಪರ್ ಪ್ರೀ ವೆಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿಐಪಿಗಳಿಗಾಗಿ ಮಾರ್ಚ್ ೧ ರಿಂದ ಮಾರ್ಚ್ ೩ ರವರೆಗೆ ಸುಮಾರು ೩೫೦ ವಿಮಾನಗಳ ಹಾರಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ. . ಇದೀಗ ಇಲ್ಲಿಂದ ಸ್ಟಾರ್ ಗಳು, ವಿಐಪಿಗಳ ಟೇಕ್ ಆಫ್ ಪ್ರಕ್ರಿಯೆ ಆರಂಭವಾಗಿದೆ. ಇದು ಮಾರ್ಚ್ ೪ ರ ತಡರಾತ್ರಿಯವರೆಗೆ ಮುಂದುವರಿಯುತ್ತದೆ. ವಿದೇಶದಿಂದ ಬಂದ ಅನೇಕ ವಿಐಪಿ ಅತಿಥಿಗಳು ಇಲ್ಲಿಂದ ತೆರಳಿದ್ದಾರೆ. ಕತಾರ್ ಪ್ರಧಾನಿ ಕೂಡ ಇಲ್ಲಿಂದ ಹೊರಟಿದ್ದಾರೆ, ಆದರೆ ಪ್ರಸ್ತುತ ಭೂತಾನ್ ರಾಜ ಇಲ್ಲಿ ಈವೆಂಟ್ ಆನಂದಿಸುತ್ತಿದ್ದಾರೆ.