ಕೆಲಸಕ್ಕೆ ಕಚೇರಿಗೆ ಬನ್ನಿ: ಐಟಿ ಕಂಪನಿ ಸೂಚನೆ
ನವದೆಹಲಿ,ಮಾ.೪-ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಅಗತ್ಯವಿರುವ ಸನ್ನಿವೇಶದಲ್ಲಿ ಉದ್ಯೋಗಿಗಳನ್ನು ೧೦೦ ಪ್ರತಿಶತದಷ್ಟು ಮನೆಯಿಂದ ಕೆಲಸ ಮಾಡಲು ಅನುಮತಿಸಿದ ದೃತ್ಯ ಐಟಿ ಕಂಪನಿಗಳು ಇದೀಗ ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಇಂತಿಷ್ಟು ದಿನ ಕಚೇರಿಗೆ ಬರುವಂತೆ ಹೇಳಿದೆ.
ಹಾಗೆ ಮಾಡದಿದ್ದಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ೧೦ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ರವಾನಿಸಿದೆ.
ಟಿಸಿಎಸ್ ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದೆ.
ಭಾರತದ ಅತಿದೊಡ್ಡ ಐಟಿ ಕನ್ಸಲ್ವೆನ್ಸಿ ಕಂಪನಿಯು ಮಾರ್ಚ್ ೩೧ ರೊಳಗೆ ನೌಕರರು ವಾರದಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಚೇರಿಯಿಂದ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಇನ್ಫೋಸಿಸ್ ನೌಕರರಿಗೆ ತಿಂಗಳಿಗೆ ಕನಿಷ್ಠ ೧೦ ದಿನಗಳ ಕಾಲ ಕಚೇರಿಯಿಂದ ಕೆಲಸ ಮಾಡಲು ಸೂಚಿಸಿದೆ, ಇದು ವಾರಕ್ಕೆ ಕನಿಷ್ಠ ಮೂರು ದಿನಗಳಿಗೆ ಸಮನಾಗಿರುತ್ತದೆ. ಟೀಮ್‌ವರ್ಕ್ ಮತ್ತು ಉದ್ಯೋಗಿ ಯೋಗಕ್ಷೇಮವನ್ನು ಹೆಚ್ಚಿಸುವ ಉದ್ದೇಶದಿಂದ ಕಂಪನಿಯು ನೀತಿಯಲ್ಲಿ ಬದಲಾವಣೆಯನ್ನು ಸಹ ಘೋಷಿಸಿತು.
ಎಚ್ ಸಿಎಲ್ ಟೆಕ್ ಕಛೇರಿಯಿಂದ ಕೆಲಸವನ್ನು ಕಡ್ಡಾಯಗೊಳಿಸಿದೆ, ನೌಕರರು ವಾರಕ್ಕೆ ಕನಿಷ್ಠ ಮೂರು ದಿನಗಳ ಕಾಲ ಗೊತ್ತುಪಡಿಸಿದ ಕಚೇರಿಗಳಿಂದ ಕೆಲಸ ಮಾಡಬೇಕಾಗುತ್ತದೆ. ಪಾಲಿಸದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.
ಮತ್ತೊಂದು ಉನ್ನತ ಐಟಿ ಸಲಹಾ ಕಂಪನಿ ವಿಪ್ರೋ ನೌಕರರು ವಾರಕ್ಕೆ ಕನಿಷ್ಠ ಮೂರು ದಿನಗಳ ಕಾಲ ಕಚೇರಿಯಲ್ಲಿ ದೈಹಿಕವಾಗಿ ಹಾಜರಿರಬೇಕು ಇಲ್ಲದಿದ್ದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದಿದೆ.
ಕಾಗ್ನಿಜೆಂಟ್ ಭಾರತದಲ್ಲಿನ ತನ್ನ ಉದ್ಯೋಗಿಗಳಿಗೆ ವಾರಕ್ಕೆ ಕನಿಷ್ಠ ಮೂರು ಬಾರಿ ಕಚೇರಿಯಿಂದ ಕೆಲಸ ಮಾಡುವಂತೆ ಸೂಚಿಸಿದ ಇತ್ತೀಚಿನ ಕಂಪನಿಯಾಗಿದೆ.
ಬಡ್ತಿಗಳನ್ನು ಬಯಸುವಿರಾ, ಕಛೇರಿಗೆ ಬನ್ನಿ – ಇದು ಸ್ಪಷ್ಟವಾಗಿ ತನ್ನ ಉದ್ಯೋಗಿಗಳಿಗೆ ಅಮೇಜಾನ್ ನ ಸಂದೇಶವಾಗಿದೆ. ಬಡ್ತಿಯ ಅವಕಾಶಗಳನ್ನು ಪಡೆಯಲು ಅಮೆಜಾನ್ ಉದ್ಯೋಗಿಗಳನ್ನು ವಾರದಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಚೇರಿಯಿಂದ ಕೆಲಸ ಮಾಡಲು ಅನುವು ಮಾಡಿದೆ. ಈ ಅಗತ್ಯವನ್ನು ಪೂರೈಸಲು ವಿಫಲರಾದ ಉದ್ಯೋಗಿಗಳನ್ನು ವಜಾಗೊಳಿಸುವ ಅಧಿಕಾರವನ್ನು ವ್ಯವಸ್ಥಾಪಕರಿಗೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಮೆಟಾ ನೌಕರರು ವಾರದಲ್ಲಿ ಮೂರು ದಿನಗಳ ಕಾಲ ಕಛೇರಿಯಿಂದ ಕೆಲಸ ಮಾಡಬೇಕಾಗುತ್ತದೆ, ಇಲ್ಲದಿದ್ದರೆ ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂಬ ಎಚ್ಚರಿಕೆ ನೀಡಿದೆ.
ಉದ್ಯೋಗಿಗಳನ್ನು ಕಚೇರಿಗೆ ಬರುವಂತೆ ಕೇಳಿದ ಮೊದಲ ಕಂಪನಿಗಳಲ್ಲಿ ಮೆಟಾ ಕೂಡ ಸೇರಿದೆ. ಹೆಚ್ಚಿನ ಉದ್ಯೋಗಗಳನ್ನು ಕಡಿತಗೊಳಿಸಿದ ಕಂಪನಿಗಳಲ್ಲಿ ಇದು ಕೂಡ ಒಂದು.
ಕಚೇರಿಯ ನೀತಿಯ ಸಾಕಷ್ಟು ಕಟ್ಟುನಿಟ್ಟಾದ ಕಂಪನಿಗಳಲ್ಲಿ ಗೋಗಲ್ ಒಂದಾಗಿದೆ. ನೌಕರರು ವಾರದಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಚೇರಿಗೆ ಬರಬೇಕು, ಹಾಜರಾತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಹೊಸ ನಿಯಮಗಳನ್ನು ಪಾಲಿಸದೇ ಇರುವುದು ಅನಿರ್ದಿಷ್ಟ ಕ್ರಮಗಳಿಗೆ ಕಾರಣವಾಗಬಹುದು ಎಂದಿದೆ
ಐಬಿಎಂ ಉದ್ಯೋಗಿಗಳನ್ನು ಕಚೇರಿಗೆ ಬರಲು ತಿಳಿಸಿದೆ ಅಥವಾ ಕೆಲಸ ಬಿಡಲು ಕೇಳಿದೆ. ಜ್ಞಾಪಕ ಪತ್ರದಲ್ಲಿ, ಹಿರಿಯ ವಿಪಿ ಜಾನ್ ಟ್ರ್ಯಾಂಗರ್ ಅವರು ಯುಎಸ್ ನಲ್ಲಿ ನೆಲೆಗೊಂಡಿರುವ ಎಲ್ಲಾ ಮ್ಯಾನೇಜರ್‌ಗಳು ಈಗ ಪ್ರತಿ ವಾರ ಕನಿಷ್ಠ ಮೂರು ದಿನಗಳವರೆಗೆ ಕಚೇರಿ ಅಥವಾ ಕ್ರೈಂಟ್ ಸ್ಥಳಕ್ಕೆ ವರದಿ ಮಾಡಬೇಕು ಎಂದು ಹೇಳಿದ್ದಾರೆ.